ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ವತ್ತಿನಣೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಸೋಮವಾರ ಗುರು ರಾಘವೇಂದ್ರ ಸ್ವಾಮಿಗಳ 354 ಮಹೋತ್ಸವ ಜರುಗಿತು.
ಬೆಳಿಗ್ಗೆಯಿಂದ ಪಾದಪೂಜೆ, ಆಂಜನೇಯ ಸ್ವಾಮಿಗೆ ಬೆಣ್ಣೆ ಸೇವೆ, ಅರ್ಚನೆ, ಮಹಾಪೂಜೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ ಹೂವಿನ ಪೂಜೆ ಮುಂತಾದ ಕಾರ್ಯಗಳು ನಡೆದವು.

ಸೇವಾ ಸಂಗಮ ಶಿಶು ಮಂದಿರದ ಮಾತೆಯರಿಂದ ವಿಷ್ಣು ಸಹಸ್ರನಾಮ ಪಠಣ, ಚಂದ್ರ ಬಂಕೇಶ್ವರ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ಭಕ್ತರು ರಾಯರ ದರ್ಶನ ಪಡೆದರು
ಬಳಗದವರಿಂದ ಭಕ್ತಿ ಸಂಗೀತ, ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಸಂಜೆ ನಡೆಯಿತು. ಸುರಭಿ ಬೈಂದೂರು ತಂಡದಿಂದ ಯಕ್ಷ ನಾಟ್ಯ ವೈಭವ ಕಾರ್ಯಕ್ರಮ ನಡೆಯಿತು.
ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಮೇ 25ರಿಂದ 29ರವರೆಗೆ ವೃಂದಾವನ ಪುನಃ ಪ್ರತಿಷ್ಠೆ, ಅಂಜನೇಯ, ನವಗ್ರಹ ದೇವರ ಕಲಶಾಭಿಷೇಕ, ಶತಕಲಶಸಹಿತ, ವೃಂದಾವನಕ್ಕೆ ಶತಕಲಶ ಸಹಿತ ಬ್ರಹ್ಮಕ-ಲಶೋತ್ಸವ ಜರುಗಿದ್ದು, ಸಾನಿಧ್ಯಾಭಿವೃ-ದ್ಧಿಗಾಗಿ ಭಾನುವಾರ ದೃಢಕಲಶೋತ್ಸವ, ವಿಶೇಷ ಪೂಜೆ ನಡೆಸಲಾಗಿತ್ತು.
ಸಾವಿರಾರು ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಸೂಲ್ಯಣ್ಣ ಶೆಟ್ಟಿ ಪಡುವರಿ, ಉಪಾಧ್ಯಕ್ಷ ಎಸ್. ರಾಜು ಪೂಜಾರಿ, ಕಾರ್ಯದರ್ಶಿ ಮಂಜುನಾಥ ಶೆಟ್ಟಿ, ಸದಸ್ಯರು, ತಂತ್ರಿಗಳು, ಅರ್ಚಕರು, ಸಿಬ್ಬಂದಿ ಪಾಲ್ಗೊಂಡಿದ್ದರು.















