ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸ್ಪರ್ಧೆಗಳು ನಮ್ಮನ್ನ ಕ್ರಿಯಾಶೀಲರಾಗಿ ಮಾಡುತ್ತದೆ ಅದಕ್ಕೆ ನಾವು ಪೂರಕವಾಗಿರಬೇಕೆಷ್ಟೇ ಹೊರತು ಮಾರಕವಾಗಿರಬಾರದು ಎಂದು ಸಾಂಸ್ಕೃತಿಕ ಚಿಂತಕರಾದ ಆನಂದ್ ಸಿ. ಕುಂದರ್ ನುಡಿದರು.
ಅವರು ಕೋಟದ ಕಾರಂತ ಥೀಂ ಪಾರ್ಕ್‌ನಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್‌ನ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಶಾಂತಿವನ ಟ್ರಸ್ಟ್ ನಿರ್ದೇಶಕರಾದ ಡಾ. ಶಶಿಕಾಂತ್ ಜೈನ್ ಕಾರ್ಯಕ್ರಮದ ಸ್ವರೂಪಗಳನ್ನು ವಿವರಿಸಿದರು. ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯಿತಿನ ಅಧ್ಯಕ್ಷ ಸತೀಶ್ ಬಾರಿಕೆರೆ, ಜಿಲ್ಲಾ ಸಂಯೋಜಕರಾದ ಕೃಷ್ಣ ಆಚಾರ್ ಉಪಸ್ಥಿತರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಜಿಲ್ಲಾಮಟ್ಟದ ವಿವಿಧ ಸ್ಪರ್ಧೆಗಳು ನಡೆದವು.










