ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೈಲು ಹಳಿಯ ಬದಿಯಲ್ಲಿ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ರೈಲು ಢಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಾ.24ರಂದು ಸಂಜೆ ವೇಳೆ ಗಂಗೊಳ್ಳಿಯ ಕುಂದಬಾರಂದಾಡಿ ಗ್ರಾಮದ ಹೂವಿನ ಕಂಬಳಗದ್ದೆ ಎಂಬಲ್ಲಿ ನಡೆದಿದೆ. ತ್ರಾಸಿ ಗ್ರಾಮದ ಹೆರಿಯ(70) ಮೃತ ದುರ್ದೈವಿ.
ಕೂಲಿ ಕೆಲಸವನ್ನು ಮುಗಿಸಿಕೊಂಡು ಮನೆಗೆ ವಾಪಾಸ್ಸು ರೈಲ್ವೇ ಹಳಿಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಹೆರಿಯ ಅವರಿಗೆ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ರೈಲು ಢಿಕ್ಕಿ ಹೊಡೆದು ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಗಂಗೋಳ್ಳಿ ಅಂಬ್ಯುಲೆನ್ಸ್ ಚಾಲಕ ಮೊಹಮ್ಮದ್ ಇಬ್ರಾಹಿಂ ಅವರ ತಂಡ, ಪಿಎಸ್‌ಐ ಬಸವ ಕನಶೆಟ್ಟಿ ಹಾಗೂ ಸ್ಥಳೀಯರು ಸುಮಾರು ಒಂದೂವರೆ ಕಿ.ಮೀ ತನಕ ಕಾಲುದಾರಿಯಲ್ಲೇ ನಡೆದು ಅಂಬ್ಯುಲೆನ್ಸ್ ತನಕ ಮೃತದೇಹವನ್ನು ಸಾಗಿಸಿ ಅಲ್ಲಿಂದ ಕುಂದಾಪುರ ಶವಾಗಾರಕ್ಕೆ ಕೊಂಡೊಯ್ಯಲಾಯಿತು. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೆ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.