Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಚಡಗ ಕಾದಂಬರಿ ಪ್ರಶಸ್ತಿ ಪ್ರದಾನ: ಸಾಹಿತ್ಯ ಇರುವುದು ಮನರಂಜನೆಗೆ ಮಾತ್ರವಲ್ಲ – ಬೆಳಗೋಡು ರಮೇಶ  
    ಊರ್ಮನೆ ಸಮಾಚಾರ

    ಚಡಗ ಕಾದಂಬರಿ ಪ್ರಶಸ್ತಿ ಪ್ರದಾನ: ಸಾಹಿತ್ಯ ಇರುವುದು ಮನರಂಜನೆಗೆ ಮಾತ್ರವಲ್ಲ – ಬೆಳಗೋಡು ರಮೇಶ  

    Updated:08/01/2026No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕೋಟ:
    ಓದುಗನ ಅರಿವಿನ ಮಟ್ಟವನ್ನು ಹೆಚ್ಚಿಸುವ ಪ್ರಯತ್ನವನ್ನು ಒಂದು ಕಾದಂಬರಿಯ ಮೂಲಕ ನಿರೀಕ್ಷಿಸುವುದು ಸಮಂಜಸವೇ ಎಂಬ ಪ್ರಶ್ನೆಗೆ ಉತ್ತರವಾಗಿ ಅದ್ಭುತ ವೇಗದಿಂದ ಜಗತ್ತು ಬದಲಾಗುತ್ತಿರುವಾಗ ಸೃಜನಶೀಲ ಸಾಹಿತ್ಯವೂ ಅರಿವನ್ನು ಸದಾ ಹೊಸತಾಗಿಸುವ ಮಾಧ್ಯಮವಾಗಬೇಕು ಎಂಬುದನ್ನು ನಾವು ಒಪ್ಪಿಕೊಂಡ ಹಿನ್ನೆಲೆಯಲ್ಲಿ ರಮ್ಯ ಎಸ್. ಅವರ ವರ್ಣತಂತು ಕಾದಂಬರಿಯನ್ನು ಈ ವರ್ಷದ ಚಡಗ ಕಾದಂಬರಿ ಪುರಸ್ಕಾರಕ್ಕೆ ಆಯ್ಕೆಗೊಳಿಸಿ ಪ್ರದಾನಿಸಲಾಯಿತು.

    Click Here

    Call us

    Click Here

    ಕಾದಂಬರಿಕಾರ್ತಿ ರಮ್ಯ ಎಸ್. ಈ ಕಾದಂಬರಿಯಲ್ಲಿ ನೀಡುವ ಜೈವಿಕವಿಜ್ಞಾನದ ವಿವರಗಳು ಜೀವಸೃಷ್ಟಿಯ ನಿಗೂಢಗಳನ್ನು ಬಿಚ್ಚಿಡುವುದು ಮಾತ್ರವಲ್ಲ, ದೇಹಾರೋಗ್ಯ ರಕ್ಷಣೆಯ ಕುರಿತಂತೆ ಹೊಸ ಅರಿವನ್ನು ಆಗುಮಾಡಿಕೊಡುತ್ತದೆ. ವರ್ಣತಂತು ಕಾದಂಬರಿ ನಮಗೆಯಾಕೆ ಪ್ರಸ್ತುತವಾಗುತ್ತದೆಂದರೆ, ಬದುಕು ಸವಾಲುಗಳನ್ನು ಒಡ್ಡುತ್ತಾ ಹೋದಹಾಗೆ ವಿಜ್ಞಾನವು ಹೊಸ ಉತ್ತರಗಳನ್ನು ಹುಡುಕಿಕೊಡುತ್ತಾ ಹೋಗುವ ಚೋದ್ಯವನ್ನು ಈ ಕಾದಂಬರಿ ನಮ್ಮೆದುರು ತೆರೆದಿಡುತ್ತದೆ. ತನ್ಮೂಲಕ ಸೃಷ್ಟಿಯ ಕೌತುಕತೆಯ ಬಗ್ಗೆ ಓದುಗರನ್ನು ಅಧ್ಯಯನಾಸಕ್ತರನ್ನಾಗಿಸುವ ಕೆಲಸವನ್ನೂ ಮಾಡುತ್ತದೆ, ಎಂದಾದರೆ ಸಾಹಿತ್ಯದಿಂದ ಬೇರೇನನ್ನು ನೀವು ನಿರೀಕ್ಷಿಸುತ್ತೀರಿ? ಸಾಹಿತ್ಯ ಇರುವುದು ಮನರಂಜನೆಗಾಗಿ ಮಾತ್ರವಲ್ಲ ಎನ್ನುವುದನ್ನು ಸ್ಪಷ್ಟಪಡಿಸುವ ಕೆಲಸವನ್ನು ವರ್ಣತಂತು ಕಾದಂಬರಿಯು ಮಾಡಿದಂತಿದೆ ಎಂದು ಬೆಳಗೋಡು ರಮೇಶ ಭಟ್ಟರು ಅಭಿಪ್ರಾಯಪಟ್ಟರು.

