ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸೇವಾ ಸಂಗಮ ಶಿಶು ಮಂದಿರದ ವತಿಯಿಂದ “ರಕ್ಷಾಬಂಧನ” ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸೇವಾ ಸಂಘದ ಅಧ್ಯಕ್ಷರಾದ ಮಂಜುನಾಥ ಶೆಟ್ಟಿ ಅವರು ಭಾರತೀಯ ಸಂಸ್ಕೃತಿಯಲ್ಲಿ ರಕ್ಷಾಬಂಧನ ಮತ್ತು ಅದಕ್ಕಿರುವ ಮಹತ್ವದ ಬಗ್ಗೆ ಪುಟಾಣಿಗಳಿಗೆ ಮತ್ತು ಮಾತೆಯರಿಗೆ ತಿಳಿಸಿಕೊಟ್ಟರು. ಸಮಾರಂಭದ ಅತಿಥಿಗಳಾಗಿ ಆಗಮಿಸಿದ ಉಪನ್ಯಾಸಕ ಮಂಜುನಾಥ ಅವರು ರಕ್ಷಾಬಂಧನ ದ ಮಹತ್ವವನ್ನು ತಿಳಿಸಿದರು.


ವೇದಿಕೆಯಲ್ಲಿ ಸೇವಾ ಸಂಗಮದ ವ್ಯವಸ್ಥಾಪಕ ದಿನೇಶ್ ಅವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಸದಸ್ಯ ಆಶಾದಿನೇಶ್ ನಿರೂಪಿಸಿ, ಮಾತೆಯರು ವಂದಿಸಿದರು.
ಈ ಸಂದರ್ಭದಲ್ಲಿ ಸೇವಾ ಸಂಗಮದ ಪುಟ್ಟ ಪುಟ್ಟ ಪುಟಾಣಿಗಳು ಹಾಗೂ ಮಾತೆಯರು ಮತ್ತು ಸೇವಾ ಸಂಘದ ಸರ್ವ ಪದಾಧಿಕಾರಿಗಳು ಅಧ್ಯಕ್ಷ ಮಂಜುನಾಥ್ ಶೆಟ್ಟಿ ಅವರ ನಿರ್ದೇಶನದಂತೆ ಬೈಂದೂರಿನ ರಥ ಬೀದಿ ವ್ಯಾಪ್ತಿಯ ನಾಗರಿಕ ಬಂಧುಗಳಿಗೆ ಹಾಗೂ ಬೈಂದೂರಿನ ಆರಕ್ಷಕ ಉಪನಿರೀಕ್ಷಕರ ಕಚೇರಿಯ ಸಿಬ್ಬಂದಿಗಳಿಗೆ “ರಕ್ಷಾ ಬಂಧನ”ವನ್ನು ಕಟ್ಟಿ ರಕ್ಷಾಬಂಧನದ ಮಹತ್ವವನ್ನು ತಿಳಿಸಿ ಹಿರಿಯರಿಂದ ಆಶೀರ್ವಾದ ಪಡೆದರು. ಈ ಒಂದು ಕಾರ್ಯಕ್ರಮ ಪುಟ್ಟ ಪುಟ್ಟ ಪುಟಾಣಿಗಳಿಂದ ಬಹಳ ವೈಶಿಷ್ಟ ಪೂರ್ಣವಾಗಿ ಮೂಡಿ ಬಂತು.










