ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಗೀತಾನಂದ ಪೌಂಡೇಶನ್ ಮಣೂರು, ಪಡುಕರೆ ರೋಟರಿ ಕ್ಲಬ್, ಹಂಗ ರಕಟ್ಟೆ ಸಾಸ್ತಾನ ನೆನಪು ಮೂವೀಸ್ ಕೋಟ, ಉಸಿರು ಕೋಟ, ಕೋಟ ಸಾರಥ್ಯದಲ್ಲಿ ಜನವರಿ 26ರಂದು ಕೋಟದ ಕಾರಂತ ಥೀಮ್ ಪಾರ್ಕಿನಲ್ಲಿ ನಡೆಯುವ ಸಮಗ್ರ ಶಿಕ್ಷಕರ ಸಾಹಿತ್ಯ ಸಮ್ಮೇಳನಕ್ಕೆ ಸರಕಾರಿ ಪದವಿ ಪೂರ್ವ ಕಾಲೇಜು ಕುಕ್ಕುಜೆ ಸಮಾಜ ಶಿಕ್ಷಕರಾದ ಸುರೇಶ್ ಮರಕಾಲ ಅವರನ್ನು ಆಯ್ಕೆ ಮಾಡಲಾಗಿದೆ.
ಬಹುರೂಪಿ ಶಿಕ್ಷಕರಾಗಿರುವ ಅವರು ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿ ಐದು ವಿದ್ಯಾರ್ಥಿಗಳನ್ನು ರಾಷ್ಟ್ರಮಟ್ಟಕ್ಕೆ. ಇಬ್ಬರು ವಿದ್ಯಾರ್ಥಿಗಳನ್ನು ಅಂತರಾಷ್ಟ್ರೀಯ ಮಟ್ಟಕ್ಕೆ, ಕೊಂಡೊಯ್ದು ಅವರ ಪ್ರತಿಭೆಗೆ ಅವಕಾಶ ನೀಡಿದವರು.
ಜೀವನ ಶಿಕ್ಷಣದ ವಿಶೇಷ ಶೈಕ್ಷಣಿಕ ಪ್ರಕಾರ ಪ್ರಕಾರದ ಹರಿಕಾರರು ಕಲಿಕೆಯನ್ನು ಲವಲವಿಕೆಯಿಂದ ಮೂಡಿಸುವ ಉದ್ದೇಶದಿಂದ ಔಪಚಾರಿಕ ಕಲಿಕೆಯ ಜೊತೆಗೆ ಶಾಡೋ ಪ್ಲೇ, ನಾಟಕ, ಪೇಪರ್ ಕ್ರಾಫ್ಟ್, ತೋಟಗಾರಿಕೆ, ಚಿತ್ರಕಲೆ ಕೊಳಲು ಕಲಿಕೆ, ವಿವೇಕ ರಾತ್ರಿ ತರಗತಿಗಳು ಮೊದಲಾದ ಕಲಿಕೆಯನ್ನು ವಿದ್ಯಾರ್ಥಿಯಲ್ಲಿ ಮೂಡಿಸಿದವರು.
ಪ್ರಕಟಣೆಯಲ್ಲಿ ಕಾರ್ಯಾಧ್ಯಕ್ಷ ಆನಂದ್ ಸಿ.ಕುಂದರ್, ಅಧ್ಯಕ್ಷ ಸತೀಶ್ ಭಾರಿಕೆರೆ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ರೋಟರಿ ಕ್ಲಬ್ ಅಧ್ಯಕ್ಷೆ ಜ್ಯೋತಿ, ಉದಯ ಪೂಜಾರಿ, ಕಾರ್ಯದರ್ಶಿ ಮುರಳಿದರ ನಾಹಿರಿ ತಿಳಿಸಿರುತ್ತಾರೆ.










