ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ ಎಂಬ ಧ್ಯೇಯವಾಕ್ಯದಂತೆ ಜ್ಞಾನದಾನವೇ ವಿದ್ಯಾಸಂಸ್ಥೆಗಳ ಪ್ರಧಾನಕಾರ್ಯ. ಅದು ಕೇವಲ ಪಠ್ಯಪುಸ್ತಕದ ಶಿಕ್ಷಣಕ್ಕೆ ಸೀಮಿತವಾಗಿರದೆ, ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆಯನ್ನು ಮೂಡಿಸುವ, ಅವರಲ್ಲಿ ಚಿಂತನಾಶೀಲತೆಯನ್ನು ಉದ್ದೀಪನಗೊಳಿಸುವ ಕಾರ್ಯಕ್ರಮಗಳನ್ನೂ ಆಯೋಜಿಸುತ್ತಿರಬೇಕು. ಈ ನಾಡಿನ ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಗಳ ಸಾರವನ್ನು ವಿದ್ಯಾರ್ಥಿ ಸಮೂಹಕ್ಕೆ ತಲುಪಿಸುವ ಕಾರ್ಯವಾಗಬೇಕು. ಆ ನಿಟ್ಟಿನಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಅಂಗಡಿಯಲ್ಲಿ ಭಾವಾಂತರಂಗ-ಪರಿಪೂರ್ಣ ಬದುಕಿನೆಡೆ ನಮ್ಮ ಪಯಣ ಎನ್ನುವ ಸಂಪೂರ್ಣ ಚಟುವಟಿಕೆ ಆಧಾರಿತ ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು 14 ವರ್ಷಗಳಿಂದ ನಡೆಸುತ್ತಿದ್ದು, ಈ ವರ್ಷ ಶನಿವಾರದಂದು ಹಮ್ಮಿಕೊಳ್ಳಲಾಯಿತು. ಈ ಕಾರ್ಯಾಗಾರವನ್ನು ಕಾರ್ಯಕ್ರಮಕ್ಕೆ ಆಗಮಿಸಿದ ಸ೦ಪನ್ಮೂಲ ವ್ಯಕ್ತಿಗಳು ಅಟೊಮಿಕ್ ಸ್ಟ್ರಕ್ಚರ್‌ಗೆ ಪರಮಾಣುಗಳನ್ನು ಪೋಣಿಸುವ ಮೂಲಕ ವಿನೂತನ ರೀತಿಯಲ್ಲಿ ಉದ್ಘಾಟಿಸಿದರು.
ಈ ಕಾರ್ಯಾಗಾರವನ್ನು ಆಯೋಜಿಸುವ ಕುರಿತಾಗಿ ಮಾತನಾಡಿದ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಮತ್ತು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಮಕ್ಕಳ ಭಾವನೆಗಳನ್ನು ಹತ್ತಿಕ್ಕದೆ ಅದನ್ನು ಸರಿಯಾದ ಮಾರ್ಗದಲ್ಲಿ ಸಾಗುವಂತೆ ಮಾಡುವುದು ಶಾಲೆಗಳ ಕರ್ತವ್ಯವಾಗಿದೆ. ಎಲ್ಲಾ ವಿದ್ಯಾರ್ಥಿಗಳೂ ಒಂದೇ ಸಾಧನೆ ಮಾಡಲಾಗದು. ಬೇರೆ ಬೇರೆಯಾದ ಸಾವಿರಾರು ಜೀವನಕ್ಕೆ ಉಪಯೋಗಕ್ಕೆ ಬರುವ ಪಠ್ಯಪುಸ್ತಕಗಳಲ್ಲಿ ಇರದ ವಿಚಾರಗಳೂ ಮಕ್ಕಳ ಅರಿವಿಗೆ ತರುವ ಪ್ರಯತ್ನ ಈ ಭಾವಾಂತರಂಗ ಕಾರ್ಯಕ್ರಮದ ಮೂಲಕ ಮಾಡುತ್ತಿದ್ದೇವೆ. ಎನ್ನುತ್ತಾ ಮಕ್ಕಳು ಹೇಗೆ ಕಾರ್ಯಾಗಾರಗಳಲ್ಲಿ ಭಾಗವಹಿಸಬೇಕೆಂದು ತಿಳಿ ಹೇಳಿದರು.

