ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಕೋಟೇಶ್ವರದ ಕೊಡಿ ಹಬ್ಬಕ್ಕೆ ಹೋದ ಮಹಿಳೆ ಕಾಣೆಯಾಗಿದ್ದಾರೆ. ಅವರು ಕೋಟೇಶ್ವರದ ಹೊದ್ರೋಳಿಯ ದಿ. ಸಂಜೀವ ಪೂಜಾರಿ ಅವರ ಪುತ್ರಿ ರೇಷ್ಮಾ (25).
ಅವರು ಪತಿ ಮನೆ ತರಿಕೆರೆ ತಾಲೂಕಿನ ಎರಂಗಾಪುರ ಗ್ರಾಮದಿಂದ ಪತಿಯ ಜತೆ ಆಗಮಿಸಿದ್ದರು. ಡಿ. 6ರಂದು ಜಾತ್ರೆಗೆ ಹೋದವರು ಕುಂದಾಪುರ ಶಾಸ್ತ್ರಿ ಸರ್ಕಲ್ ವರೆಗೆ ಬಂದಿದ್ದು ಬಳಿಕ ಕಾಣೆಯಾಗಿದ್ದಾರೆ.
5.4 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು ಕಾಣೆಯಾಗುವಾಗ ನೇರಳೆ ಬಣ್ಣದ ಸ್ಟೀವ್‌ಲೆಸ್ ಟಾಪ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಕರಿಮಣಿ ಸರ ಹಾಗೂ 2 ಚಿನ್ನದ ಉಂಗುರ ಧರಿಸಿದ್ದರು. ಅವರ ಪತಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










