ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಮತ್ತು ಅಂಜುಮನ್ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ ಇವರ ಆಶ್ರಯದಲ್ಲಿ ಗಂಗೊಳ್ಳಿಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಧನ್ಯ ಯು. (ಚರ್ಚಾ ಸ್ಪರ್ಧೆ ಪ್ರಥಮ), ಝುವೈನಾ ಯೂಸುಫ್ (ಗಜಲ್ ಪ್ರಥಮ) ಪ್ರಾರ್ಥನಾ ಪೈ (ಸಂಸ್ಕೃತ ಭಾಷಣ ದ್ವಿತೀಯ) ಅದಿತಿ ಖಾರ್ವಿ (ಭರತನಾಟ್ಯ ದ್ವಿತೀಯ) ಮತ್ತು ಆಯಿಷಾ ನಿಫಾ (ಉರ್ದು ಭಾಷಣ ತೃತೀಯ) ಬಹುಮಾನಗಳನ್ನು ಪಡೆದಿರುತ್ತಾರೆ.
ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಮತ್ತು ಭೋದಕ ಬೋಧಕೇತರ ಬಳಗವು ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದ್ದಾರೆ.