    ಕೋಟದ ಮಿತ್ರಮಂಡಳಿಯ ಸಹಕಾರದೊಂದಿಗೆ, ಕೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಡಾ| ಕಾರಂತ ಸಭಾಂಗಣದಲ್ಲಿ ಕೋಟೇಶ್ವರದ ಎನ್.ಆರ್.ಎ.ಎಮ್.ಎಚ್. ಪ್ರಕಾಶನದ ವತಿಯಿಂದ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇತರರೊಡಗೂಡಿ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಪುರಸ್ಕಾರವನ್ನು ಕಾದಂಬರಿಯ ಲೇಖಕಿ ರಮ್ಯ ಎಸ್. ಅವರಿಗೆ ಪ್ರದಾನಿಸಿ ಪ್ರಶಸ್ತಿಯ ಮಹತ್ವದ ಕುರಿತು ಮಾತನಾಡಿ, ಯಾವುದೇ ಬಣಕ್ಕೆ, ಸಾಹಿತ್ಯಿಕ ವಲಯಕ್ಕೆ ಸೇರದಿರುವ ಮೂವರು ಸಾಮಾನ್ಯ ಓದುಗರ ಅಭಿಪ್ರಾಯದೊಂದಿಗೆ ಪ್ರಶಸ್ತಿಗೆ ಪಾತ್ರವಾಗುವ ಕೃತಿಯ ಆಯ್ಕೆಯು ಸಂಪೂರ್ಣವಾಗಿ ಪಕ್ಷಪಾತ ರಹಿತವಾಗಿರುತ್ತದೆ ಎಂಬುವುದೇ ಮುಖ್ಯ. ಅಂತೆಯೇ ಹಲವರ ಓದಿಗೆ ಪರ್ಯಾಯವಾಗಿ ಕಾರಣವಾಗುವ ಸ್ಪರ್ಧಾಪ್ರಾಯೋಜಕರು ಅಭಿನಂದನಾರ್ಹರು ಎಂದರು.

    ‘ಸ್ಥಿತಿ ಗತಿ’ಪ್ರಕಾಶಕಿ ಡಾ| ಸಬಿತಾ ಆಚಾರ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಚಡಗರ ಸಂಸ್ಮರಣೆಗೈದರು. ಚಡಗರ ಸುಪುತ್ರ ಬೆಂಗಳೂರಿನ ಶೇಷನಾರಾಯಣ ಚಡಗ ಶುಭಾಶಂಸನೆಗೈದರು. ನಿವೃತ್ತ ಶಿಕ್ಷಕಿ  ಕಮಲಾ ಪ್ರಾರ್ಥನೆ ಗೈದರು. ಕಾರ್ಯಕ್ರಮವನ್ನು ನಿವೃತ್ತ ಬ್ಯಾಂಕ್ ಉದ್ಯೋಗಿ ಮಂಜುನಾಥ ಉಪಾಧ್ಯ ನಿರೂಪಿಸಿ, ಸಹಕರಿಸಿದರು. ಪ್ರಶಸ್ತಿ ಪ್ರಾಯೋಜಕ ಕೋಟೇಶ್ವರದ ಡಾ| ಎನ್. ಭಾಸ್ಕರ ಆಚಾರ್ಯ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿ, ನಿವೃತ್ತ ಮುಖ್ಯ ಶಿಕ್ಷಕ ಪಿ. ಶ್ರೀಪತಿ ಹೇರ್ಳೆ ವಂದಿಸಿದರು.

    Kota
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ

    21/05/2026

    ಕುಂದಾಪುರ: ಬಲಾಡಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ

    21/05/2026

    ಶಂಕರನಾರಾಯಣ: ಕಟ್ಟೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶಿಲಾದೇಗುಲ ಲೋಕಾರ್ಪಣೆ

    21/05/2026
    Leave A Reply Cancel Reply

    seven + seventeen =

    Call us

    Click Here

    Call us

    Call us

    Call us
    Highest Viewed Recently
    • ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ
    • 21ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಳ್ವಾಸ್ ವಿದ್ಯಾರ್ಥಿನಿಯರು
    • ಕುಂದಾಪುರ: ಬಲಾಡಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ
    • ಶಂಕರನಾರಾಯಣ: ಕಟ್ಟೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶಿಲಾದೇಗುಲ ಲೋಕಾರ್ಪಣೆ
    • ಬಹುಮಾನ ಹಣ ಮಂಜೂರು: ಅರ್ಜಿ ಆಹ್ವಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.