ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹಳ್ಳಾಡು ಗ್ರಾಮದ ನಿವಾಸಿ ಸುರೇಶ್ (43) ಅವರು ಹಳದಿ ಕಾಯಿಲೆಗೊಳಗಾಗಿ ಇತ್ತೀಚಿಗೆ ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ 26 ವರ್ಷಗಳಿಂದ ಕ್ಯಾಟರಿಂಗ್ ಮಾಡಿತ್ತಿದ್ದ ಸುರೇಶ್ ಅವರು ಆರೋಗ್ಯ ಸಮಸ್ಯೆಯಿಂದ ಊರಿಗೆ ಬಂದಿದ್ದರು. ಮಾ.22ರ ಸಂಜೆ ತಲೆ ತಿರುಗಿ ಬಿದ್ದಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ರಾತ್ರಿ ಸಾವನ್ನಪ್ಪಿದ್ದಾರೆ.
ಅವರು ಅವಿವಾಗಿತರಾಗಿದ್ದರು. ತಂದೆ ಮಹಾಬಲ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










