ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸ್ನೇಹಕೂಟ ಬೆಳೆದ ರೀತಿ ಅದರ ಸಾಮಾಜಿಕ ಕಾರ್ಯದಶ ದಿಕ್ಕಿನಲ್ಲೂ ಪಸರಿಸಿದೆ ಎಂದು ಮಣೂರು ಗೀತಾನಂದ ಟ್ರಸ್ಟ್ ಪ್ರವರ್ತಕ ಆನಂದ್ ಸಿ. ಕುಂದರ್ ಹೇಳಿದರು.
ಅವರು ಗುರುವಾರ ಇಲ್ಲಿನ ಕೋಟದ ಮಣೂರು ಶ್ರೀ ರಾಮಪ್ರಸಾದ ಶಾಲಾ ವಠಾರದಲ್ಲಿ ಸ್ನೇಹಕೂಟ ಮಣೂರು ಇದರ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಕೋಟದ ಪಂಚವರ್ಣ ಸಂಘಟನೆಯ ಸಹಯೋಗದೊಂದಿಗೆ ದಶಮ ಡಿಂಡಿಮದ ಸವಿ ಅವ್ಯಕ್ತ ಪ್ರತಿಭೆಗಳ ಸಂಗಮ ಎಂಬ ಶೀರ್ಷಿಕೆಯಡಿ ಊರ್ಮನಿ ಹಬ್ಬ ಮಣೂರು ಮಹಿಳಾ ಗ್ರಾಮೀಣ ಜಾತ್ರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಶಕ್ತರಿಗೆ, ವಿದ್ಯಾರ್ಥಿಗಳ ಉನ್ನತಿ, ಗ್ರಾಮೀಣ ಹಳ್ಳಿ ಭಾಗದ ಮಹಿಳೆಯನ್ನು ಮಂಚೂಣಿಗೆ ತಂದು ನಮ್ಮ ಸಂಸ್ಕೃತಿಯನ್ನು ಪ್ರತಿ ಮನೆಯಲ್ಲಿ ಜಾಗೃತಗೊಳಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ ಇಂತಹ ಸಂಘಟನೆಗಳು ಇನ್ನಷ್ಟು ಸಮಾಜಮುಖಿಕಾರ್ಯ ಮಾಡಲಿ ಎಂದು ಆಶಿಸಿ ಶುಭಹಾರೈಸಿದರು.
ಕಾರ್ಯಕ್ರಮವನ್ನು ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್. ಕುಂದರ್ ಉದ್ಘಾಟಿಸಿದರು. ಸ್ನೇಹಕೂಟದ ಪ್ರಧಾನ ಸಂಚಾಲಕಿ ಭಾರತಿ ವಿ. ಮಯ್ಯ ತುಳಸಿ ಗಿಡ ನೆಟ್ಟು ಪರಿಸರ ಜಾಗೃತಿ ಮೊಳಗಿಸಿದರು.
ದಶಮಾನೋತ್ಸವದ ಹಿನ್ನಲ್ಲೆಯಲ್ಲಿ ಸ್ಥಳೀಯ ಹತ್ತು ವಿಶೇಷ ಸಾಧಕರಿಗೆ ಸನ್ಮಾನ, ಸಮಾಜಸೇವಕ ಶ್ರೀಕಾಂತ್ ಶೆಣೈ ಹೇರಂಬ ಕಲಾವೇದಿಕೆ ಅನಾವರಣಗೊಳಿಸಲಿದರು. ಸ್ನೇಹಕೂಟದ ಸದಸ್ಯರಿಂದ ರಚಿತವಾದ ಪುಸ್ತಕವನ್ನು ಕಸಾಪ ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ ಬಿಡುಗಡೆಗೊಳಿಸಿ ಪರಿಚಯಿಸಿದರು.
ಸಾಲಿಗ್ರಾಮ ಶ್ರೀಗುರುನಸಿಂಹ ದೇವಸ್ಥಾನದ ಅಧ್ಯಕ್ಷರಾದ ಡಾ. ಕೆ. ಎಸ್ ಕಾರಂತ್ ಶುಭಾಶಂಸನೆ ಗೈದರು.
ಸಾಹಿತಿ ಪೂರ್ಣಿಮಾ ಕಮಲಶಿಲೆ, ಆಧ್ಯಾತ್ಮಿಕ ಚಿಂತಕಿ ಸುನಿತಾ ಉಡುಪ ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆ ಹಾಗೂ ಗ್ರಾಮೀಣ ಪರಂಪರೆ,ಆಧ್ಯಾತ್ಮಿಕ ಸಂಸ್ಕಾರದ ಬಗ್ಗೆ ಸವಿವರವಾಗಿ ತಿಳಿಸಿದರು.
ಸ್ಥಳೀಯ ಮಹಿಳಾಮಂಡಲವನ್ನು ಗುರುತಿಸಿ ಗೌರವಿಸಲಾಯಿತು. ದಶಮಾನೋತ್ಸವದ ಹಿನ್ನಲ್ಲೆಯಲ್ಲಿ ಕಳೆದ ಹತ್ತುವರ್ಷಗಳ ನಿರಂತರ ಸಂಚಾಲಕಿಯಾಗಿ ಸೇವೆ ಸಲ್ಲಿಸಿದ ಭಾರತಿ ವಿ ಮಯ್ಯ ಇವರನ್ನು ಸಂಘದ ಪದಾಧಿಕಾರಿಗಳು ಸದಸ್ಯರು ಗೌರವಿಸಿಕೊಂಡರು.
ಪ್ರತಿಭಾ ಪುರಸ್ಕಾರ, ಸಾಲಿಗ್ರಾಮದ ಹೊಸಬದುಕು ಆಶ್ರಮಕ್ಕೆ ಪರಿಕರ ವಿತರಣೆ ಕಾರ್ಯಕ್ರಮಗಳು ಜರಗಿದವು.
ಕೋಟ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ, ಪಂಚವರ್ಣದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ, ಶ್ರೀದೇವಿ ಹಂದೆ, ಸ್ನೇಹಕೂಟದ ನಿರ್ದೇಶಕರಾದ ವಿಷ್ಣುಮೂರ್ತಿ ಮಯ್ಯ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಸ್ನೇಹಕೂಟ, ಪಂಚವರ್ಣ ಮಹಿಳಾ ಮಂಡಲದವರಿಂದ ಸಾಂಸ್ಕೃತಿಕ ನೃತ್ಯ ವೈಭವ, ಅರೆಹೊಳೆ ಪ್ರತಿಷ್ಠಾನ ಅವರಿಂದ ಬಿಡುವವನೇ ಬ್ರಹ್ಮಲಿಂಗ ನೃತ್ಯ ರೂಪಕ ನಡೆಯಿತು.
ಸ್ನೇಹಕೂಟದ ಸಂಚಾಲಕಿ ಭಾರತಿ ವಿ. ಮಯ್ಯ ಸ್ವಾಗತಿಸಿ, ಪ್ರಾಸ್ತಾವನೆ ಸಲ್ಲಿಸಿದರು. ಅಕ್ಷತಾ ಗಿರೀಶ್, ನಾಗರತ್ನ ಹೇರ್ಳೆ ಕಾರ್ಯಕ್ರಮ ನಿರೂಪಿಸಿದರು. ಸುವರ್ಣಲತಾ ವಂದಿಸಿದರು. ಸುಜಾತ ಬಾಯರಿ ವನೀತಾ ಉಪಾಧ್ಯ, ಸ್ಮೀತಾ ರಾಣಿ ಸಹಕರಿಸಿದರು.
















