ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಯಾವುದೇ ಧಾರ್ಮಿಕ ಕ್ಷೇತ್ರದ ವಾರ್ಷಿಕ ಬ್ರಹ್ಮ ರಥೋತ್ಸವದ ಪೂರ್ವಭಾವಿ ಸಿದ್ಧತೆಗಳಲ್ಲಿ ಪ್ರಮುಖವಾದದ್ದು ರಥವನ್ನು ಸಜ್ಜುಗೊಳಿಸುವ ಕಾರ್ಯಕ್ರಮ ಶುಕ್ರವಾರ ಬೆಳಿಗ್ಗೆ ಶ್ರೀ ಕ್ಷೇತ್ರ ಸಾಲಿಗ್ರಾಮದಲ್ಲಿ ಶ್ರೀ ನಾಗದೇವರಿಗೆ ಪವನಾಭಿಷೇಕ, ಶ್ರೀ ನರಸಿಂಹ ದೇವರಿಗೆ ಪಂಚಾಮೃತಾಭಿಷೇಕ, ಹರಿವಾಣ ನೈವೇದ್ಯ ಮುಂತಾದ ಸೇವೆಗಳ ನಂತರ ಸಾಮೂಹಿಕ ಫಲ ಪ್ರಾರ್ಥನೆಯೊಂದಿಗೆ ರಥಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ರಥಾರಂಭ ಕಾರ್ಯಕ್ಕೆ ಸಡಗರದಿಂದ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ.ಎಸ್.ಕಾರಂತ, ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ, ಕೂಟ ಮಹಾ ಜಗತ್ತಿನ ಕೇಂದ್ರ ಸಂಸ್ಥೆಯ ಅಧ್ಯಕ್ಷ ಸತೀಶ ಹಂದೆ, ಗ್ರಾಮ ಮೊಕ್ತೇಸರ ವೃಂದದ ಮಹಾಬಲ ಹೇರ್ಳೆ, ಆನಂದರಾಮ ಹೇರ್ಳೆ, ಗೆಳೆಯರ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ,ವಾಸುಪಾಧ್ಯ, ಶ್ರೀನಿವಾಸ ಉಪಾಧ್ಯ, ವಿ.ಜಿ.ಮಯ್ಯ,ಅರ್ಚಕ ಜನಾರ್ದನ ಅಡಿಗ, ನಾಗಭೂಷಣ ಹೆಬ್ಬಾರ, ದೇವಕಾರಿ ರಘರಾಮ ಹೆಬ್ಬಾರ, ಕಚೇರಿ ಪ್ರಬಂಧಕ ನಾಗರಾಜ ಹಂದೆ, ಸಹಾಯಕ ಪ್ರಬಂಧಕ ಗಣೇಶ ಭಟ್ಟ, ಪ್ರಮುಖ ಬಾಣಸಿಗ ಸುಬ್ರಹ್ಮಣ್ಯ ಐತಾಳ, ಸಿಬ್ಬಂದಿ ಅಖಿಲೇಶ, ದೇವಳಿ ಸುಮಖ ಮತ್ತು ಸುಬ್ರಹ್ಮಣ್ಯ ಐತಾಳ ಸಹೋದರರು, ರಥದ ಪಾರಂಪರಿಕ ನಿರ್ವಹಣಾ ಕುಶಲ ಕರ್ಮಿ ಚೇಂಪಿ ಬಾಬುರಾಯ ಆಚಾರ್ಯ, ನಿರ್ಮಾಣ ಕಾರ್ಯದಲ್ಲಿ ಪರಂಪರೆಯಿಂದ ತೊಡಗಿಕೊಂಡಿರುವ ಮೊಗವೀರ ಬಂಧುಗಳು, ಅಚ್ಯುತ ಪೂಜಾರಿ, ವಿವಿಧ ಸಮುದಾಯಗಳಿಗೆ ಸೇರಿದ ಹಲವಾರು ಭಕ್ತರು ಉಪಸ್ಥಿತರಿದ್ದರು.
ಕೊಟ್ಟಿಗೆಯಿಂದ ರಥವು ಹೊರ ಬರುತ್ತಿದ್ದಂತೆ ಜೈ ಗುರು ನರಸಿಂಹ, ಜೈ ಆಂಜನೇಯ ಎಂಬ ಘೋಷಣೆಗಳೊಂದಿಗೆ ರಾಜಗೋಪುರದೆದರು ರಥವನ್ನು ತಂದಿರಿಸಲಾಯಿತು. ನೆರೆದಿದ್ದ ಎಲ್ಲ ಸದ್ಭಕ್ತರಿಗೆ ಪನಿವಾರ ಮತ್ತು ಪಂಚಕಜ್ಜಾಯವನ್ನು ವಿತರಿಸಲಾಯಿತು.










