ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವರ್ಡ್‌ಪ್ರೆಸ್ ಕ್ಯಾಂಪಸ್ ಕನೆಕ್ಟ್ – ಉಡುಪಿ ಆಯೋಜನೆಯಲ್ಲಿ ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ 65 ಮಂದಿ ವಿದ್ಯಾರ್ಥಿಗಳು ತಮ್ಮ ಮೊದಲ ವೆಬ್‌ಸೈಟ್‌ಗಳನ್ನು ನಿರ್ಮಿಸಿ ನೇರವಾಗಿ ಲೈವ್ ಮಾಡಿ ಪ್ರಾಯೋಗಿಕ ಕಲಿಕೆಗೆ ಸಾಕ್ಷಿಯಾದರು..
ವಿದ್ಯಾರ್ಥಿಗಳು WordPress.com ನೀಡಿದ ಉಚಿತ ಒಂದು ವರ್ಷದ ಯೋಜನೆಯ ನೆರವಿನಿಂದ ತಮ್ಮ ಆಲೋಚನೆಗಳನ್ನು ಆನ್‌ಲೈನ್‌ನಲ್ಲಿ ನೈಜ ರೂಪಕ್ಕೆ ತಂದರು. ತರಗತಿಯಲ್ಲಿ ಕಲಿತ ವಿಷಯಗಳನ್ನು ನೈಜ ಪ್ರಯೋಗ ರೂಪದಲ್ಲಿ ಅನ್ವಯಿಸುವ ಅವಕಾಶ ನೀಡಿದ ಈ ಕಾರ್ಯಾಗಾರವು ವಿದ್ಯಾರ್ಥಿಗಳಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿತು.

ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ. ಕೆ. ಉಮೇಶ್ ಶೆಟ್ಟಿ, ಉಪಪ್ರಾಚಾರ್ಯ ಡಾ. ಚೇತನ್ ಶೆಟ್ಟಿ ಕೆ., ಅಕಾಡೆಮಿಕ್ ಡೀನ್ ಹಾಗೂ ಕಾರ್ಯಕ್ರಮ ಸಂಯೋಜಕ ಗಿರಿರಾಜ ಭಟ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಮಹೇಶ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮ ಆಯೋಜನಕರಾದ ಉಡುಪಿ ಸಬ್‌ವೆಬ್ ಸಂಸ್ಥಾಪಕ ಶಶಿಕಾಂತ್ ಶೆಟ್ಟಿ, ಮುಂಬೈ ಕ್ವಾಲಿಟಿ ಕಿಯಾಸ್ಕ್, ಹಿರಿಯ ಟೆಸ್ಟರ್ ಕೆ. ಕೀರ್ತಿ ಪ್ರಭು, ಕುಂದಾಪುರ ಫೋರ್ಥ್‌ಫೋಕಸ್ ಸಂಸ್ಥಾಸ್ಥಾಪಕ ವಿ. ಗೌತಮ್ ನಾವಡ, ಕಾರ್ಯಾಗಾರ ನಿರ್ವಾಹಕರಾದ ಮಂಜುನಾಥ್ ಎಂ.ಎಂ., ತೀರ್ಥಹಳ್ಳಿ ಯುಕ್ತ ಡಿಜಿಟಲ್ ಸಂಸ್ಥಾಪಕ ಓಂಕರ ಉಡುಪ, ಕೋಟೇಶ್ವರ ಕೋಟಿಸಾಫ್ಟ್ ಸೊಲ್ಯೂಶನ್ ಮುಖ್ಯ ಕಾರ್ಯನಿರ್ವಾಹಕ ಓಂಕರ ಉಡುಪ, ಕುಂದಾಪುರ ಫೋರ್ಥ್‌ಫೋಕಸ್ ಕಾರ್ಯ ನಿರ್ವಹಣಾ ನಿರ್ವಾಹಕಿ ಚಂದನಾ ಜಿ.ಎಂ. ಅವರ ಮಾರ್ಗದರ್ಶನದಲ್ಲಿ ಕಾರ್ಯಾಗಾರ ನಡೆಯಿತು.










