ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲದ ಯುವ ಮೋರ್ಚಾ ನೇತೃತ್ವದಲ್ಲಿ ಸೇವಾ ಪಾಕ್ಷಿಕದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರವು ಸೆ.27 ಶನಿವಾರರಂದು ಬೆಳಿಗ್ಗೆ 9.00 ಗಂಟೆಗೆ ಇಲ್ಲಿನ ರೋಟರಿ ಭವನದಲ್ಲಿ ನಡೆಯಲಿದೆ.
ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಮಂಡಲದ ಅಧ್ಯಕ್ಷರಾದ ಅನಿತಾ ಆರ್. ಕೆ. ಅವರು ಉಪಸ್ಥಿತರಿರಲಿದ್ದಾರೆ.
ಬೆಳಿಗ್ಗೆ 9 ಗಂಟೆಯಿಂದ ಬೈಂದೂರು ರೋಟರಿ ಭವನದಲ್ಲಿ ರಕ್ತದಾನ ಶಿಬಿರ ಆರಂಭವಾಗಲಿದ್ದು, ಆಸಕ್ತರು ಜೀವ ಉಳಿಸುವಂತಹ ರಕ್ತದಾನದ ಮಹತ್ಕಾಯರ್ಯದಲ್ಲಿ ಭಾಗವಹಿಸಬಹುದು ಎಂದು ಯುವಮೋರ್ಚಾ ಅಧ್ಯಕ್ಷರಾದ ಗಜೇಂದ್ರ ಎಸ್. ಬೇಲೆಮನೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










