ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಐಡಿಯಲ್ ಪ್ಲೆ ಅಬಾಕಸ್ ಇಂಡಿಯಾ ಪ್ರೈ. ಲಿಮಿಟೆಡ್ ಇವರ ವತಿಯಿಂದ ಮೂಡುಬಿದಿರೆಯಲ್ಲಿ 20ನೇ ರಾಜ್ಯಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್‌ಮೆಟಿಕ್ 2025 ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಆರ್ಯನ್ ಯು. ಪ್ರಥಮ ಸ್ಥಾನ ಹಾಗೂ ಅದ್ವಿತ್ ಐದನೇ ಸ್ಥಾನ ಗಳಿಸಿದ್ದಾರೆ.
ಅವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.










