ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ತ್ರಾಸಿ ಗ್ರಾಮದ ರಾಮಂದಿರದ ಬಳಿ ಗಾರೆ ಕೆಲಸ ನಿರ್ವಹಿಸುತ್ತದ್ದ ಕಂದಾವರ ಗ್ರಾಮದ ಚಂದ್ರಶೇಖರ್ (61) ಅವರು ಇದ್ದಕ್ಕಿದಂತೆ ಪ್ರಜ್ಞಾಹೀನರಾಗಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಬೆಳಿಗ್ಗೆ ಕೆಲಸಕ್ಕೆಂದು ಅವರು ಹೋಗಿದ್ದು, ಮಧ್ಯಾಹ್ನ ಕೆವ ನಿರ್ವಹಿಸುತ್ತಿದ್ದ ವೇಳೆ ಮೂರ್ಚೆ ಹೋಗಿದ್ದರು. ಅವರನ್ನು ಕೂಡಲೇ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆತಂದಾಗ ಪರೀಕ್ಷಿಸಿದ ವೈದ್ಯರು, ಚಂದ್ರಶೇಖರ್ ಮೃತ ಪಟ್ಟಿದ್ದಾಗಿ ತಿಳಿಸಿದರು.
ಮೃತರ ಪುತ್ರ ಪ್ರಸಾದ್ ನೀಡಿದ ದೂರಿನಂತೆ ಗಂಗೊಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.