ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಅಮಾಯಕ ಮುಗ್ಧ 27 ಜನರು ಬಲಿಯಾಗಿದ್ದು ತೀವ್ರ ದುಃಖದ ವಿಚಾರವಾಗಿದೆ. ಇಂತಹ ನೀಚ ಕೃತ್ಯದ ಹಿಂದೆ ಇರುವವರ ವಿರುದ್ದ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಬೈಂದೂರು ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಬ್ಭೀರ್ ಬೈಂದೂರು ಅವರು ಹೇಳಿದರು.
ಈ ವಿಷಯದಲ್ಲಿ ಜಾತಿ, ಧರ್ಮ ಮತ್ತು ಪಕ್ಷ ನೋಡದೆ ಎಲ್ಲರೂ ಒಂದಾಗಿ ಸರಕಾರಕ್ಕೆ ಬೆಂಬಲ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇಂತಹ ನೀಚ ಉಗ್ರವಾದವನ್ನು ಯಾವುದೇ ಧರ್ಮ ಒಪ್ಪಿಕೊಳ್ಳುವುದಿಲ್ಲ ಇದೊಂದು ಅಧರ್ಮದ ಕೆಲಸವಾಗಿದೆ. ದೇಶದ ಸಾಮರಸ್ಯವನ್ನು ಹತ್ತಿಕ್ಕುವ ಉಗ್ರ ಕಿಡಿಗೇಡಿಗಳ ಹೇಡಿತನದ ವಿರುದ್ಧ ಕೇಂದ್ರ ಸರಕಾರ ಕೂಡಲೇ ಕ್ರಮಗೊಳ್ಳಬೇಕು.
ಈ ರೀತಿಯ ಭದ್ರತಾ ವೈಪಲ್ಯದಿಂದಾಗಿ ಮತ್ತೆ ಉಗ್ರರರ ಅಟ್ಟಹಾಸ ಮರುಕಳಿಸಿದಂತೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರದ ಮೇಲಿದೆ. ಈ ಕೂಡಲೇ ಪ್ರವಾಸಿಗರು ಮತ್ತು ನಾಗರೀಕರ ರಕ್ಷಣೆಗೆ ಸರಕಾರ ಮುಂದೆ ಬರಬೇಕು ಹಾಗಾಗಿ ಕೇಂದ್ರ ಸರಕಾರ ಭಯೋತ್ಪಾದನೆ ನಿರ್ಮೂಲನೆ ಮಾಡುತ್ತೇವೆ ಸುಳ್ಳು ಹೇಳುವ ಬದಲು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.










