ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಹಲವು ಸಮಯಗಳಿಂದ ಗ್ರಾಮಸ್ಥರಿಗೆ ಕಗ್ಗಂಟ್ಟಾಗಿರುವ ಇ. ಸ್ವತ್ತು ಸಮಸ್ಯೆಯನ್ನು ಬಗೆಹರಿಸಿ ಅಲ್ಲದೆ ಪಂಚಾಯತ್ ವ್ಯಾಪ್ತಿಯಲ್ಲಿ ಸರಕಾರದ ವಿವಿಧ ವಸತಿ ಯೋಜನೆಗಳ ಹಣ ಬಿಡುಗಡೆಗೊಳಿಸಿ ಎಂಬ ಕೂಗು ಕೋಟತಟ್ಟು ಗ್ರಾಮಪಂಚಾಯತ್‌ನಲ್ಲಿ ಕೇಳಿಬಂತು.
ಶನಿವಾರ ಕೋಟತಟ್ಟು ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ಸಭಾಭವನದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಇದರ ಜಮಾಬಂದಿ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಭಾಗವಹಿಸಿ ಜಮಾಬಂದಿ ಅಧಿಕಾರಿ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಬಳಿ ತಮ್ಮ ಅಹವಾಲನ್ನು ತೊಡಿಕೊಂಡರು.

ಈ ಬಗ್ಗೆ ಮಾಹಿತಿ ನೀಡಿದ ಬಾಯಲ್ ರವರು ಈ ಹಿಂದೆ ಇದ್ದ ಕೆಲವು ಸಮಸ್ಯೆಗಳನ್ನು ಸರಿಪಡಿಸಲು ಹೊಸ ತಂತ್ರಾಂಶಗಳ ಮೂಲಕ ಈ ಸ್ವತ್ತನ್ನು ಜಾರಿಗೊಳಿಸಲಾಗಿದೆ. ಕೆಲವೆ ತಿಂಗಳುಗಳಲ್ಲಿ ಈ ಸಮಸ್ಯೆ ಬಗೆಹರಿಯಲಿದೆ ಎಂದರಲ್ಲದೆ, ಬಸವ ವಸತಿ ಸೇರಿದಂತೆ ಯಾವಾವ ವಸತಿ ಯೋಜನೆಗಳ ಹಣ ಬಾಕಿ ಇರಿಸಲಾಗಿದೆ ಅದರ ಬಗ್ಗೆ ಸಮಗ್ರ ವರದಿ ನೀಡಿ ಈ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಕೋಟತಟ್ಟು ಗ್ರಾಮಪಂಚಾಯತ್ ಅತ್ಯುತ್ತಮ ಕಾರ್ಯನಿರ್ವಣೆಯ ಪಂಚಾಯತ್ ಎಂಬ ಹೆಗ್ಗಳಿಕೆ ಇದೆ ಆದರೆ ಕೇಂದ್ರ ಅಥವಾ ರಾಜ್ಯ ಸರಕಾರದ ವಿವಿಧ ಪುರಸ್ಕಾರ ಪಡೆಯಲು ಅರ್ಹವಾಗಿದ್ದು ಕೆಲವೊಂದು ತೊಡಕುಗಳನ್ನು ಎದುರಿಸುತ್ತಿದ್ದು ಅದನ್ನು ಮುಂದಿನ ದಿನಗಳಲ್ಲಿ ಸಮರ್ಪಕಗೊಳಿಸಲು ಸೂಚಿಸಿದರು.
