ಹೊಸಂಗಡಿ ಹೈಸ್ಕೂಲ್ ವಿಧ್ಯಾರ್ಥಿಗಳ ಕ್ರೀಡಾ ಸಾಧನೆ : ರಾಜ್ಯಮಟ್ಟಕ್ಕೆ ಆಯ್ಕೆ

Call us

Call us

Call us

ಹೊಸಂಗಡಿ: 2015-16ರ ಸಾಲಿನ ಪ್ರೌಢ ಶಿಕ್ಷಣ ಮಂಡಳಿಯ ಹೈಸ್ಕೂಲ್ ಮಟ್ಟದ ಕ್ರೀಡಾ ಕೂಟದಲ್ಲಿ ತಾಲೋಕಿನ ಹೊಸಂಗಡಿ ಪ್ರೌಢ ಶಾಲಾ ವಿಧ್ಯಾರ್ಥಿಗಳು ವಲಯ ,ತಾಲೋಕು ಮಟ್ಟದ ಕ್ರೀಡಾಕೂಟದಲ್ಲಿ ಜಯಭೇರಿ ಸಾದಿಸುತ್ತಾ , ಜಿಲ್ಲಾ ಮಟ್ಟದಲ್ಲಿ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ,ಈದೀಗ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ .

Call us

Click Here

ವಿಧ್ಯಾರ್ಥಿಗಳ ಕ್ರೀಡಾ ಸಾಧನೆ ಇಂತಿದೆ :
ಬಾಲಕಿಯರ ಖೋ -ಖೋ ತಂಡ ತಾಲೋಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಹಾಗೂ ನಾಲ್ಕು ವಿಧ್ಯಾರ್ಥಿಗಳು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ .

ಅತ್ಲೆಟಿಕ್ ವಿಭಾಗದಲ್ಲಿ ಶ್ರೀದೇವಿ ಉಡುಪಿ ಜಿಲ್ಲೆಯಲ್ಲಿ ಅತೀ ವೇಗದ ಓಟಗಾರ್ತಿಯಾಗಿ ಮೂಡಿ ಬಂದಿದ್ದಾರೆ. ಕುಮಾರಿ ಸ್ವಾತಿ ಅತೀ ಎತ್ತರ ಜಿಗಿತದ ಕ್ರೀಡಾಳು ಆಗಿದ್ದಾರೆ , ಅರುಣ್ ಕೋಲು ನೆಗೆತದಲ್ಲಿ ಅತೀ ಎತ್ತರಕ್ಕೆ ಹಾರುವ ಕ್ರೀಡಾಪಟುವಾದರೇ ,ದರ್ಶನ್ ಅಡೆ-ತಡೆ ಓಟದಲ್ಲಿ ಜಿಲ್ಲೆಯ ಎರಡನೇ ವೇಗದ ಓಟಗಾರನಾಗಿದ್ದಾನೆ . ರಮ್ಯ ದೂರದ ಓಟದಲ್ಲಿ ಮೂರನೇ ಓಟಗಾರ್ತಿಯ ಸ್ಥಾನ ಪಡೆದಿದ್ದಾಳೆ . ನಾಲ್ಕು ವಿಧ್ಯಾರ್ಥಿಗಳು ಅತ್ಲೆತಿಕ್ ವಿಭಾಗದಲ್ಲಿ ರಾಜ್ಯ ಮಟ್ಟವನ್ನು ಪ್ರತಿನಿಧಿದ್ದಾರೆ . ಕುಂದಾಪುರ ತಾಲೋಕು ಮಟ್ಟದಲ್ಲಿ ನಡೆದ ಕ್ರೀಡಾ ಕೂಟದಲ್ಲಿ ೨೬ ಚಿನ್ನ , ೧೬ ಬೆಳ್ಳಿ , ೧೦ ಕಂಚು ಪಡೆದು ತಾಲೋಕು ಕ್ರೀಡಾ ಸಮಗ್ರ ಪ್ರಶಸ್ತಿ ಪಡೆಯುವಾಗ ಸುಮಾರು ೨೪ ವಿಧ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರು .ದರ್ಶನ್ ,ಮಹೇಶ್ ,ಶ್ರೀದೇವಿ , ಸ್ವಾತಿ , ದಿನೇಶ , ಪೂರ್ಣಿಮಾ , ಎಂಬ ೬ ವಿಧ್ಯಾರ್ಥಿಗಳು ವಯುಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನು ಪಡೆದಿದ್ದಾರೆ ರಿಲೇ ೧೪ರ ವಯೋಮಿತಿಯೂ ಸಹಾ ಬಾಲಕ ,ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿದೆ . ಜಿಲ್ಲೆಯಲ್ಲಿ ೩ ಚಿನ್ನ , ೮ ಬೆಳ್ಳಿ, ೯ ಕಂಚನ್ನುಉಡುಪಿ ಜಿಲ್ಲೆಯಲ್ಲಿ ಕುಂದಾಪುರ ವಲಯ ಸಮಗ್ರ ಪ್ರಶಸ್ತಿಯನ್ನು ಪಡೆದಿರುತ್ತಾರೆ .. ಈ ಎಲ್ಲಾ ಸಾಧನೆಗೆ ದೈಹಿಕ ಶಿಕ್ಷಕರಾದ ಶ್ರೀ ಸುಕುಮಾರ್ ಶೆಟ್ಟಿಯವರ ನಿರಂತರ ಕಠಿಣ ಶ್ರಮದ ತರಭೇತಿ ,ಪೋಷಕರ ಪಾಲಕರ ಪ್ರೋತ್ಸಾಹ ಎಂಬುದು ವಿಜೇತ ವಿಧ್ಯಾರ್ಥಿಗಳ ಅಭಿಪ್ರಾಯ . ಏನೇ ಆಗಲಿ ರಾಜ್ಯಮಟ್ಟದಲ್ಲಿ ಸಹಾ ಸಮಗ್ರ ಪ್ರಶಸ್ತಿಯನ್ನು ಪಡೆದು ಗ್ರಾಮೀಣ ಪ್ರತಿಭೆಗಳು ಮೇಲಕ್ಕೆ ಏರಲಿ ಎಂಬ ಆಶಯ ನಮ್ಮದು …!

news sports Shivakumar hosangadi4

Leave a Reply