ಶ್ರದ್ಧೆ, ಪ್ರಾಮಾಣಿಕತೆಯ ಹಾದಿಯಲ್ಲಿ ಯಶಸ್ಸು: ಸಂತೋಷ್ ಕೋಣಿ

Click Here

Call us

Call us

Call us

ಕುಂದಾಪುರ: ಶ್ರದ್ಧೆ, ಪ್ರಾಮಾಣಿಕತೆಯ ಹಾದಿಯಲ್ಲಿ ನಂಬಿಕೆಯೊಂದಿಗೆ ಸಾಗಿದಾಗ ಯಶಸ್ಸು ಅರಸಿ ಬರುವಂತೆ ಕಲಾ ಜಗತ್ತಿನಲ್ಲಿ ನಿಷ್ಠೆ, ಪ್ರಾಮಾಣಿಕ ಪ್ರಯತ್ನ, ಅಚಲ ವಿಶ್ವಸದಿಂದ ಸುಂದರ ಕಲಾ ಜಗತ್ತನ್ನು ಸೃಷ್ಠಿಸಲು ಸಾಧ್ಯ ಎಂಬುದನ್ನು ಉಪ್ಪಿನಕುದ್ರು ಭಾಸ್ಕರ ಕಾಮತರು ತೋರಿಸಿಕೊಟ್ಟಿದ್ದಾರೆ ಎಂದು ಸುದ್ದಿಮನೆಯ ವಾರಪತ್ರಿಕೆ ಸಂಪಾದಕ ಸಂತೋಷ ಕೋಣಿ ಹೇಳಿದರು.

Call us

Click Here

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಡಿಸೆಂಬರ್ ತಿಂಗಳ ಕಾರ್ಯಕ್ರಮದಲ್ಲಿ ಗೊಂಬೆಮನೆ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಗೊಂಬೆಯಾಟ ಅಕಾಡೆಮಿ ಸ್ಥಾಪಿಸಿ ಪ್ರತಿಭಾನ್ವಿತರಿಗೆ ಅವಕಾಶ ಕಲ್ಪಿಸುವ ಜೊತೆಗೆ ಪರಿಸರದ ಜನರಿಗೆ ಕಲಾಪ್ರಪಪಂಚದ ಅನಾವರಣ ಮಾಡಿಸುತ್ತಿರುವುದು ಶ್ಲಾಘನೀಯ.

ನಿವೃತ್ತ ಪದವೀಧರ ಮುಖ್ಯೋಪಧ್ಯಾಯರಾದ ಟಿ. ವಿಷ್ಟು ಕಾಮತ್ ಹಾಗೂ ಯಕ್ಷಗಾನ ಕಲಾವಿದ ಹೆಮ್ಮಾಡಿ ರಾಮಚಂದ್ರ ಭಟ್ ಅವರನ್ನು ಸನ್ಮಾನಿಸಲಾಯಿತು. ನಾರಾಯಣ ಮೇಲಾಡಿ ಉಪಸ್ಥಿತರಿದ್ದರು. ಗೊಂಬೆಯಾಟ ಅಕಾಡೆಮಿಯ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಾಗೇಶ್ ಶ್ಯಾನುಭಾಗ್ ಕಾರ್ಯಕ್ರಮ ನಿರೂಪಿಸಿದ್ದರು. ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ವಿದ್ಯಾರ್ಥಿಗಳಿಂದ ’ವೀರಮಣಿ ಕಾಳಗ’ ಯಕ್ಷಗಾನ ಬಯಲಾಟ ಜರುಗಿತು.

_MG_6624

Leave a Reply