ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ತಮಿಳುನಾಡಿನ ಪಾಂಡಿಚೇರಿಯಲ್ಲಿ ನಡೆದ 21ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ಸ್ ಸ್ಪರ್ಧೆ- 2026ಯಲ್ಲಿ ಸಹೋದರರಾದ ವಿನಿಶ್ ಕುಮಾರ್ ದ್ವಿತೀಯ ಸ್ಥಾನ ಹಾಗೂ ಅನ್ವಿಶ್ ಕುಮಾರ್ ಪ್ರಥಮ ಸ್ಥಾನವಾದ ವಿನ್ನರ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಕಾವ್ರಾಡಿಯ ವಿಜಯ್ ಕುಮಾರ್ ಹಾಗೂ ಗಂಗೊಳ್ಳಿಯ ಅನುಷಾ ಸಿ. ಬಂಗೇರಾ ದಂಪತಿಗಳ ಪುತ್ರರಾಗಿರುವ ಅವರು ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ 6 ಮತ್ತು 2ನೇ ತರಗತಿಯ ವಿದ್ಯಾರ್ಥಿಗಳು.
ಕುಂದಾಪುರ ಅಬಾಕಸ್ ಸಂಸ್ಥೆಯ ಮುಖ್ಯಸ್ಥರಾದ ಪ್ರಸನ್ನ ಕೆ. ಬಿ. ಹಾಗೂ ಗಂಗೊಳ್ಳಿ ಸೆಂಟರ್ ಶಿಕ್ಷಕಿಯಾದ ಸುನೀತಾ ತರಬೇತಿ ನೀಡಿದ್ದರು.










