ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ನಾದಾಮೃತ ಕಲಾದೀವಿಗೆ ಎನ್ನುವ ಸಂಸ್ಥೆಯ ಮೂಲಕ ರಾಘವೇಂದ್ರ ಹೆಗಡೆ ಯಲ್ಲಾಪುರ ಅವರು ಕಳೆದ ಐದು ವರ್ಷಗಳಿಂದ ನೀಡುತ್ತಿರುವ ದಿ. ನಗರ ಸುಬ್ರಹ್ಮಣ್ಯ ಆಚಾರ್ ಇವರ ಸ್ಮರಣಾರ್ಥ ಪ್ರಶಸ್ತಿಯನ್ನು ಖ್ಯಾತ ಭಾಗವತ ದಿ. ಪ್ರಾಚಾರ್ಯ ನಾರಣಪ್ಪ ಉಪ್ಪೂರರ ಪುತ್ರ ಮದ್ದಲೆವಾದಕ ಸುರೇಶ ಉಪ್ಪೂರು ಅವರಿಗೆ ಇತ್ತೀಚಿಗೆ ಪಾರಂಪಳ್ಳಿಯ ರಾಘವೇಂದ್ರ ಹೆಗಡೆ ಸ್ವಗೃಹದಲ್ಲಿ ಪ್ರದಾನಿಸಲಾಯಿತು.
ಸಭೆಯಲ್ಲಿ ಹಂಗಾರಕಟ್ಟೆ ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್, ಆದರ್ಶ ಆಸ್ಪತ್ರೆಯ ವೈದ್ಯರಾದ ಡಾ. ಆದರ್ಶ ಹೆಬ್ಬಾರ್, ಉಪನ್ಯಾಸಕ ಪ್ರೊ. ಪವನ್ ಕಿರಣಕೆರೆ, ಕೆ. ಎಂಸಿ ವೈದ್ಯರಾದ ಡಾ. ಕೌಶಿಕ್ ಉರಾಳ್, ಕಾರ್ಯಕ್ರಮ ಸಂಯೋಜಕ ರಾಘವೇಂದ್ರ ಹೆಗಡೆ, ಪತ್ನಿ ನಮನ ಹೆಗಡೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರಸಿದ್ಧ ಕಲಾವಿದರಿಂದ ಗಾನವೈಭವ ಕಾರ್ಯಕ್ರಮ ನಡೆಯುತು.
ಗಾನವೈಭವದಲ್ಲಿ ಭಾಗವತರಾದ ಸುರೇಶ ಶೆಟ್ಟಿ ಶಂಕರನಾರಾಯಣ, ಪ್ರಸನ್ ಭಟ್ ಬಾಳ್ಕಲ್, ಸುಧೀರ ಭಟ್ ಪೆರ್ಡೂರು, ಎನ್.ಜಿ ಹೆಗಡೆ ಯಲ್ಲಾಪುರ, ಶಿವಾನಂದ ಕೋಟ ಭಾಗವಹಿಸಿದರು.










