ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಪಾಂಡೇಶ್ವರ ಗಾನ ನಿನಾದ ಆರ್ಕೆಸ್ಟ್ರಾ ಇದರ ದಶಮಾನೋತ್ಸವ ಅಂಗವಾಗಿ ಆಯೋಜಿಸಿರುವ ರಾಜ್ಯಮಟ್ಟದ ಕರೋಕೆ ಗಾಯನ ಸ್ಪರ್ಧೆಯ ಆಯ್ಕೆ ಪ್ರಕ್ರೀಯೆ ಪಾಂಡೇಶ್ವರ ಶಾಲೆ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಉಡುಪಿ ಭವಾನಿ ಬಿಲ್ಲ್ದೆರ್ಸ್ ಮಾಲಿಕ ಪುನೀತ್ ಕುಮಾರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಾಂಡೇಶ್ವರ ಪಂಚಾಯತ್ ಅಧ್ಯಕ್ಷೆ ಸುಶೀಲ ಪೂಜಾರಿ, ಅಭಿವೃದ್ದಿ ಅಧಿಕಾರಿ ವಂದನ, ಸದಸ್ಯರಾದ ರವೀಶ್ ಶ್ರೀಯಾನ್, ಉದ್ಯಮಿ ರಾಜ, ಶ್ರೀ ಕ್ಷೇತ್ರ ಪಾಂಡೇಶ್ವರ ಕಳಿಬೈಲು ಧರ್ಮದರ್ಶಿ ಅಭಿಜಿತ್ ಪಾಂಡೇಶ್ವರ ಹಾಗೂ ತೀರ್ಪುಗಾರಗಾಗಿ ರವಿ ಕಾರಂತ್, ಕೋಟ, ಅಖಿಲಾ ಹೆಗ್ಡೆ, ಸಂಸ್ಥೆಯ ಸಾರಥಿ ಶ್ರೀಶ ಆಚಾರ್ಯ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ರಾಘವೇಂದ್ರ ರಾಜ್ ನಿರೂಪಿಸಿದರು. ಈ ಸ್ಪರ್ಧೆಯಲ್ಲಿ ಜಿಲ್ಲೆಯಾದ್ಯಾಂತ 100 ಕ್ಕೂ ಅಧಿಕ ಮಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಅಂತಿಮ ಆಯ್ಕೆ ಸುತ್ತು ಇದೇ ಫೆ. 21ನೇ ಶನಿವಾರ ರಾತ್ರಿ ನೆಡೆಯುವ ಫೈನಲ್ ಸ್ಪರ್ಧೆಗೆ 10 ಜನರನ್ನು ಆಯ್ಕೆ ಮಾಡಲಾಗುವದು ಎಂದು ಸಂಸ್ಥೆ ತಿಳಿಸಿದೆ.










