ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಪೇಜಾವರ ಅಧೋಕ್ಷಜ ಮಠ ಉಡುಪಿ, ಅಖಿಲ ಭಾರತ ಮಾದ್ವ ಮಹಾಮಂಡಲ, ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಬೆಂಗಳೂರು ಹಾಗೂ ಅನೇಕ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಪೆರಣಂಕಿಲ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಲಿರುವ ಶ್ರೀ ರಾಮೋತ್ಸವ ಪ್ರಯುಕ್ತ ದಶಕೋಟಿ ರಾಮತಾರಕ ಮಂತ್ರ ಜಪಯಜ್ಞ, ಶ್ರೀ ರಾಮತಾರಕ ಮಂತ್ರ ಜಪಾನುಷ್ಠಾನ ಪರ್ವ ಕಾರ್ಯಕ್ರಮ ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದಲ್ಲಿ ಇತ್ತೀಚಿಗೆ ನಡೆಯಿತು.
ಗಂಗೊಳ್ಳಿ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಪ್ರಧಾನ ಅರ್ಚಕ ಎಸ್. ವೆಂಕಟರಮಣ ಆಚಾರ್ಯ ಧಾರ್ಮಿಕ ವಿಧಿವಿಧಾನ ನೆರವೇರಿಸಿ ಆಶೀರ್ವದಿಸಿದರು.
ಎನ್. ಪ್ರಕಾಶ್ ನಾಯಕ್ ಗಂಗೊಳ್ಳಿ, ಕೃಷ್ಣಮೂರ್ತಿ ಕಿಣಿ ಬೆಂಗಳೂರು, ಶಿಶು ಮಂದಿರದ ಅಧ್ಯಕ್ಷ ಬಿ. ರಾಘವೇಂದ್ರ ಪೈ, ಸಂಚಾಲಕ ಡಾ. ಕಾಶೀನಾಥ ಪೈ, ಕಾರ್ಯದರ್ಶಿ ಅಶ್ವಿತಾ ಜಿ. ಪೈ, ಮಾಜಿ ಅಧ್ಯಕ್ಷರಾದ ಸವಿತಾ ಎನ್. ದೇವಾಡಿಗ, ಬಿ. ಲಕ್ಷ್ಮೀಕಾಂತ ಮಡಿವಾಳ, ಶಿಶು ಮಂದಿರದ ಸದಸ್ಯರಾದ ವಿಜಯಶ್ರೀ ವಿ. ಆಚಾರ್ಯ, ವಸಂತಿ ಎನ್. ಖಾರ್ವಿ, ಗಾಯತ್ರಿ ಕೊಡಂಚ, ಮಾತಾಜಿ ಪ್ರೇಮಾ, ಮಾತಾಜಿ ರತ್ನ, ಮಕ್ಕಳ ಪೋಷಕರು, ಮಾತೆಯರು, ಶಿಶು ಮಂದಿರದ ಪುಟಾಣಿಗಳು, ಮೊದಲಾದವರು ಉಪಸ್ಥಿತರಿದ್ದರು.