ಪಂಚಾಯತ್ ವ್ಯಾಪ್ತಿಯ ಸಾಕಷ್ಟು ಅರ್ಹ ಫಲಾನುಭವಿ ಕುಟುಂಬಗಳ ರೇಷನ್ ಕಾಡ್೯ ರದ್ಧಿತಯ ಬಗ್ಗೆ ಪಂಚಾಯತ್ ಪ್ರತಿನಿಧಿಗಳು ಸಿ.ಎಸ್. ಪತ್ರೀಕ್ ಬಾಯಲ್ ರ ಬಳಿ ಗಮನ ಸೆಳೆದರು. ಈ ಬಗ್ಗೆ ಅರ್ಹ ಫಲಾನುಭವಿಗಳ ರೇಷನ್ ಕಾಡ್೯ಗಳ ಬಗ್ಗೆ ವಾಡ್೯ ಸಭೆಗಳಲ್ಲಿ ನಿರ್ಣಯ ಕೈಗೊಂಡು ಅರ್ಹ ಅಥವಾ ಅನರ್ಹ ಫಲಾನುಭವಿಗಳ ಬಗ್ಗೆ ನೀವುಗಳೇ ವಿಮರ್ಶಿಸಿ ನಮ್ಮಗೆ ವರದಿ ನೀಡಿ ಪಡಿತರವನ್ನು ರಾಜಮಾರ್ಗದಲ್ಲೆ ಅಂಗಡಿಗೆ ಕೊಂಡ್ಯೋಯುವ ಅಂತಹ ಕಾಡ್೯ ರದ್ದುಗೊಳಿಸುವುದಾಗಿ ಎಚ್ಚರಿಸಿದರು.
ಪ್ರತಿ ತಿಂಗಳಿಗೊಮ್ಮೆ ಗ್ರಾಮಸಭೆ ಅಥವಾ ವಾಡ್೯ ಸಭೆಗಳನ್ನು ಆಯೋಜಿಸಬಹುದು ಈ ಮೂಲಕ ಗ್ರಾಮದಲ್ಲಿರುವ ಸಮಸ್ಯೆಗಳಿಗೆ ಮುಕ್ತಿಗಾಣಸಬಹುದಾಗಿದೆ ಎಂದು ಪಂಚಾಯತ್ ಆಡಳಿತ ಕಾರ್ಯವೈಕರಿಯನ್ನು ಸಭೆಯಲ್ಲಿ ಪ್ರಶಂಸಿದರು.
ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಮಾತನಾಡಿ, ನಮ್ಮ ಪಂಚಾಯತ್‌ಗೆ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಇದೀಗ ಎರಡನೇ ಬಾರಿ ಭೇಟಿ ನೀಡುತ್ತಿದ್ದು ಅವರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ಪಂಚಾಯತ್ ಆಡಳಿತ ವ್ಯವಸ್ಥೆಯನ್ನು ಉತ್ತುಂಗಕ್ಕೆ ಕೊಂಡ್ಯೋಯುತ್ತಿದ್ದೇವೆ, ನಮ್ಮ ಪಂಚಾಯತ್ ಗೆ ಈಗಾಗಲೇ ಜಿಲ್ಲೆಯ ಅಥವಾ ಬೇರೆ ಬೇರೆ ಜಿಲ್ಲೆಗಳ ಗ್ರಾಮಪಂಚಾಯತ್ ಪ್ರತಿನಿಧಿಗಳು ಭೇಟಿ ನೀಡುತ್ತಿದ್ದು ಇಲ್ಲಿನ ಆಡಳಿತ ಅಭಿವೃದ್ಧಿ ವೈಕರಿಯನ್ನು ಪ್ರಶಂಸಿದ್ದಾರೆ ಇದು ಕೋಟತಟ್ಟು ಪಂಚಾಯತ್‌ಗೆ ಹೆಮ್ಮೆಯ ವಿಚಾರವಾಗಿದೆ ಎಂದರು.
ಉಪಾಧ್ಯಕ್ಷೆ ಸರಸ್ವತಿ ಪೂಜಾರಿ,ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಜಮಾಬಂದಿ ನಾಲ್ಕೂರು ಪಂಚಾಯತ್ ಕಾರ್ಯದರ್ಶಿ ಜ್ಯೋತಿ ಶೆಟ್ಟಿ, ವಿವೇಕ ಪದವಿ ಕಾಲೇಜಿನ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಸುಬ್ರಹ್ಮಣ್ಯ ಜೆ. ಜಮಾಬಂದಿ ವರದಿ ಮಂಡಿಸಿದರು. ಜಮಾಬಂದಿ ಕಾರ್ಯಕ್ರಮವನ್ನು ಪಂಚಾಯತ್ ಪಿಡಿಒ ರವೀಂದ್ರ ರಾವ್ ನಿರ್ವಹಿಸಿದರು. ಕಾರ್ಯದರ್ಶಿ ಸುಮತಿ ಅಂಚನ್ ವಂದಿಸಿದರು.
















