Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹುಲಿಕಲ್‌ ನಾಗಭೂಷಣ ರಾವ್‌ ನಿಧನ
    ಊರ್ಮನೆ ಸಮಾಚಾರ

    ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹುಲಿಕಲ್‌ ನಾಗಭೂಷಣ ರಾವ್‌ ನಿಧನ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಕೊನೆಯ ಕೊಂಡಿ ಎಂದು ಭಾವಿಸಲಾಗಿದ್ದ ಹುಲಿಕಲ್ ನಾಗಭೂಷಣ ರಾವ್ ತಮ್ಮ 105ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು.

    Click Here

    Call us

    Click Here

    ಕೋಟೇಶ್ವರದ ಅಂಕದಕಟ್ಟೆಯ ಸರ್ಜನ್ ಆಸ್ಪತ್ರೆಯ ಡಾ| ವನಿತಾಲಕ್ಷ್ಮೀ ಅವರ ತಂದೆ ಹಾಗೂ ಸರ್ಜನ್ ಡಾ| ವಿಶ್ವೇಶ್ವರ ಅವರ ಮಾವನಾಗಿರುವ ಎಚ್. ನಾಗಭೂಷಣ ರಾವ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ, ಜೈಲು ಶಿಕ್ಷೆ ಅನುಭವಿಸಿದವರು. ದೇಶಕ್ಕಾಗಿ ತಮ್ಮ ಉದ್ಯೋಗವನ್ನೂ ಕಳೆದುಕೊಂಡವರು. ಸಮಾಜವಾದಿಯಾಗಿ ಶಿವಮೊಗ್ಗದ ಪ್ರಮುಖ ಸಾಮಾಜಿಕ ಧುರೀಣರ ಸಾಲಿನಲ್ಲಿ ನಿಂತವರು.

    ಪ್ರಧಾನಿ ಇಂದಿರಾ ಗಾಂಧಿ ಅವರಿಗೆ “ತಾಮ್ರ ಪತ್ರ” ನೀಡಿ ಸನ್ಮಾನಿಸಿದರೆ, ಕರ್ನಾಟಕ ರಾಜ್ಯಪಾಲರು ಅವರನ್ನು ಹಲವು ಬಾರಿ ಗೌರವಿಸಿದ್ದಾರೆ. ಅವರಲ್ಲಿ ಹನ್ಸರಾಜ್ ಭಾರಧ್ವಾಜ್, ಈಗಿನ ಥಾವರ್ ಚಂದ್ ಗೆಹ್ಲೋಟ್‌ರಿಗೆ ನಾಗಭೂಷಣ ರಾವ್ ಬಗ್ಗೆ ಅಪಾರ ಗೌರವ.

    ತೀರ್ಥಹಳ್ಳಿಯಲ್ಲಿ ಜನಿಸಿದ ಅವರು ಶಿಕ್ಷಣ, ಉದ್ಯೋಗ, ಚಳವಳಿಗಾಗಿ ಬೆಂಗಳೂರು, ಮೈಸೂರು ತಿರುಗಿದವರು. ಸಾಲಿಗ್ರಾಮ ಕಾರ್ಕಡದ ನಿರ್ಮಲಾ ಉಪಾಧ್ಯಾಯರೊಂದಿಗೆ ವಿವಾಹವಾಗಿ ಹುಟ್ಟೂರಿನಲ್ಲಿ ಇದ್ದು, ಪ್ರಗತಿಪರ ರೈತರೆನಿಸಿಕೊಂಡರೂ, ನಂತರ ಮಕ್ಕಳ ಭವಿಷ್ಯಕ್ಕಾಗಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನೆಲೆಸಿದರು.

