ಕುಂದಾಪ್ರ ಡಾಟ್ ಕಾಂ ಲೇಖನ.
ಹಿಂದೂಗಳಿಗೆ ಯುಗಾದಿ ಎಂದರೆ ಹೊಸ ವರ್ಷದ ಆರಂಭ. ಕರ್ನಾಟಕದ ಬಹುಭಾಗದ ಜನರು ಮತ್ತು ಆಂಧ್ರ ಪ್ರದೇಶದವರು ಚಾಂದ್ರಮಾನ ಯುಗಾದಿಯನ್ನು ಆಚರಿಸುತ್ತಾರೆ. ಈ ವರ್ಷ ಯುಗಾದಿ ಹಬ್ಬ ಮಾ. 30ರಂದು ಆಚರಿಸಲಾಗುತ್ತದೆ. ಈ ಹಬ್ಬದಂದು ಏನು ಮಾಡಿದರೆ ಒಳ್ಳೆಯದು ಎಂದು ನಮ್ಮ ಹಿರಿಯರು ವಿವರಿಸುತ್ತಾರೆ ಓದಿ
ಯುಗಾದಿಯಂದು ಮಾಡಬೇಕಾದ ಶುಭ ಕೆಲಸಗಳು:
* ಯುಗಾದಿಯನ್ನು ಶುಭ ದಿನವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಹಿಂದಿನ ದಿನ ಮನೆಯನ್ನು ಸ್ವಚ್ಛಗೊಳಿಸಬೇಕು.
* ಯುಗಾದಿಯಂದು ಬ್ರಾಹ್ಮಿ ಮುಹೂರ್ತದಲ್ಲಿ ಏಳಬೇಕು.
* ಮನೆಯನ್ನು ಸ್ವಚ್ಛಗೊಳಿಸಿ ಮತ್ತು ದೈನಂದಿನ ಕೆಲಸಗಳನ್ನು ಪೂರ್ಣಗೊಳಿಸಿ. ನಿಮ್ಮ ಮನೆಯನ್ನು ಹೂವಿನಿಂದ ಜೊತೆಗೆ ಮಾವಿನ ಎಲೆಯ ತೋರಣದಿಂದ ಅಲಂಕರಿಸಿ.
* ನೀವು ನಿಮ್ಮ ಕೂದಲಿಗೆ ಎಳ್ಳೆಣ್ಣೆಯನ್ನು ಹಚ್ಚಿ ನಂತರ ಸ್ನಾನದ ನೀರಿಗೆ ಒಂದು ಚಿಟಿಕೆ ಅರಿಶಿನವನ್ನು ಸೇರಿಸಿ ಸ್ನಾನ ಮಾಡಿ.
* ಹೊಸ ಬಟ್ಟೆಗಳನ್ನು ಧರಿಸಬೇಕು. ನಿಮ್ಮ ಹಣೆಯ ಮೇಲೆ ಕುಂಕುಮ ಇರಲಿ.
* ಶುದ್ಧ ಮನಸ್ಸಿನಿಂದ ದೇವರನ್ನು ಪೂಜಿಸಿ.
ಯುಗಾದಿಯಂದು ಮಾಡಬಾರದ ಕೆಲಸಗಳಿವು:
ಜಗಳವಾಡುವುದು, ಹಣಕಾಸಿನ ವ್ಯವಹಾರಗಳು, ಮಾಂಸಾಹಾರ ಮತ್ತು ಮದ್ಯಪಾನ, ಕೂದಲು ಮತ್ತು ಉಗುರು ಕತ್ತರಿಸುವುದು, ಹರಿದ ಬಟ್ಟೆ ಧರಿಸುವುದು ಮುಂತಾದ ಕೆಲಸಗಳನ್ನು ಮಾಡಬಾರದು.