ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪರಿಸರ ಸ್ನೇಹಿ ಕಾರ್ಯಕ್ರಮಗಳೊಂದಿಗೆ ಗುಣಮಟ್ಟದ ಶಿಕ್ಷಣಕ್ಕೆ ಹೆಸರು ವಾಸಿಯಾಗಿರುವ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು 2025-26ನೇ ಶೈಕ್ಷಣಿಕ ವರ್ಷದ ‘ಡೈನಾಮಿಕ್ ಸ್ಕೂಲ್ ಅವಾರ್ಡ್ಸ್ – 2025’ ಪ್ರಶಸ್ತಿಗೆ ಪಾತ್ರವಾಗಿದೆ.
ಅ.14 ರಂದು, ಎಜುಕೇಶನ್ ಟುಡೇ ಸಂಸ್ಥೆಯು ಇಂಟರ್ನ್ಯಾಷನಲ್ ಬ್ಯಾಕಲೋರಿಯೇಟ್ ಸಹಯೋಗದಲ್ಲಿ ಹಾಗೂ ಎಜುಕೇಶನ್ ನ್ಯೂಸ್ ನೆಟ್ವರ್ಕ್ ಸಹಭಾಗಿತ್ವದಲ್ಲಿ ಡೈನಾಮಿಕ್ ಸ್ಕೂಲ್ ಅವಾರ್ಡ್ಸ್ 2025 ಕಾರ್ಯಕ್ರಮವನ್ನು ಮೈಸೂರಿನ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಆಯೋಜಿಸಲಾಗಿತ್ತು.
ಸಂಸ್ಥೆಯ ಪರವಾಗಿ ಪ್ರಶಸ್ತಿಯನ್ನು ಪ್ರಾಥಮಿಕ ಶಾಲೆಯ ಸಂಯೋಜಕಿಯಾದ ದೀಪಿಕಾ ದೇವಾಡಿಗ ಮತ್ತು ರೇಖಾ ಆರ್. ಅವರು ಕಾರ್ಯಕ್ರಮದಲ್ಲಿ ಪ್ರಮುಖ ಅತಿಥಿಗಳಾದ ನಾಡೋಜ ಡಾ. ವೂಡೇ ಪಿ. ಕೃಷ್ಣ, ಮಿಸ್ ಬ್ರಿಂದಾ ಶ್ರೀನಿವಾಸ್ ಮತ್ತು ಶ್ರೀ ತನ್ವೀರ್ ಅಹ್ಮದ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ತನ್ನ ವಿಶಿಷ್ಟ ಶೈಕ್ಷಣಿಕ ಸಾಧನೆಗಳು, ಹಸಿರು ಆವರಣ ಯೋಜನೆಗಳು ಮತ್ತು ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡು ವಿಶೇಷ ಗೌರವವನ್ನು ಗಳಿಸಿತು. ಸಂಸ್ಥೆಯ ನಿಷ್ಠಾವಂತ ನಾಯಕತ್ವ ಹಾಗೂ ವಿದ್ಯಾರ್ಥಿಗಳು -ಶಿಕ್ಷಕರ ಒಕ್ಕೂಟದ ಪ್ರಯತ್ನಗಳಿಗೆ ವೇದಿಕೆಯಲ್ಲಿ ಶ್ಲಾಘನೆ ವ್ಯಕ್ತವಾಯಿತು.
“ಈ ಗೌರವವು ನಮ್ಮ ಶಾಲೆಯ ಶೈಕ್ಷಣಿಕ ಸಾಧನೆಗಳು ಮತ್ತು ಸಹ-ಶಿಕ್ಷಣ ಚಟುವಟಿಕೆಗಳಿಗೆ ಸಂದ ಪ್ರಮುಖ ಪ್ರಶಸ್ತಿಯಾಗಿದೆ. ನಮ್ಮ ಆಡಳಿತ ಮಂಡಳಿಯ ಶೈಕ್ಷಣಿಕ ಕಾಳಜಿ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯ ಸಾಂಘಿಕ ಪರಿಶ್ರಮವೇ ಈ ಯಶಸ್ಸಿನ ಮೂಲ ಕಾರಣವಾಗಿದೆ. ಈ ಸಾಧನೆಗೆ ಸಂಸ್ಥೆಯ ಪ್ರತಿ ಸದಸ್ಯರಿಗೂ ಹೃತ್ಪೂರ್ವಕ ಅಭಿನಂದನೆಗಳು. – ಶರಣ ಕುಮಾರ, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರು















