ಕುಂದಾಪ್ರ ಡಾಟ್ ಕಾಂ ಸುದ್ದಿ,
ಕೋಟ: ಕೋಟೇಶ್ವರ ಗ್ರಾಮದ ಮಾರ್ಕೋಡು ನಿವಾಸಿ ಗಣೇಶ ದೇವಾಡಿಗ (47) ಅವರು ಎದೆ ನೋವಿನಿಂದ ಇತ್ತೀಚಿಗೆ ಮೃತಪಟ್ಟಿದ್ದಾರೆ.
ಅವರು ಕೋಟೇಶ್ವರ ಹಳವಳ್ಳಿ ಬೀಚ್ ರಸ್ತೆಯ ಬಳಿ ಗ್ಯಾರೇಜ್ ನಲ್ಲಿ ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದು ರಾತ್ರಿ ಕೆಲಸ ಮುಗಿಸಿ ಕುಂದಾಪುರ ವಿನಾಯಕ ಜಂಕ್ಷನ್ ಬಳಿ ಆಟೋದಲ್ಲಿ ಕುಳಿತು ಎದೆ ನೋವು ಆಗುತ್ತಿರುವುದಾಗಿ ತಿಳಿಸಿದಾಗ ಅವರನ್ನು ಕುಂದಾಪುರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.










