ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಕ್ಲಬ್ ಬೈಂದೂರು, ವಾಕ್ ಶ್ರವಣ ವಿಭಾಗ ಯನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ವಾಗ್ಜ್ಯೋತಿ ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲೆಯಲ್ಲಿ ಶ್ರವಣ ತಪಾಸಣೆ ಮತ್ತು ಆಟೋಟ ಸ್ಪರ್ಧೆ ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರವೀಂದ್ರ ಹೆಚ್. ಅವರು ವಹಿಸಿದ್ದರು.
ಮುಖ್ಯ ಅತಿಥಿಯಾಗಿ ರೋಟರಿ ಪೂರ್ವಾಧ್ಯಕ್ಷರಾದ ಪ್ರಕಾಶ್ ಭಟ್ ಉಪ್ಪುಂದ, ಯನೆಪೋಯ ಕಾಲೇಜಿನ ಶ್ರವಣ ತಜ್ಞರು ಪ್ರತೀಕ್ಷಾ, ಪಾಲಕರ ಸಂಘದ ಅಧ್ಯಕ್ಷರಾದ ಶ್ರೀಲತಾ ಜೆ. ಶೆಟ್ಟಿ, ಕ್ಲಿನಿಕಲ್ ಮೇಲ್ವಿಚಾರಕರಾದ ರಚನಾ, ಪ್ರಣೀತಾ ಉಪಸ್ಥಿತರಿದ್ದರು. ಶಿಕ್ಷಕಿ ಪ್ರಮಿಳಾ ಕಾರ್ಯಕ್ರಮ ಸ್ವಾಗತಿಸಿ, ವಂದನಾರ್ಪಣೆ ಗೈದರು.










