ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಉತ್ತಮ ಕರ್ತವ್ಯ ನಿರ್ವಹಣೆಗೆ ಪ್ರಶಸ್ತಿ ಪಡೆದ ಪೋಸ್ಟ್‌ಮೆನ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಲ್ಲೂರಿನಲ್ಲಿ ನಡೆದಿದೆ. ಮೃತರನ್ನು ಕೊಲ್ಲೂರಿನ ರವೀಂದ್ರ ಎಂಬವರ ಮಗ ಮಂಜುನಾಥ ಕೆ. ಆರ್. (31) ಎಂದು ಗುರುತಿಸಲಾಗಿದೆ.
ಕೊಲ್ಲೂರಿನಲ್ಲಿ ಪೋಸ್ಟ್‌ಮೆನ್ ಆಗಿ ಕೆಲಸ ಮಾಡಿಕೊಂಡಿದ್ದ ಅವರಿಗೆ ಸುಮಾರು 4 ತಿಂಗಳ ಹಿಂದೆ ಉತ್ತಮ ