ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಯಕ್ಷಗಾನ ಕಲೆಯ ಹೆಸರಲ್ಲಿ ನಡೆಸುವ “ರಾಜ್ಯೋತ್ಸವ ಯಕ್ಷಗಾನ ತಾಳಮದ್ದಳೆ” ಕಾರ್ಯಕ್ರಮವು 50ನೇ ವರ್ಷದ ಸುವರ್ಣ ಸಂಭ್ರಮದ “ಸುವರ್ಣಾಕ್ಷ” ಕಾರ್ಯಕ್ರಮ ನವೆಂಬರ್ 01 & 02ರಂದು ನಡೆಯಲಿದೆ ಎಂದು ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ. ಶಾಂತಾರಾಮ್ ಪ್ರಭು ಹೇಳಿದರು.
ಅವರು ಕಾಲೇಜಿನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ನ.01 ಮತ್ತು 02ರಂದು ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ಇಲ್ಲಿನ ಆರ್.ಎನ್ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿವೆ. ರಾಜ್ಯೋತ್ಸವ ಯಕ್ಷಗಾನ, ತಾಳಮದ್ದಲೆ, ಡಾ. ಹೆಚ್. ಶಾಂತಾರಾಮ್ ಯಕ್ಷಗಾನ ಪುರಸ್ಕಾರ ಪ್ರದಾನ, ಯಕ್ಷಗಾನ ಪ್ರದರ್ಶನ, ವಿಚಾರಗೋಷ್ಠಿ, ಯಕ್ಷಗಾನ ವಸ್ತು ಸಂಗ್ರಹಾಲಯ ಉದ್ಘಾಟನೆ ಕಾಯಕ್ರಮಗಳು ನಡೆಯಲಿವೆ ಎಂದರು.
ನವೆಂಬರ್ 1ರಂದು ಶನಿವಾರ ಬೆಳಿಗ್ಗೆ 9.30ಕ್ಕೆ 50ನೇ ವಷದ ಯಕ್ಷಗಾನ ತಾಳಮದ್ದಲೆ ಮತ್ತು “ಸುವಣಾಕ್ಷ” ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ವಿಧಾಸಭಾ ಕ್ಷೇತ್ರದ ಮಾಜಿ ಶಾಸಕರಾದ ಪ್ರಮೋದ್ ಮಧ್ವರಾಜ್ ಅವರು ನೆರವೇರಿಸಲಿದ್ದಾರೆ. ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ. ಶಾಂತಾರಾಮ್ ಪ್ರಭು ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ರಾಧಾಕೃಷ್ಣ ಕಲ್ಚಾರ್ ಅವರು ಉಪಸ್ಥಿತರಿರಲಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಕಾಲೇಜಿನ ವಿದ್ಯಾಥಿಗಳಿಂದ ಸಾಂಪ್ರದಾಯಿಕ “ಹೂವಿನ ಕೋಲು ಪ್ರದರ್ಶನ” ನಡೆಯಲಿದೆ. 10.30ಕ್ಕೆ ಯಕ್ಷಗಾನ ವಿಚಾರಗೋಷ್ಠಿ ʼವಾಂಙ್ಮಯ ವಿಸ್ಮಯʼ ಕುರಿತು ಪವನ್ ಕಿರಣ್ ಕೆರೆ ಮತ್ತು ರಾಧಾಕೃಷ್ಣ ಕಲ್ಚಾರ್ ಅವರು ಯಕ್ಷಗಾನ ಮತ್ತು ಪದವಿ ಶಿಕ್ಷಣ ಪಠ್ಯ, ಶುದ್ಧ ಕನ್ನಡ ನಿರ್ಮಾಣದಲ್ಲಿ ಕನ್ನಡದ ಪಾತ್ರ, ಯಕ್ಷಗಾನ ಸಂಭಾಷಣೆ ಮತ್ತು ಆಶು ಸಂಭಾಷಣೆ, ಕಲೆಯಾಚೆಗಿನ ಯಕ್ಷಗಾನ ಕಾವ್ಯಗಳ ಕುರಿತು ಮಾತನಾಡಲಿದ್ದಾರೆ. 