ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಮೂರ್ತೆದಾರರ ಹೋರಾಟಕ್ಕೆ ಶಕ್ತಿ ಕೊಟ್ಟವರು ಕೊರಗ ಪೂಜಾರಿ ಅವರು. ಅವರ ನೇತೃತ್ವದಲ್ಲಿ ಮೂರ್ತೆದಾರರ ಹಲವು ಹೋರಾಟಗಳು ನಡೆದ ಇತಿಹಾಸವಿದೆ. ದುಡಿದು ತಿನ್ನುವ ವರ್ಗಕ್ಕೆ ಕೊರಗ ಪೂಜಾರಿ ಅವರು ದೊಡ್ಡ ಶಕ್ತಿಯಾಗಿದ್ದರು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಶನಿವಾರ ಕೋಟ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ಎಸ್. ಬಂಗಾರಪ್ಪ ಸಭಾಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಸಹಕಾರ ರತ್ನ ಪ್ರಶಸ್ತಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಕೊರಗ ಪೂಜಾರಿ ಅವರ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಅಭಿನಂದನಾ ಭಾಷಣ ಮಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಕುಂದಾಪುರದ ಶಾಸಕ ಎ. ಕಿರಣ ಕುಮಾರ್ ಕೊಡ್ಗಿ ಮಾತನಾಡಿ, ಕೊರಗ ಪೂಜಾರಿ ಅವರಿಗೆ ಏಕ ಕಾಲದಲ್ಲಿ ಎರಡು ಪ್ರಶಸ್ತಿ ಸಂದಿದೆ. ಅದು ಆ ಪ್ರಶಸ್ತಿಯ ಗೌರವವು ಹೆಚ್ಚಿದೆ ಎಂದರು.
ಇದೇ ಸಂದರ್ಭದಲ್ಲಿ ಕೊರಗ ಪೂಜಾರಿ, ಪತ್ನಿ ಶಾರದಾ ಅವರನ್ನು ಸಾರ್ವಜನಿಕವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕೋಟ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ ಸಿ. ಕುಂದರ್ ಶುಭ ಹಾರೈಸಿದರು.
ವೇದಿಕೆಯಲ್ಲಿ ಕೋಟ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಜಯರಾಮ ಪೂಜಾರಿ, ನಿರ್ದೇಶಕರಾದ ರಾಜು ಪೂಜಾರಿ, ರಾಮ ಪೂಜಾರಿ, ಜಿ. ಸಂಜೀವ ಪೂಜಾರಿ, ಕೃಷ್ಣ ಪೂಜಾರಿ ಪಿ., ಮಂಜುನಾಥ ಪೂಜಾರಿ, ಭಾರತಿ, ಪ್ರಭಾವತಿ ಉಪಸ್ಥಿತರಿದ್ದರು.
ಶಿಕ್ಷಕ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿ, ಸಂಘದ ಮುಖ್ಯ ಕಾರ್ಯನಿರ್ವಹಣಾಕಾರಿ ಜಗದೀಶ ಕೆಮ್ಮಣ್ಣು ಸ್ವಾಗಿತಿಸಿ, ದಿನೇಶ್ ಪೂಜಾರಿ ವಂದಿಸಿದರು.
















