ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಟೀಮ್ ಗಾನ ನಿನಾದ ಆರ್ಕೆಸ್ಟ್ರಾ ಪಾಂಡೇಶ್ವರ ಸಾಸ್ತಾನ ಇದರ ದಶಮಾನೋತ್ಸವ ಸಂಭ್ರಮದ ಅಂಗವಾಗಿ ರಾಜ್ಯಮಟ್ಟದ ಕರೋಕೆ ಗಾಯನ ಸ್ಪರ್ಧೆ ಕಾರ್ಯಕ್ರಮ ಫೆ.21ರಂದು ಸಾಸ್ತಾನದ ಪಾಂಡೇಶ್ವರ ಶಾಲಾ ವಠಾರದಲ್ಲಿ ಆಯೋಜಿಸಿದ್ದಾರೆ.
ಈ ಹಿನ್ನಲ್ಲೆಯಲ್ಲಿ ಇದರ ಪೋಸ್ಟರ್ ಅನಾವರಣವನ್ನು ಕೋಟದ ಅಮೃತೇಶ್ವರಿ ದೇಗುಲದ ಸಭಾಂಗಣದಲ್ಲಿ ಮಣೂರು ಗೀತಾನಂದ ಪೌಂಡೇಶನ್‌ನ ಪ್ರವರ್ತಕ ಆನಂದ್ ಸಿ. ಕುಂದರ್ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಶ್ರೀಶ ಆಚಾರ್ಯ ಪಾಂಡೇಶ್ವರ, ಗಾಯಕ ಜನಾರ್ಧನ್ ಕುಂಭಾಶಿ, ಭವ್ಯ, ಕನಸು, ಅಮೃತೇಶ್ವರಿ ದೇಗುಲದ ಟ್ರಸ್ಟಿ ಚಂದ್ರ ಆಚಾರ್ಯ ಕೋಟ, ಸುಭಾಷ್ ಶೆಟ್ಟಿ, ಸ್ಥಳೀಯರು ಉಪಸ್ಥಿತರಿದ್ದರು ಹಾಗೂ ಫೆ.21 ರಂದು ಕಾರ್ಯಕ್ರಮದ ಜಿಲ್ಲೆ ಹಾಗೂ ರಾಜ್ಯಾದಂತ್ಯ ಗಾಯಕರ ಸಮ್ಮುಖದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆ ತಿಳಿಸಿದ್ದಾರೆ.