ಭಾವಾಂತರಂಗವು ನಮ್ಮ ಶಾಲೆಯಲ್ಲಿ ನಡೆಯುವ ವಿಶಿಷ್ಟ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಇದು ವಿದ್ಯಾರ್ಥಿಗಳು ಯಶಸ್ಸಿನತ್ತ ದಾಪುಗಾಲು ಈ ಸಂದರ್ಭದಲ್ಲಿ ೪೩ ವಿವಿಧ ಬಗೆಯ ಕಾರ್ಯಾಗಾರಗಳನ್ನು 47 ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ನಡೆಸಲಾಯಿತು. ಶಿವಾನಂದ ಕಳವೆಯವರು ಪರಿಸರ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರೆ, ನಾರಾಯಣ ಶೇರುಗಾರರು ಅದರ ಅಂಕುರದ ಬಗ್ಗೆ ಮಾಹಿತಿ ನೀಡಿದರು. ಪ್ರಸನ್ನಾ ಪ್ರಸಾದ್ ಫಿಶ್ ವೈರ್ ಹ್ಯಾಂಗಿಂಗ್ ಬಗ್ಗೆ ತಿಳಿಸಿದರೆ, ವೀಣಾ ಪಿ ಶ್ಯಾನುಭೋಗ್ ಏಕಾಗ್ರತೆ ಮತ್ತು ಸ್ಮರಣೆ ಬಗ್ಗೆ ತಿಳಿಸಿದರು.
ನಾಗರತ್ನ ಜಿ ಮಾಡಿ ತಿಳಿ ಆಡಿ ಕಲಿ ಬಗ್ಗೆ ತಿಳಿಸಿದರೆ, ಸದ್ಗುರು ಭಟ್ ಈ ಮೋಷನ್ಸ್ ಬಗ್ಗೆ ತಿಳಿಸಿದರು. ಪ್ರಕಾಶ್ ಭಟ್ ಬಣ್ಣದ ಬದುಕು ವಿಷದಲ್ಲಿ ತಿಳಿಸಿದರೆ, ರಾಜಶೇಖರ್ ತಾಳಿಕೋಟೆ ಕ್ರಿಯೇಟಿವ್ ಪೇಂಟಿಂಗ್ ತಿಳಿಸಿಕೊಟ್ಟರು. ಪೃಥ್ವೀಶ್ ಕೆ ರೂಬಿಕ್ಸ್ ಕ್ಯೂಬ್ ತಿಳಿಸಿಕೊಟ್ಟರೆ, ಶಾಂಭವಿ ರಂಜಿತ್ ಮಂಡಲ ಆರ್ಟ್ ಬಗ್ಗೆ ತಿಳಿಸಿದರು.
ಶ್ರೀಮತಿ ಜ್ಯೋತಿ ಪ್ರಶಾಂತ್ ಈ ಕ್ಷಣ ನನ್ನದೇ ವಿಷಯದಲ್ಲಿ ಮಾಹಿತಿ ನೀಡಿದರೆ, ಶ್ರೀಮತಿ ಸವಿತಾ ಎರ್ಮಾಳ್ ವ್ಯಕ್ತಿತ್ವ ವಿಕಸನದ ಬಗ್ಗೆ ಮಾಹಿತಿ ನೀಡಿದರು. ಸುಧಾ ಎನ್ ಭಂಡಾರಿ ಮಾತನಾಡುವ ಕಲೆ ಬಗ್ಗೆ ತಿಳಿಸಿದರೆ, ಪ್ರಗತಿ ಗಾಳಿಪಟ ತಯಾರಿ ತಿಳಿಸಿಕೊಟ್ಟರು. ತಾರಕೇಶ್ವರಿ ರಾಜಸ್ಥಾನಿ ಗೊಂಬೆಗಳ ಬಗ್ಗೆ ತಿಳಿಸಿದರೆ, ರಾಘವೇಂದ್ರ ಕಲ್ಕೂರ್ ನೇಚರ್ ಆರ್ಟ್ಸ್ ಬಗ್ಗೆ ತಿಳಿಸಿದರು. ಮಾಲಿನಿ ಎಂ ಪಿ ಹಾಡು ಪಾಡು ಬಗ್ಗೆ ತಿಳಿಸಿದರೆ, ಪೂರ್ಣಿಮಾ ಕಲಮಲಶಿಲೆ ಭಾಷೆಯ ಸೊಬಗು, ಸಂವಹನದ ಬಗ್ಗೆ ತಿಳಿಸಿದರು. ರಾಜೇಂದ್ರ ಹಳ್ಳಿಹೊಳೆ ಡ್ರಾಯಿಂಗ್ ತಿಳಿಸಿಕೊಟ್ಟರು. ಶಕುಂತಲಾ ಆರ್ ಶೆಣೈ ಸಂಸ್ಕೃತ ಬೌದ್ಧಿಕ ಆಟಗಳ ಬಗ್ಗೆ ಮಾಹಿತಿ ನೀಡಿದರೆ, ವಾಣೀಶ್ರೀ ಅಶೋಕ್ ಐತಾಳ್ ಕತೆಯ ತೋರಣ ಖುಷಿಯ ಹೂರಣದ ಬಗ್ಗೆ ತಿಳಿಸಿದರು.
