ಕುಂದಾಪುರ: ತಾಲೂಕು ಯಡ್ಯಾಡಿ-ಮತ್ಯಾಡಿ ಗ್ರಾಮ ಗುಡ್ಡಟ್ಟು ಬಾವಿಗೆ ರಾತ್ರಿ ವೇಳೆಯಲ್ಲಿ ಬಿದ್ದಿದ್ದ ಹೆಣ್ಣು ಚಿರತೆಯನ್ನು ಸ್ಥಳೀಯರು ಅರಣ್ಯ ಇಲಾಖೆಯ ಸಹಕಾರದೊಂದಿಗೆ ರಕ್ಷಿಸಿದ ಘಟನೆ ವರದಿಯಾಗಿದೆ.
ಗುಡ್ಡಟ್ಟುವಿನ ಗುಡ್ಡಿಮನೆ ಸೀತಾ ಮರಕಾಲ್ತಿ ಎಂಬುವವರ ಮನೆಯ ಆವರಣವಿಲ್ಲದ ಸುಮಾರು ೫೦ ಅಡಿ ಆಳದ ಬಾವಿಗೆ ನಿನ್ನೆ ರಾತ್ರಿ ಒಂದು ಹೆಣ್ಣು ಚಿರತೆಯು ಬಿದ್ದಿತ್ತು. ಬೆಳೆಗ್ಗೆ ಹೊತ್ತಿಗೆ ಬಾವಿಗೆ ನೀರನ್ನು ತರಲು ಹೋದಾಗ ಇದು ಗಮನಕ್ಕೆ ಬಂದು, ಅರಣ್ಯಾಧಿಕಾರಿಯವರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸಿಬ್ಬಂಧಿಗಳೊಂದಿಗೆ ಸ್ಥಳಕ್ಕಾಗಮಿಸಿದಶಂಕರನಾರಾಯಣ ವಲಯದ ಅರಣ್ಯಾಧಿಕಾರಿ ಬ್ರಿಜೇಶ್ ವಿನಯ ಕುಮಾರ್ ಸುಮಾರು ಐದು ಗಂಟೆಗಳ ಕಾರ್ಯಾಚರಣೆ ನಡೆಸಿ, ಚಿರತೆಯನ್ನು ಸುರಕ್ಷಿತವಾಗಿ ಹಿಡಿದು, ಬೋನಿನಲ್ಲಿ ಹಾಕಿ ಮೂಕಾಂಬಿಕಾ ಅಭಯಾರಣ್ಯದಲ್ಲಿ ಬಿಟ್ಟಿದ್ದಾರೆ.
ಕಾರ್ಯಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಮಂಜು ಗಾಣಿಗ, ಹರೀಶ ಕೆ., ಕೆ. ರವಿ, ಕುಮಾರಿ ಆಶಾ, ಅರಣ್ಯ ರಕ್ಷಕರಾದ ಆನಂದ ಬಳೆಗಾರ, ರವಿ, ಶ್ರೀಕಾಂತ, ಗುಂಡೇರಾವ್ ಶಾಖಾ, ಹನುಮಂತರಾಯಪ್ಪ, ಮಂಜುನಾಥ, ಗುರುರಾಜ ಕೆ, ರವೀಂದ್ರ ಮತ್ತು ಅರಣ್ಯ ವೀಕ್ಷಕರಾದ ರವಿ, ವಿಠಲ ನಾಯ್ಕ, ಲಕ್ಷ್ಮಣ, ಕೃಷ್ಣಮೂರ್ತಿ ಹೆಬ್ಬಾರ್ ಮತ್ತು ಸ್ಥಳೀಯರಾದ ಪ್ರಶಾಂತ, ರಮೇಶ, ಬಸವ, ಸತೀಶ ಶಿರಿಯಾರ, ರಮೇಶ ಹೆಬ್ಬಾರ್ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.