11.45ರಿಂದ “ರಾವಣ ಗರ್ವಭಂಗ” ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಮಧ್ಯಾಹ್ನ 2.30ಕ್ಕೆ ನೇರಂಬಳ್ಳಿ ನಾರಾಯಣ ರಾವ್ ಯಕ್ಷಗಾನ ವಸ್ತು ಸಂಗ್ರಹಾಲಯ ಉದ್ಘಾಟನೆ ನಡೆಯಲಿದೆ. ಮಣಿಪಾಲ, ಮಾಹೆ ಉಪಕುಲಪತಿಗಳಾದ ಡಾ. ಹೆಚ್.ಎಸ್.ಬಲ್ಲಾಳ್ ಅವರು ಉದ್ಘಾಟಿಸಲಿದ್ದಾರೆ. ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ. ಶಾಂತಾರಾಮ್ ಪ್ರಭು ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ ಕೊಡ್ಗಿ ಆಗಮಿಸಲಿದ್ದಾರೆ. ನೇರಂಬಳ್ಳಿ ಉದ್ಯಮಿ ರಾಘವೇಂದ್ರರಾವ್ ಮತ್ತು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ ಟಿ. ಸೋನ್ಸ್ ಉಪಸ್ಥಿತರಿರಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ “ಡಾ. ಹೆಚ್. ಶಾಂತಾರಾಮ್ ಯಕ್ಷಗಾನ ಪುರಸ್ಕಾರ” ಪ್ರದಾನ ಕಾಯಕ್ರಮ ನಡೆಯಲಿದೆ. ಮಣಿಪಾಲ ಮಾಹೆ ಇಲ್ಲಿನ ಉಪಕುಲಪತಿಗಳಾದ ಡಾ.ಹೆಚ್.ಎಸ್.ಬಲ್ಲಾಳ್ ಕಾಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ. ಶಾಂತಾರಾಮ್ ಪ್ರಭು ಅಧ್ಯಕ್ಷತೆ ವಹಿಸಲಿದ್ದಾರೆ. ಗೀತಾನಂದ ಪೌಂಡೇಶನ್ ಇದರ ಪ್ರವರ್ತಕರಾದ ಆನಂದ್ ಸಿ.ಕುಂದರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಶ್ರೀ ಕ್ಷೇತ್ರ ಸೌಕೂರು ಇಲ್ಲಿನ ಆಡಳಿತ ಮೊಕ್ತೇಸರರಾದ ಕಿಶನ್ ಹೆಗ್ಡೆ ಪಳ್ಳಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಖ್ಯಾತ ಮದ್ದಲೆ ವಾದಕರಾದ ಎನ್.ಜಿ.ಹೆಗಡೆ ಯಲ್ಲಾಪುರ ಈ ವರ್ಷದ ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು.
ಸಂಜೆ 4 ಗಂಟೆಯಿಂದ “ಶಿವಭಕ್ತ ವೀರಮಣಿ” ಎಂಬ ಪ್ರಸಂಗದ ಕುರಿತು ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಲೆ ನಡೆಯಲಿದೆ. ಪ್ರಸನ್ನ ಭಟ್ ಬಾಳ್ಕಲ್ ಅವರ ಬಾಗವತಿಕೆಯಲ್ಲಿ ಎನ್.ಜಿ. ಹೆಗಡೆ ಅವರ ಮದ್ದಲೆಯಲ್ಲಿ, ರಾಮಕೃಷ್ಣ, ಮಂದಾರ್ತಿ, ಚಂಡೆಯಲ್ಲಿ ಸಹಕರಿಸಲಿದ್ದಾರೆ. ಪ್ರಸಂಗದಲ್ಲಿ ವೀರಮಣಿಯಾಗಿ ಜಬ್ಬಾರ್ ಸುಮೋ, ಸಂಪಾಜೆ, ಹನುಮಂತರಾಗಿ ರಾಧಾಕೃಷ್ಣ ಕಲ್ಚಾರ್, ಈಶ್ವರನಾಗಿ ಪವನ್ ಕಿರಣ್ ಕೆರೆ, ಶತ್ರುಘ್ನರಾಗಿ ಗಣೇಶ್ ಶೆಟ್ಟಿ, ಕನ್ನಡಿಕಟ್ಟೆ ಪಾತ್ರನಿರ್ವಹಿಸಲಿದ್ದಾರೆ.
