ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಜಿಲ್ಲೆ 3182 ವಲಯ 01ರ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ನಡೆದ ಎಲ್ಲಾ ಸ್ಪರ್ಧೆಗಳಲ್ಲಿ ರೋಟರಿ ಕ್ಲಬ್ ಬೈಂದೂರು ಬಹುಮಾನ ಗಳಿಸುವುದರ ಮೂಲಕ ವಲಯ 1 ಸಾಂಸ್ಕೃತಿಕ ಚಾಂಪಿಯನ್ ಆಗಿದೆ
ಇಲ್ಲಿನ ಆನಗಳ್ಳಿ ರೆಸಾರ್ಟ್ ನಲ್ಲಿ, ರೋಟರಿ ಕುಂದಾಪುರ ಸೌತ್ ಆಯೋಜನೆಯಲ್ಲಿ ನಡೆದ ವಲಯ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ‘ರಿಧಮ್’ ನಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಜಾನಪದ ಗೀತೆಯಲ್ಲಿ ಪೂರ್ಣಿಮಾ ಪೈ ಪ್ರಥಮ ಸ್ಥಾನ, ಸಿನಿಮಾ ಗೀತೆಯಲ್ಲಿ ಜತೀಂದ್ರ ಮರುವಂತೆ ಪ್ರಥಮ ಸ್ಥಾನ, ಏಕವ್ಯಕ್ತಿ ನೃತ್ಯದಲ್ಲಿ ನಾಗೇಂದ್ರ ಬಂಕೇಶ್ವರ್ ಪ್ರಥಮ ಸ್ಥಾನ, ಏಕಪಾತ್ರ ಅಭಿನಯ ಸುಬ್ರಹ್ಮಣ್ಯ ಜಿ. ದ್ವಿತೀಯ ಸ್ಥಾನ, ಮಕ್ಕಳ ನೃತ್ಯದಲ್ಲಿ ನಿಧಿ ನಾಗೇಂದ್ರ ತೃತೀಯ ಸ್ಥಾನ, ಯುಗಳ ಗೀತೆಯಲ್ಲಿ ರಾಘವೇಂದ್ರ ಉಡುಪ ಮತ್ತು ಪೂರ್ಣಿಮ ಪೈ ದ್ವಿತೀಯ ಸ್ಥಾನ, ಗುಂಪುಗಾಯನ ಪ್ರಥಮ ಗುಂಪು ನೃತ್ಯ ಪ್ರಥಮ ಹಾಗೂ ನಾಟಕ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆಯುವುದರೊಂದಿಗೆ ನಡೆದ ಎಲ್ಲಾ 9 ಸ್ಪರ್ಧೆಗಳಲ್ಲಿ ಸಮಗ್ರ ಬಹುಮಾನ ಪಡೆದು ವಲಯ1 ಸಾಂಸ್ಕೃತಿಕ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಈ ಸಂದರ್ಭದಲ್ಲಿ ಸಹಾಯಕ ಗವರ್ನ ಐ.ನಾರಾಯಣ್, ಜಿಲ್ಲಾ ಸಾಂಸ್ಕೃತಿಕ ಚೇರ್ಮನ್ ವಿನಯ್ ಎಚ್.ಡಿ., ಜಯಪ್ರಕಾಶ್ ಶೆಟ್ಟಿ, ಕುಂದಾಪುರ ಸೌತ್ ಕ್ಲಬ್ಬಿನ ಅಧ್ಯಕ್ಷರಾದ ಸಚಿನ್ ನಕ್ಕಿತ್ತಾಯ, ಶ್ರೀನಾಥ್ ರಾವ್ ಬೈಂದೂರು ZL ಪ್ರಸಾದ್ ಪ್ರಭು ಕೌಶಿಕ್ ಯಡಿಯಾಳ, ಅಬ್ದುಲ್ ಬಶೀರ್ ಅಧ್ಯಕ್ಷರಾದ ಸುಬ್ರಮಣ್ಯ ಜಿ. ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.