ಸಜ್ಜನ್ ಪೇಸ್ ಅನಾಟಮಿ ಬಗ್ಗೆ ತಿಳಿಸಿದರೆ, ಅಮಿತ ಕ್ರಮಧಾರಿ ಗಾಜಿನ ಬಾಟಲ್ ಪೇಂಟಿಂಗ್, ಅಶ್ವಿನಿ ಕೊಡವೂರು ರಂಗೋಲಿ ಬಿಡಿಸಲು ತಿಳಿಸಿದರೆ, ಅನುಷಾ ರತಿನ್ ಡೆಕೋರೇಟಿವ್ ಹ್ಯಾಂಗಿಂಗ್ ತಿಳಿಸಿದರು. ರಿಚಾ ಲಿಪೆನ್ ಆರ್ಟ್ ತಿಳಿಸಿದರು. ಪ್ರಿಯಾ ಎಸ್. ಕಾಮತ್ ಕ್ಲೇ ಮಾಡಲಿಂಗ್ ಬಗ್ಗೆ ತಿಳಿಸಿದರೆ, ಅಭಿಷೇಕ್ ಚನ್ನಪಟ್ಟಣದ ಗೊಂಬೆ ಬಗ್ಗೆ ತಿಳಿಸಿದರು.
ಶಿಲ್ಪಾ ಗಣೇಶ್ ಬೆಂಕಿಬಳಸದೆ ಅಡುಗೆ ತಯಾರಿ ನಡೆಸಿ ಮಕ್ಕಳಿಗೆ ಸವಿರುಚಿಯ ಅನುಭವ ನೀಡಿದರು. ರವಿಪ್ರಸಾದ್ ಆಚಾರ್ ಪೇಪರ್ ಆರ್ಟ್ ಬಗ್ಗೆ ತಿಳಿಸಿದರೆ, ಶ್ರೀ ಮಂಜುನಾಥ ದೇವಾಡಿಗರು ಪಿಒಪಿ ಮಾಸ್ಕ್ ಕಲೆಯನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟರು. ನಂದಾ ಪೇಟ್ಕರ್ ಕಲೆ ಮತ್ತು ಪರಿಸರದ ಬಗ್ಗೆ ಮಾಹಿತಿ ನೀಡೀದರೆ, ಸುರೇಖಾ ಭಟ್ ಹೂವು ಕಟ್ಟುವುದನ್ನು ತಿಳಿಸಿಕೊಟ್ಟರು. ಉಷಾ ಕೆ ಕೀಚೈನ್ ತಯಾರಿಯನ್ನು ತಿಳಿಸಿಕೊಟ್ಟರೆ, ವಿನುತಾ ಲಸ್ರಾದೋ ಪೇಪರ್ ಕ್ರಾಫ಼್ಟ್ ಬಗ್ಗೆ ತಿಳಿಸಿಕೊಟ್ಟರೆ, ಜ್ಯೋತಿ ಜಿ ಶೇಟ್ ಆವೆ ಮಣ್ಣಿನ ಕಲಾಕೃತಿಗಳ ಬಗ್ಗೆ ತಿಳಿಸಿದರು. ವೈಷ್ನವಿ ನಾಗರಾಜ್ ಮೆಹೆಂದಿ ರಚನೆಯನ್ನು ಅಭ್ಯಾಸ ಮಾಡಿಸಿದರೆ, ಗೀತಾ ಪಿ ಶೆಟ್ಟಿ ರಬ್ಬರ್ ಬ್ಯಾಂಡ್ ಗೊಂಬೆಯನ್ನು ರಚಿಸಿ ಮಕ್ಕಳನ್ನು ಪ್ರೇರೇಪಿಸಿದರೆ, ಸುಮತಿ ಎ ಕಾಮತ್ ಆರ‍್ಟಿಫಿಷೀಯಲ್ ರಂಗೋಲಿಗಳನ್ನು ತಿಳಿಸಿಕೊಟ್ಟರು.
ಮಂಜುಳಾ ಕಿರಣ್ ಮಿರರ್ ವರ್ಕ್ ತಿಳಿಸಿಕೊಟ್ಟರೆ, ಶ್ರೀಮತಿ ಯಶೋಧಾ ಗೂಡುದೀಪಗಳ ತಯಾರಿಯನ್ನು ತಿಳಿಸಿಕೊಟ್ಟರು. ರೂಪಾ ರಾವ್ ಪಂಚಗವ್ಯ ಪ್ರೊಡಕ್ಟ್ಸ್ ಬಗ್ಗೆ ಮಾಹಿತಿ ನೀಡಿದರೆ, ಆಶಾ ಹೆಚ್ ಬೀಡ್ಸ್ ಓರ್ನಮೆಂಟ್ಸ್ ಬಗ್ಗೆ ತಿಳಿಸಿದರು.
ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮೀ ಎಂ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸುಜಾತ ಸದಾರಾಮ್, ಶಿಕ್ಷಕ-ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿಗಳು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶಾಲಾ ಉಪಪ್ರಾಂಶುಪಾಲರಾದ ರಾಮ ದೇವಾಡಿಗರು ಕಾರ್ಯಕ್ರಮ ನಿರೂಪಿಸಿದರು.