    ಧಾರ್ಮಿಕ ಸಂಪ್ರದಾಯಗಳ ಆಚರಣೆ ಅಧ್ಯಯನದೊಂದಿಗೆ ಶಿಸ್ತಿನ ಜೀವನ. ಹಲವು ಉದ್ಯೋಗದಲ್ಲಿ ಅನುಭವ ಪಡೆದವರು. ವ್ಯವಹಾರವನ್ನೂ ನಡೆಸಿದವರು. ಪರೋಪಕಾರ, ದಾನ ಧರ್ಮಗಳಲ್ಲಿ ಆಸಕ್ತಿ. ಪತ್ನಿಯನ್ನು ಕಳೆದುಕೊಂಡ ಅವರಿಗೆ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರ ಇದ್ದಾರೆ. ಮಕ್ಕಳು ವೈದ್ಯರಾಗಿದ್ದರೂ ಅವರು ಜೀವನದಲ್ಲಿ ಔಷಧ ಸೇವಿಸಿದವರಲ್ಲ,

    Click here

    Click here

    Click here

    Click Here

    Call us

    Call us

    ಇವರದ್ದು ಯೋಗಿಯ ಜೀವನ. ಬಹು ಭಾಷಾ ಪರಿಣಿತರು. ರಾಜಕೀಯ, ಸಾಮಾಜಿಕ ವಿಷಯಗಳಲ್ಲಿ ಬಹಳ ಆಸಕ್ತಿ ಹೊಂದಿದವರು. ತಮ್ಮ ಕುಟುಂಬಕ್ಕಾಗಿ ಸಾಕಷ್ಟು ತ್ಯಾಗ ಮಾಡಿರುವ ಅವರು ಅನ್ಯಾಯದ ವಿರುದ್ಧ ಜನರಿಗಾಗಿ ನ್ಯಾಯಾಲಯದಲ್ಲೂ ಹೋರಾಡಿ ಗೆದ್ದವರು. ಭ್ರಷ್ಟಾಚಾರದ ವಿರೋಧಿ, ಅನುಕರಣೀಯ ಜೀವನ ನಡೆಸಿದ ಅವರು ಜನ್ಮ ಶತಮಾನೋತ್ಸವ ಪೂರೈಸಿದ್ದರೂ ತಮ್ಮ ಕೆಲಸ ತಾವೇ ನಿರ್ವಹಿಸುವಷ್ಟು ಶಕ್ತಿವಂತರಾಗಿದ್ದರು. ಕೂಟ ಮಹಾ ಜಗತ್ತಿನ ಸದಸ್ಯರೂ ಆಗಿದ್ದ ಅವರ ಅಗಲಿಕೆ ಓರ್ವ ಆದರ್ಶ ನಾಯಕ, ಸ್ವಾತಂತ್ರ್ಯ ಹೋರಾಟಗಾರರನ್ನು ಕಳೆದುಕೊಂಡಂತಾಗಿದೆ.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಒಡಗಿನ ಶ್ರೀ ನಂದಿಕೇಶ್ವರ ದೇವಸ್ಥಾನದ ಕೆರೆ ಹಸ್ತಾಂತರ ಕಾರ್ಯಕ್ರಮ

    21/05/2026

    ಕ್ಯಾಂಪಸ್ ನೇಮಕಾತಿಯಲ್ಲಿ ಮಿಂಚಿದ ಐಎಂಜೆಐಎಸ್‌ಸಿಯ ದ್ವಿತೀಯ ವರ್ಷದ 30 ವಿದ್ಯಾರ್ಥಿಗಳು

    21/05/2026

    ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ

    21/05/2026
    Leave A Reply Cancel Reply

    7 + 2 =

    Call us

    Click Here

    Call us

    Call us

    Call us
    Highest Viewed Recently
    • ಒಡಗಿನ ಶ್ರೀ ನಂದಿಕೇಶ್ವರ ದೇವಸ್ಥಾನದ ಕೆರೆ ಹಸ್ತಾಂತರ ಕಾರ್ಯಕ್ರಮ
    • ಕ್ಯಾಂಪಸ್ ನೇಮಕಾತಿಯಲ್ಲಿ ಮಿಂಚಿದ ಐಎಂಜೆಐಎಸ್‌ಸಿಯ ದ್ವಿತೀಯ ವರ್ಷದ 30 ವಿದ್ಯಾರ್ಥಿಗಳು
    • ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ
    • 21ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಳ್ವಾಸ್ ವಿದ್ಯಾರ್ಥಿನಿಯರು
    • ಕುಂದಾಪುರ: ಬಲಾಡಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.