ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು ಇವರ ಆಶ್ರಯದಲ್ಲಿ ಕಿರಿಮಂಜೇಶ್ವರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಕೋಡಿನಲ್ಲಿ ನಡೆಯಿತು.
ವಿವಿಧ ವಿಭಾಗದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಕಿರಿಮಂಜೇಶ್ವರದ ಜನತಾ ನ್ಯೂ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದು ಕೊಂಡಿರುತ್ತಾರೆ.

ಕಿರಿಯರ ವಿಭಾಗ : ( 1-4 )
ಚಿತ್ರಕಲೆ – ರಶ್ಮಿತಾ ಪ್ರಥಮ
ಧಾರ್ಮಿಕ ಪಠಣ – ಅರೇಬಿಕ್ – ನೂಯೀಮ್ ಪ್ರಥಮ
ಆಶುಭಾಷಣ – ಸನ್ವಿಕಾ ದ್ವಿತೀಯ
ಹಿರಿಯರ ವಿಭಾಗ: ( 5 – 7 )
ಭಕ್ತಿ ಗೀತೆ – ರಾಘವಿ ದ್ವಿತೀಯ
ದೇಶಭಕ್ತಿ ಗೀತೆ – ಖುಷಿ ಪ್ರಥಮ
ಪ್ರಬಂಧ ರಚನೆ- ಸಾರಿಕಾ ಡಿ ಪ್ರಥಮ
ಆಶುಭಾಷಣ – ನಮ್ಯ ದ್ವಿತೀಯ
ಧಾರ್ಮಿಕ ಪಠಣ ಅರೇಬಿಕ್ – ಎಂ. ಮಹಾರೂಫ್ ದ್ವಿತೀಯ
ಕವನ ಪದ್ಯ ವಾಚನ – ಉತ್ಸವಿ ದ್ವಿತೀಯ
ಮಿಮಿಕ್ರಿ – ಅದ್ವಿಕ್ ಪ್ರಥಮ
ಧಾರ್ಮಿಕ ಪಠಣ ಸಂಸ್ಕೃತ – ರಾಘವಿ ಪ್ರಥಮ
ಇಂಗ್ಲೀಷ್ ಕಂಟಪಾಟ – ನಿರೂಪಾ ದ್ವಿತೀಯ
ಪ್ರೌಢ ವಿಭಾಗ: ( 8 – 10 )
ಹಿಂದಿ ಭಾಷಣ- ಮಿನಲ್ ಪ್ರಥಮ
ಪ್ರಬಂಧ ರಚನೆ – ದೃತಿ ದ್ವಿತೀಯ
ರಸಪ್ರಶ್ನೆ – ರಿಯಾ ಮತ್ತು ನೇಹಾ ಪ್ರಥಮ
ರಂಗೋಲಿ – ಭೂಮಿಕಾ ಪ್ರಥಮ
ಚಿತ್ರಕಲೆ – ಸುಜಯ್ ಪ್ರಥಮ
ಧಾರ್ಮಿಕ ಪಠಣ – ಪ್ರತಿಕ್ಷ ಪ್ರಥಮ
ಭಾವಗೀತೆ- ಅನ್ವೇಷಣ್ ದ್ವಿತೀಯ
ಚರ್ಚಾ ಸ್ಪರ್ಧೆ – ಪೂಜಾ ಪ್ರಥಮ
ಇಂಗ್ಲೀಷ್ ಭಾಷಣ – ಪೂಜಾ ಪ್ರಥಮ
ಆಶುಭಾಷಣ – ಸಾನಿಕ ಪ್ರಥಮ
ಧಾರ್ಮಿಕ ಪಠಣ ಅರೇಬಿಕ್ – ಮಸೀಹಾ ಪ್ರಥಮ
ಕವನ ವಾಚನ – ಮಾನ್ಯ ಪ್ರಥಮ
ಕನ್ನಡ ಭಾಷಣ- ಸಂಜನಾ ಶೆಟ್ಟಿ ಪ್ರಥಮ
ಭರತನಾಟ್ಯ – ನಂದಿನಿ ಪ್ರಥಮ
ಗಝಲ್ – ಮೊಹಮದ್ ಅಮೀನ್ ಪ್ರಥಮ
ಕವ್ವಾಲಿ – ಆದಿಲ್ ಮತ್ತು ತಂಡ ಪ್ರಥಮ
ಜನಪದ ನೃತ್ಯ – ನವ್ಯ ಮತ್ತು ತಂಡ ಪ್ರಥಮ
ಜನಪದ ಗೀತೆ – ರಿನೋಲಾ ತೃತೀಯ
ವಿದ್ಯಾರ್ಥಿಗಳ ಈ ಮಹೋನ್ನತ ಸಾಧನೆಗೆ ಜನತಾ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಗಣೇಶ್ ಮೊಗವೀರ, ಸಂಸ್ಥೆಯ ಮುಖ್ಯ ಶಿಕ್ಷಕಿಯಾದ ದೀಪಿಕಾ ಆಚಾರ್ಯ ಮತ್ತು ಶಿಕ್ಷಕ ವೃಂದದವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.















