ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಾಯ್ಕನಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ಶ್ರೀ ಮಹಾಗಣಪತಿ ಸಭಾಭವನ ಮಟ್ನಕಟ್ಟೆಯಲ್ಲಿ ಜರಗಿತು.
ಸಂಘದ ಅಧ್ಯಕ್ಷರಾದ ಸುಂದರ ಆರ್. ಕೊಠಾರಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಹಾಲುಗಳ ಗುಣಮಟ್ಟ ಹಾಗೂ ಸುಚಿತ್ವದ ಬಗ್ಗೆ ವಿವರವಾಗಿ ಹೇಳುವುದರೊಂದಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹಾಲು ಪೂರೈಸುವಲ್ಲಿ ಸದಸ್ಯರು ಸಹಕರಿಸುವಂತೆ ತಿಳಿಸಿದ ಅವರು ವರದಿ ವರ್ಷದಲ್ಲಿ ಸಂಘವು ರೂ. 3.37ಲಕ್ಷ ನಿವ್ವಳ ಲಾಭಗಳಿಸಿದ್ದು, ಶೇ 15 ಡಿವಿಡೆಂಡು ಹಾಗೂ ಪ್ರತಿ ಲೀಟರ್ ಹಾಲಿಗೆ ರೂ.1.15ರಂತೆ ಬೋನಸ್ ಘೋಷಿಸಿದರು.
ವಿಸ್ತರಣಾಧಿಕಾರಿಗಳಾದ ರಾಜಾರಾಮ ಅವರು ಮಾತನಾಡಿ, ಒಕ್ಕೂಟದಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಸಿ, ಪ್ರಯೋಜನವನ್ನು ಹೆಚ್ಚು ಹೈನುಗಾರರು ಪಡೆಯಬೇಕು ಎಂದರು.
ಸಂಘದ ನಿರ್ದೇಶಕರುಗಳಾದ ಗೋಪಾಲ ಗಾಣಿಗ, ರಾಮ ಪೂಜಾರಿ, ವಿಜಯಾ ಪ್ರಭು, ಸವಿತಾ ದೇವಡಿಗ, ಮುತ್ತು ದೇವಾಡಿಗ, ಕೃಷ್ಣಿ ದೇವಾಡಿಗ, ಸುಶೀಲ ದೇವಾಡಿಗ, ಭಾಗೀರಥಿ ಪೂಜಾರಿ, ಗೋವಿಂದು ಕೆ. ಸಭೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಮಾಜಿ ಅಧ್ಯಕ್ಷರಾದ ಎನ್. ರಮೇಶ ಪೈ, ಉತ್ತಮ ಕೃಷಿಕರ ನೆಲೆಯಲ್ಲಿ ಸಂಘದ ಕಾರ್ಯವ್ಯಾಪ್ತಿಯ ಹೆರಿಯಕ್ಕ ಹಾಗೂ ಈ ಹಿಂದೆ ಹಾಲು ಪರೀಕ್ಷಕಿಯಾಗಿ ಕೆಲಸ ನಿರ್ವಹಿಸಿದ ಭಾರತಿ ದೇವಾಡಿಗ ಇವರುಗಳನ್ನು ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷರಾದ ಹೆರಿಯ ಪೂಜಾರಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ದಿವ್ಯ ಭಟ್ 2024-25ರ ವಾರ್ಷಿಕ ವರದಿಯನ್ನು ಮಂಡಿಸಿದರು. ಹಾಲು ಪರಿಕ್ಷಕಿ ಕುಮಾರಿ ವಸಂತಿ ಸಹಕರಿಸಿದರು. ಪ್ರಮೋದ ಪೈ ವಂದಿಸಿದರು.















