ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂ ಐ ಟಿ ಕೆ) ಯಲ್ಲಿ ಹದಿನೆಂಟನೇ ಪದವಿ ಪ್ರದಾನ ಕಾರ್ಯಕ್ರಮ ಅದ್ಧೂರಿಯಾಗಿ ನಡೆಸಲಾಯಿತು.
ಮುಖ್ಯ ಅತಿಥಿಗಳಾಗಿ ಎಮ್ ಎಸ್ ಎಮ್ ಇ( ಭಾರತ ಸರ್ಕಾರ) ನಿವೃತ್ತ ಡೆಪ್ಯೂಟಿ ಡೈರೆಕ್ಟರ್ ಮತ್ತು ಎ ಎಮ್ ಎಸ್ ಇಂಡಿಯಾ ಇದರ ಕೊ ಪೌಂಡರ್ ಆಗಿರುವ ಗೋಪಿನಾಥ ರಾವ್, ಐಈಡಿಎಸ್ ಅವರು ಆಗಮಿಸಿ, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಸರ್ಕಾರದಿಂದ ಲಭ್ಯವಿರುವ ಫ಼ಂಡಿಂಗ್ ಅವಕಾಶಗಳು ಮತ್ತು ಅದರ ಪ್ರಯೋಜನಗಳ ಬಗ್ಗೆ ಸವಿವರವಾಗಿ ತಿಳಿಸಿದರು. ಉದ್ಯೋಗಿ ಮತ್ತು ಉದ್ಯೋಗದಾತರ ನಡುವಿನ ವ್ಯತ್ಯಾಸದ ಬಗ್ಗೆ ಮನದಟ್ಟು ಮಾಡಿ ತಾವು ಉದ್ಯೋಗ ಕೊಡಿಸುವ ಉದ್ಯಮಿ ಆಗುವ ಧ್ಯೇಯ ಇಟ್ಟುಕೊಂಡು ಆ ನಿಟ್ಟಿನಲ್ಲಿ ಪ್ರಯತ್ನ ಪಡಬೇಕು ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ ಐ ಎಂ ಜೆ ಸಂಸ್ಥಗಳ ಅಕಾಡಮಿಕ್ ಡೈರೆಕ್ಟರ್ ಡಾ. ಎಸ್ ಎನ್ ಭಟ್ ಮಾತನಾಡಿ, ಕಲಿಕೆ ಎನ್ನುವುದು ನಿರಂತರವಾದುದು ಅದನ್ನು ಎಂದಿಗೂ ನಿಲ್ಲಿಸಬೇಡಿ, ನಿಮ್ಮ ಮುಂದಿನ ಪ್ರಯಾಣದಲ್ಲಿ ಅದು ಸಹಾಯವಾಗುತ್ತದೆ, ನೀವು ಇಂದು ತೆಗೆದುಕೊಂಡಿರುವ ಪದವಿ ಪ್ರತಿಜ್ಞೆಯನ್ನು ಅನುಸರಿಸಿ ಜೀವನದಲ್ಲಿ ಯಶಸ್ಸು ಪಡೆದು ಕಾಲೇಜಿನ ಹಳೆ ವಿದ್ಯಾರ್ಥಿಯಾಗಿ ಎಲ್ಲರೂ ಹೆಮ್ಮೆ ಪಡುವಂತೆ ಮಾಡಿ ಎಂದು ಶುಭ ಹಾರೈಸಿದರು.
ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗ್ಡೆ ಪ್ರಾಸ್ಥಾವಿಕ ಭಾಷಣ ಮಾಡಿದರಲ್ಲದೆ ಪದವಿ ಪಡೆಯುವಲ್ಲಿ ವಿದ್ಯಾರ್ಥಿಗಳ, ಪೋಷಕರ ಮತ್ತು ಉಪನ್ಯಾಸಕರ ಪ್ರಯತ್ನವನ್ನು ಉಲ್ಲೇಖಿಸಿದರು.
ಉಪಪ್ರಾಂಶುಪಾಲರಾದ ಡಾ. ಮೆಲ್ವಿನ್ ಡಿ ಸೋಜ ಪ್ರತಿಜ್ಞಾ ವಿಧಿ ಬೋಧಿಸಿದರು. ಡಾಟಾ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಕಾರ್ತಿಕೇಯನ್ ಸ್ವಾಗತಿಸಿ, ಎಮ್ ಸಿ ಎ ವಿಭಾಗದ ಮುಖ್ಯಸ್ಥೆ ಡಾ. ನಂದಿನಿ ವಂದಿಸಿದರು. ಪ್ರಾಧ್ಯಾಪಕರುಗಳಾದ ನೀಲ್ ಹಾಗೂ ಸುಷ್ಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಎಂಬಿಎ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪದವಿಪ್ರಧಾನ ಮಾಡಲಾಯಿತು. ಎಲ್ಲ ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ವರ್ಗ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ನಿಖಿಲಾ ಪೈ ಕಾರ್ಯಕ್ರಮ ನಿರ್ವಹಿಸಿದರು.















