ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಕೋಟತಟ್ಟು ಬಾರಿಕೆರೆ ನಿವಾಸಿ ರಾಘವೇಂದ್ರ ಪೂಜಾರಿ ಅಪಘಾತದಲ್ಲಿ ಭೀಕರವಾಗಿ ಗಾಯಗೊಂಡಿದ್ದು ಈತನ ನೆರವಿಗೆ ಕೂಲಿ ಕಾರ್ಮಿಕ ಮಂಜುನಾಥ್ ಪೂಜಾರಿ ನೆರವಿನ ಹಸ್ತ ಚಾಚಿದ್ದಾರೆ.
ಸ್ವಾತಂತ್ರ್ಯೋತ್ಸವ ಅಂಗವಾಗಿ ಈ ಮಹಾಕಾರ್ಯವನ್ನು ಮಂಜುನಾಥ್ ಪೂಜಾರಿ ಮಾಡಿದ್ದಾರೆ.
ಅವರು ದಿನಂಪ್ರತಿ ಕೂಲಿನಾಲಿ ಮಾಡಿ ಸಂಪಾದಿಸಿದ ಹಣವನ್ನು ಶೇಖರಿಸಿ ಅನಾರೋಗ್ಯಕ್ಕಿಡಾದವರಿಗೆ, ಸ್ಥಳೀಯ ಸರಕಾರಿ, ಅನುದಾನಿತ ಶಾಲೆಗಳಿಗೆ ನೆರವು ನೀಡುತ್ತಿದ್ದಾರೆ. ಈಗಾಗಲೇ ಸಾಕಷ್ಟು ಸೇವಾಕಾರ್ಯ ಮಾಡಿರುವುದು ಗಮನಾರ್ಹವಾಗಿದೆ.
ಈ ಸಂದರ್ಭದಲ್ಲಿ ಕೋಟ ಸಹಕಾರಿ ವ್ಯವಸಾಯಕ ಸಂಘದ ನಿರ್ದೇಶಕ ರಂಜಿತ್ ಬಾರಿಕೆರೆ, ಬಾರಿಕೆರೆ ಯುವಕ ಮಂಡಲದ ಅಭಿಜಿತ್ ಕಾಂಚನ್, ವಿಜಯ್ ಪೂಜಾರಿ, ರತ್ನಾಕರ ಪೂಜಾರಿ ಇದ್ದರು.










