ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಚಂಡೀಗಢದಲ್ಲಿ ನಡೆಯುತ್ತಿರುವ ಇಂಡಿಯನ್ ಓಪನ್ ಅಥ್ಲೆಟಿಕ್ಸ್ ಕೂಟದ 2ನೇ ಆವೃತ್ತಿಯಲ್ಲಿ ಬೈಂದೂರಿನ ಮಣಿಕಂಠ ಒಳಗೊಂಡ ರಿಲಯನ್ಸ್ ಪುರುಷರ ತಂಡ 4X100 ರಿಲೇ ತಂಡ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದೆ.
ಪುರುಷರ ರಿಲೇ ಫೈನಲ್‌ನಲ್ಲಿ ಕರ್ನಾಟಕದ ಮಣಿಕಂಠ ಹೋಬಳಿದಾರ್ ಹಾಗೂ ವಿವಿಧ ರಾಜ್ಯಗಳ ಗುರುವೀಂದರ್ ಸಿಂಗ್, ಅನಿಮೇಶ್ ಕುಜುರ್ ಹಾಗೂ ಅರ್ಮನ್ ಬೋರ್ಗೋಹೈನ್ ಒಳಗೊಂಡ ತಂಡ 38.69 ಸೆಕೆಂಡ್ ಗಳಲ್ಲಿ ಗುರಿ ತಲುಪಿ ನೂತನ ದಾಖಲೆ ರಚಿಸಿತು. 2010ರಲ್ಲಿ 38.89 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿದ್ದು, ಹಿಂದಿನ ದಾಖಲೆ ಆಗಿದೆ.
2023ರಲ್ಲಿ ನಡೆದ 62ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಸರ್ವಿಸಸ್ ತಂಡವನ್ನು ಪ್ರತಿನಿಧಿಸಿದ್ದ ಮಣಿಕಂಠ ಹೋಬಳಿದಾರ್ ಅವರು, 100ಮೀ ಓಟದಲ್ಲಿ ಭಾರತದ ಅತ್ಯಂತ ವೇಗದ ಓಟಗಾರರಾಗಿ ದಾಖಲೆ ಮಾಡಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಬೈಂದೂರು ಪಡುವರಿಯ ಮಂಜುನಾಥ ಹೋಬಳಿದಾರ್ ಹಾಗೂ ದಿ. ಸುಂದರಿ ಅವರ ಪುತ್ರರಾದ ಮಣಿಕಂಠ ಅವರು 2020ರಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅಥ್ಲೆಟಿಕ್ಸ್ನಲ್ಲಿ ವಿವಿಧ ಪದಕ ಗಳಿಸಿದ್ದಾರೆ.
ಇದನ್ನೂ ಓದಿ
► ಭಾರತದ ಅತ್ಯಂತ ವೇಗದ ಓಟಗಾರ ದಾಖಲೆ ಬರೆದ ಮಣಿಕಂಠ ಹೋಬಳಿದಾರ್ – https://kundapraa.com/?p=69488 .
► ಸಾಧಕ ಕ್ರೀಡಾಪಟು ಮಣಿಕಂಠ ಹೋಬಳಿದಾರ್ ಅವರಿಗೆ ಬೈಂದೂರಿನಲ್ಲಿ ಹುಟ್ಟೂರ ಸನ್ಮಾನ – https://kundapraa.com/?p=69941 .















