ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸುದೀರ್ಘ 19 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿತ್ತಿದ್ದ ಪ್ರೊ. ಅಂಬಲಪಾಡಿ ನಾರಾಯಣಾಚಾರ್ಯ (88ವರ್ಷ) ಅವರಿಗೆ ಶನಿವಾರದಂದು ಕಾಲೇಜಿನ ಆಡಳಿತ ಮಂಡಳಿ ಮತ್ತು ವಿಶ್ವಸ್ಥ ಮಂಡಳಿಯವರು ಮತ್ತು ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಶ್ರದ್ಧಾಂಜಲಿ ಸಭೆ ನಡೆಸಿ ಪುಷ್ಪ ನಮನ ಸಲ್ಲಿಸಿ ಅವರ ಆತ್ಮಕ್ಕೆ ಶ್ರದ್ಧಾಂಜಲಿ ಕೋರಿದರು.
ನುಡಿನಮನ ಸಲ್ಲಿಸಿದ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಯು.ಎಸ್. ಶೆಣೈ ಅವರು ಮಾತನಾಡಿ, ಅಂಬಲಪಾಡಿ ನಾರಾಯಣಾಚಾರ್ಯ ಸಹೃದಯಿ, ಪ್ರಾಮಾಣಿಕ, ಆದರ್ಶ ಮತ್ತು ಅನುಕರಣೀಯ ಪ್ರಾಂಶುಪಾಲರಾಗಿದ್ದರು. ಅವರು ಅವಧಿಯಲ್ಲಿ ಕಾಲೇಜು ತುಂಬಾ ಅಭಿವೃದ್ಧಿಯನ್ನು ಹೊಂದಿತ್ತು. ಅಲ್ಲದೇ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮನೋಭಾವ ಮತ್ತು ಶಿಸ್ತಿನಿಂದ ವಿದ್ಯಾರ್ಥಿಗಳು ಪ್ರೀತಿಗೆ ಪಾತ್ರರಾಗಿದ್ದರು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಮಾತನಾಡಿ, ಕಾಲೇಜಿನ ಏಳಿಗೆಗ ಮತ್ತು ಶೈಕ್ಷಣಿಕ ವಾತಾವರಣ ನಿರ್ಮಾಸುವಲ್ಲಿ ಅವರು ಪಾತ್ರ ಹಿರಿಯದು ಎಂದು ಹೇಳಿದರು.
ಹಿರಿಯ ಲೇಖಕಿ ನಿವೃತ್ತ ಪ್ರಾಧ್ಯಾಪಕಿ ಡಾಪಾರ್ವತಿ ಜಿ. ಐತಾಳ್ ಮಾತನಾಡಿ, ಅವರು ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಮತ್ತು ಕಾಲೇಜಿನಲ್ಲಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಅವರು ಕೊಡುಗೆ ಅಮೂಲ್ಯವಾಗಿತ್ತು ಎಂದು ಹೇಳಿದರು.
ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಕೆ. ಗೋಪಾಲ್ ಮಾತನಾಡಿ, ವಿದ್ಯಾರ್ಥಿಗಳೊಂದಿಗೆ ತುಂಬಾ ಶಿಸ್ತಿನಿಂದ ಇರುವ ಅಷ್ಟೇ ಭಿನ್ನ ವ್ಯಕ್ತಿತ್ವದವರು. ಅವರಲ್ಲೊಬ್ಬ ಕೋಮಲ ವ್ಯಕ್ತಿ ಸಹ ಇರುವುದನ್ನು ಅವರು ವಿದ್ಯಾರ್ಥಿಯಾಗಿ ಗಮನಿಸಿದ್ದೇನೆ ಎಂದು ಹೇಳಿದರು.
ಇನ್ನೋರ್ವ ವಿದ್ಯಾರ್ಥಿ ಗೆಲಾಕ್ಸಿ ಸ್ಪೋರ್ಟ್ಸ್ ಇದರ ಮಾಲೀಕರಾದ ಸದಾನಂದ ನಾವಡ ಅವರು ನಮ್ಮಂತಹ ವಿದ್ಯಾರ್ಥಿಗಳು ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕವಾಗಿ ಬೆಳೆಯುವಲ್ಲಿ ಅವರ ಪಾತ್ರ ದೊಡ್ಡದು. ಅವರು ಶಿಸ್ತು ಬದ್ಧತೆ ಮತ್ತು ಕರ್ತವ್ಯ ನಿಷ್ಠೆ ಮೀರಿಸುವವರಿಲ್ಲ ಎಂದು ಹೇಳಿದರು.
ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎಮ್.ಗೊಂಡ ನುಡಿನಮನ ಸಲ್ಲಿಸಿದರು. ಭಂಡಾರ್ಕಾರ್ಸ್ ಕಾಲೇಜಿನ ಪ್ರಾಧ್ಯಾಪಕ ವೃಂದ ಮತ್ತು ಬೋಧಕೇತರ ಸಿಬ್ಬಂದಿಗಳು ಪ್ರೊ. ಅಂಬಲಪಾಡಿ ನಾರಾಯಣಾಚಾರ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.