ನವೆಂಬರ್ 2 ರಂದು ಆದಿತ್ಯವಾರ 8.30ರಿಂದ ಬೆಳಿಗ್ಗೆ 50ನೇ ವರ್ಷದ ರಾಜ್ಯೋತ್ಸವ ತಾಳಮದ್ದಲೆ ಪ್ರಯುಕ್ತ ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಬಡಗುತಿಟ್ಟು ಯಕ್ಷಗಾನ ಸ್ಪರ್ಧೆ “ಬಂಗಾರದ ಹೆಜ್ಜೆ” ನಡೆಯಲಿದೆ. ಶ್ರೀ ಕ್ಷೇತ್ರ ಸೌಕೂರು ಇಲ್ಲಿನ ಆಡಳಿತ ಮೊಕ್ತೇಸರರಾದ ಕಿಶನ್ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ. ಶಾಂತಾರಾಮ್ ಪ್ರಭು ಅಧ್ಯಕ್ಷತೆ ವಹಿಸಲಿದ್ದಾರೆ. ಕುಂದಾಪುರ ಪುರಸಭೆಯ ಅಧ್ಯಕ್ಷರಾದ ಮೋಹನದಾಸ ಶೆಣೈ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸಂಜೆ 5.30ರಿಂದ ಸಮಾರೋಪ ಸಮಾರಭದ ಬಹುಮಾನ ವಿತರಣಾ ಕಾಯಕ್ರಮ ನಡೆಯಲಿದೆ. ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ. ಶಾಂತಾರಾಮ್ ಪ್ರಭು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ ಗಂಟಿಹೊಳೆ, ಉಡುಪಿ-ಚಿಕ್ಕಮಗಳೂರು ಲೋಕಸಬಾ ಕ್ಷೇತ್ರದ ಮಾಜಿ ಸಂಸದರಾದ ಜಯಪ್ರಕಾಶ್ ಹೆಗ್ಡೆ, ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ರಘುಪತಿ ಭಟ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಯಕ್ಷಗಾನ ಕಲಾವಿದ ನಿವೃತ್ತ ಪ್ರಾಧ್ಯಾಪಕ ಕೆ.ಜಿ. ಮಂಜುನಾಥ್ ಸುವರ್ಣಾಕ್ಷದ ಕುರಿತು ವಿಮರ್ಶೆ ಮಾಡಲಿದ್ದಾರೆ ಅವರು ತಿಳಿಸಿದರು.
ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಯು.ಎಸ್. ಶೆಣೈ ಕಾರ್ಯಕ್ರಮದ ರೂಪುರೇಷೆಗಳನ್ನು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ರಾಜ್ಯೋತ್ಸವ ಯಕ್ಷಗಾನ ತಾಳಮದ್ದಳೆ ಬೆಳೆದು ಬಂದ ಹಾದಿಯನ್ನು ಕುರಿತು ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಸಂಚಾಲಕ ಶಶಾಂಕ್ ಪಟೇಲ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಸುಮಲತಾ ನಾಯ್ಕ, ಕಾಲೇಜಿನ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಕುಂದಾಪ್ರ 89.6 ಎಫ್.ಎಮ್ ಇದರ ಕಾರ್ಯಕ್ರಮ ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ ಇದ್ದರು.















