ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಭವಿಷ್ಯದ ದೊಡ್ಡ ಕನಸಿನೊಂದಿಗೆ ಆಳ್ವಾಸ್ ಸಂಸ್ಥೆಗೆ ಸೇರಿದ್ದೀರಿ, ನಿಮ್ಮ ಕನಸು ನನಸಾಗಿಸುವವರೆಗೆ ಆಳ್ವಾಸ್ ನಿಮ್ಮ ಜತೆ ಸಾಗಲಿದೆ ಎಂದು ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಸದಾಕಾತ್ ಹೇಳಿದರು.
ಅವರು ಇಲ್ಲಿನ ವಿದ್ಯಾಗಿರಿಯ ವಿಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಪಿಯು (ವಿಜ್ಞಾನ) ಪ್ರಥಮ ವರ್ಷದ ವಿದ್ಯಾರ್ಥಿಗಳ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಟ್ಟಕಡೆಯ ವಿದ್ಯಾರ್ಥಿಗೂ ಸಮಾನ ಅವಕಾಶಗನ್ನು ಒದಗಿಸುವುದು ಆಳ್ವಾಸ್‌ನ ಗುರಿಯಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಕನಸುಗಳನ್ನು ನನಸಾಗಿಸಲು ಆಳ್ವಾಸ್ ಸದಾ ಜತೆಯಾಗಿ ನಿಲ್ಲಲಿದೆ. ಇದಕ್ಕಾಗಿ ಆಡಳಿತ ವರ್ಗ, ಶಿಕ್ಷಕರು, ಶಿಕ್ಷಕೇತರ ವೃಂದ, ಪೋ?ಕರು ಮತ್ತು ವಿದ್ಯಾರ್ಥಿಗಳು ಜತೆಗೂಡಿ ಕಾರ್ಯ ನಿರ್ವಹಿಸಬೇಕು ಎಂದರು.
ಹತ್ತನೇ ತರಗತಿಯವರೆಗಿನ ಕಲಿಕೆ ವಾರ್ಷಿಕ ಪರೀಕ್ಷೆಯ ಮುಖ್ಯ ಉದ್ದೇಶವನ್ನು ಹೊಂದಿದೆ. ಆದರೆ ಪಿಯು ಶಿಕ್ಷಣ, ಭವಿಷ್ಯದ ವೃತ್ತಿ ಶಿಕ್ಷಣದ ನಿರ್ಧಾರದ ಹಂತ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಳ್ವಾಸ್ ಫಲಿತಾಂಶಗನ್ನು ವಿವರಿಸಿದ ಅವರು, ಯಾವುದೇ ಪರೀಕ್ಷೆಗಳು ಅಸಾಧ್ಯವಲ್ಲ ಪ್ರಯತ್ನಪಟ್ಟರೆ ಎಲ್ಲವು ಸುಲಭ. ಆಳ್ವಾಸ್ ಪದವಿಪೂರ್ವ ಇದಕ್ಕೆ ಜ್ವಲಂತ ಸಾಕ್ಷಿ ಎಂದರು.
ಆಳ್ವಾಸ್‌ನಲ್ಲಿ ಪ್ರತಿ ವಾರಕ್ಕೊಮ್ಮೆ ಅಣುಕು ಪರೀಕ್ಷೆ ಮೂಲಕ ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಯನ್ನು ವೃದ್ಧಿಸಲಾಗುವುದು. ವಿದ್ಯಾರ್ಥಿಗಳ ಕ್ಷೇಮ ಪಾಲನೆಗೆ ಪ್ರತ್ಯೇಕ ಅಧಿಕಾರಿ ವರ್ಗವಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ಸಂಯೋಜಿತ ಪಠ್ಯ ಬೋಧನೆ ಅಳವಡಿಸಲಾಗಿದ್ದು, ಪಠ್ಯ ಚಟುವಟಿಕೆ ಪೂರ್ಣಗೊಂಡ ನಂತರ ಮರುಮನನ ತರಗತಿಗಳನ್ನು ನಡೆಸಲಾಗುವುದು ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಸಮಸ್ಯೆಗಳನ್ನು ಶಿಕ್ಷಕರೊಂದಿಗೆ ಪರಿಹರಿಸಿಕೊಳ್ಳಬಹುದು. ತರಗತಿ ನಂತರದ ಸ್ಟಡಿ ಅವರ್‌ಗಳಲ್ಲಿ ಗೊಂದಲಗಳನ್ನೂ ನಿವಾರಿಸಿಕೊಳ್ಳಲು ಅವಕಾಶವಿದ್ದು ಸದುಪಯೋಗ ಪಡಿಸಿಕೊಳ್ಳುವಂತೆ ಸೂಚಿಸಿದರು. ಪಿಯು ಮಂಡಳಿ ಒಂದು ವಿಷಯಕ್ಕೆ 120 ಘಂಟೆಗಳ ತರಗತಿಗಳನ್ನು ನಡೆಸುವಂತೆ ಸೂಚಿಸಿದರೂ, ಆಳ್ವಾಸ್‌ನಲ್ಲಿ 250 ರಿಂದ 300 ಘಂಟೆಗಳ ತರಗತಿಗಳು ನಡೆಯುತ್ತವೆ ಎಂದರು.
ಪಿಯು ಒಂದನೇ ಶೈಕ್ಷಣಿಕ ಬ್ಲಾಕಿನ ಮುಖ್ಯಸ್ಥೆ ಜ್ಯೋತಿ ಎಂ.ಎನ್., ಎರಡನೇ ಬ್ಲಾಕ್‌ನ ಮುಖ್ಯಸ್ಥ ಕುಮಾರ್ ಎನ್., ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲೆ ಜಾನ್ಸಿ ಪಿ.ಎನ್. ಇದ್ದರು.
ಕಾರ್ಯಕ್ರಮವನ್ನು ಆಳ್ವಾಸ್ ಪಿಯು ಕಾಲೇಜಿನ ಇಂಗ್ಲಿಷ್ ಉಪನ್ಯಾಸಕ ರಾಜೇಶ್ ಡಿಸೋಜ ನಿರೂಪಿಸಿದರು.















