ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಟಿ. ಎನ್. ಪ್ರಭು ಚಾರ್ಟರ್ಡ್ ಅಕೌಂಟೆಂಟ್ಸ್ ಕುಂದಾಪುರದ ಸಂಸ್ಥೆಯಲ್ಲಿ ತರಬೇತಿ ಪಡೆದ, ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ, ನವದೆಹಲಿ ಅವರು ಸೆಪ್ಟೆಂಬರ್ 2025ರಲ್ಲಿ ನಡೆಸಿದ ಇಲ್ಲಿನ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ (ಸ್ಪೇಸ್) ನ ವಿದ್ಯಾರ್ಥಿಗಳು ಸಿಎ-ಫೈನಲ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.
ಸಂಸ್ಥೆಯ ವಿದ್ಯಾರ್ಥಿಗಳಾದ ಕೆದೂರು ಶಾನಾಡಿ ಹರ್ಷ ಹೆಗ್ಡೆ ಹಾಗೂ ಆಶಾ ಎಚ್. ಹೆಗ್ಡೆ ಅವರ ಪುತ್ರಿ ಸಿಎ ವೈಷ್ಣವಿ ಹೆಗ್ಡೆ, ಕುಂಭಾಸಿ ರವೀಂದ್ರ ಕಾಮತ್-ಭಾರತಿ ಕಾಮತ್ ದಂಪತಿ ಪುತ್ರಿ ಸಿಎ ರಶ್ಮಿ ಆರ್. ಕಾಮತ್ ಮತ್ತು ಸೌಕೂರಿನ ರವಿ ಎಂ. ಶೆಟ್ಟಿ ಹಾಗೂ ಉಷಾ ಆರ್. ಶೆಟ್ಟಿ ದಂಪತಿ ಪುತ್ರ ಸಿಎ ರೋಹನ್ ಶೆಟ್ಟಿ ತೇರ್ಗಡೆ ಹೊಂದಿ ಗೌರವ ಪಡೆದಿದ್ದಾರೆ.










