ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಶ್ರೀ ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಎಕ್ಸಿಕ್ಯೂಟಿವ್ ಲಾಂಜ್ ಆರಂಭಿಸಲಾಗಿದ್ದು, ಕೊಂಕಣ ರೈಲ್ವೇ ಮುಂಬೈನ ಸಿಎಂಡಿ ಸಂತೋಷ್ ಕುಮಾರ್ ಝಾ ಅವರು ನೂತನ ಸೌಕರ್ಯವನ್ನು ಉದ್ಘಾಟಿಸಿದರು.
ಈ ವೇಳೆ ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ, ಕಾರವಾರ ವಲಯದ ಆರ್.ಆರ್.ಎಂ ಆಶಾ ಶೆಟ್ಟಿ, ಸೀನಿಯರ್ ರೀಜಿನಲ್ ಟ್ರಾಫಿಕ್ ಮ್ಯಾನೇಜರ್ ದಿಳಿಪ್ ಡಿ. ಭಟ್, ಡಿಪ್ಯೂಟಿ ಸಿಸಿಎಂ ಆರ್.ಡಿ. ಗೋಲಬ್, ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ, ಡೆಪ್ಯೂಟಿ ಚೀಫ್ ಇಂಜಿನಿಯರ್ ವಿಜಯ್ ಕುಮಾರ್, ರೈಲ್ವೆ ಬಳಕೆದಾರರ ಸಮಾಲೋಚನಾ ಸಮಿತಿಯ ಮಾಜಿ ಸದಸ್ಯ ಕೆ. ವೆಂಕಟೇಶ್ ಕಿಣಿ ಮೊದಲಾದವರು ಉಪಸ್ಥಿತರಿದ್ದರು.
ಎಕ್ಸಿಕ್ಯೂಟಿವ್ ಲಾಂಜ್ʼನಲ್ಲಿ ಎಸಿ, ಉತ್ತಮ ಆಸನ, ವೈ-ಫೈ, ಸುದ್ದಿ ಪತ್ರಿಕೆ ಹಾಗೂ ಪುಸ್ತಕ ಹೊಂದಿರುವ ಓದುಗರ ಗ್ಯಾಲರಿ ಹಾಗೂ ಟಿ.ವಿ ಇರಲಿದೆ. ಜೊತೆಗೆ ಕೆಫೆ, ಚಾರ್ಚಿಂಗ್ ಪಾಯಿಂಟ್ ಮೊದಲಾದ ಸೌಲಭ್ಯವಿದ್ದು, ಪ್ರಯಾಣಿಕರು ಪ್ರತಿಗಂಟೆಗೆ ರೂ.50 ಪಾವತಿಸಿ ರೈಲು ಪ್ರಯಾಣದ ಮೊದಲು ಇದರ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ.