ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯಕ್ಷಗಾನ ಹಿನ್ನೆಲೆಯ ವೀರ ಚಂದ್ರಹಾಸ ಚಿತ್ರ ತಂಡದಿಂದ ಕುಂಭಾಶಿ ಆನೆಗುಡ್ಡೆಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ಯಕ್ಷಗಾನ ಕಲಾವಿದರು, ಚಿತ್ರದಲ್ಲಿ ನಟಿಸಿದ ಕಲಾವಿದರು, ಭಾಗವತರಿಗೆ ಸಮ್ಮಾನ ಕಾರ್ಯಕ್ರಮವು ಇತ್ತೀಚಿಗೆ ನಡೆಯಿತು.
ಯಕ್ಷಗಾನ ಕಲಾವಿದರಾದ ನರಾಡಿ ಭೋಜರಾಜ ಶೆಟ್ಟಿ, ಉಳ್ಳೂರು ನಾರಾಯಣ ನಾಯ್ಕ, ಸುಧಾಕರ ಕೊಠಾರಿ, ವಿಶ್ವನಾಥ್ ಆಚಾರ್ಯ ತಾರಿಕೊಡ್ಲು, ಪ್ರವೀಣ್ ಗಾಣಿಗ ಕೆಮ್ಮಣ್ಣು, ಕೃಷ್ಣ ಗಾಣಿಗ ಹೊಸಂಗಡಿ, ಸದಾಶಿವ ಅಮೀನ್ ಕೊಕ್ಕರ್ಣೆ, ಆಜ್ರಿ ಗೋಪಾಲ ಗಾಣಿಗ, ಸದಾಶಿವ ಶೆಟ್ಟಿ ಯರುಕೋಣೆ ಹಾಗೂ ಹಿರಿಯ ಭಾಗವತ ಸುರೇಶ್ ಶೆಟ್ಟಿ ಶಖಮರನಾರಾಐಣ ಅವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಚಿತ್ರದಲ್ಲಿ ಅಭಿನಯಿಸಿದ ಕಲಾವಿದರಾದ ಶಿಥಿಲ್ ಶೆಟ್ಟಿ ಐರೆಬೈಲ್, ಪ್ರಸನ್ನ ಶೆಟ್ಟಿಗಾರ್, ರವೀಂದ್ರ ದೇವಾಡಿಗ ಕಮಲಶಿಲೆ, ನವೀನ್ ಶೆಟ್ಟಿ ಐರೆಬೈಲ್, ಶ್ವೇತಾ ಅರೆಹೊಳೆ , ಗೋವಿಂದ ಸಾಲಿಮಕ್ಕಿ, ಶೇಖರ್ ಶೆಟ್ಟಿ ಯಳಬೇರು, ಉದಯ ಹೆಗಡೆ ಕಡಬಾಳ್, ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ, ಪ್ರಸಾದ್ ಮೊಗೆಬೆಟ್ಟು, ಮದ್ದಲೆ ವಾದಕ ವಿಶ್ವಂಭರ ಅಲ್ಲೆ ಐರೋಡಿ, ಸುನೀಲ್ ಕುಮಾರ್, ಆಯೋಜಕ ನಾಗರಾಜ್ ಶೆಟ್ಟಿ ನೈಕಂಬಳ್ಳಿ ಅವರನ್ನು ಗೌರವಿಸಲಾಯಿತು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಚಿತ್ರರಂಗದಲ್ಲಿ ಪ್ರಯೋಗಾತ್ಮಕ ಸಿನೆಮಾಗಳಿಗೆ ವಿಶೇಷ ಆದ್ಯತೆಯಿದೆ. ನಮ್ಮೂರಿನ ಹೆಮ್ಮೆಯ ರವಿ ಬಸ್ರೂರು ಅವರು ಅದರಲ್ಲಿ ಎತ್ತಿದ ಕೈ. ಕರಾವಳಿಯ ಯಕ್ಷಗಾನವನ್ನು ವಿಶ್ವಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಬೆಳ್ಳಿತೆರೆ ಮೇಲೆ ತರುವ ಪ್ರಯತ್ನ ನಿಜಕ್ಕೂ ಅದ್ಭುತವಾದುದು. ಎಲ್ಲರ ಸಹಕಾರವಿರಲಿ, ಚಿತ್ರ ದೊಡ್ಡ ಮಟ್ಟಕ್ಕೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ ಮಾತನಾಡಿ, ಇದೊಂದು ಹೊಸ ಪ್ರಯತ್ನ. ರವಿ ಬಸ್ರೂರು ಅವರು ಇನ್ನಷ್ಟು ಸಾಧನೆ ಮಾಡುವಂತಾಗಲಿ. ಯಕ್ಷಗಾನ, ಸಿನೆಮಾ, ಸಂಗೀತ ಮೂರರಲ್ಲೂ ಸರ್ವಶ್ರೇಷ್ಠರಾಗಲಿ ಎಂದು ಶುಭಕೋರಿದರು.
ವೀರ ಚಂದ್ರಹಾಸ ಚಿತ್ರದ ನಿರ್ದೇಶಕ ರವಿ ಬಸ್ರೂರು, ಕುಂದಾಪುರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಡಾ. ದೀಪ ಶೆಟ್ಟಿ ಬಾಕೂರು, ಹಟ್ಟಿಯಂಗಡಿ ಮೇಳದ ರಂಚಿತ್ ಶೆಟ್ಟಿ ವಕ್ವಾಡಿ ಉಪಸ್ಥಿತರಿದ್ದರು.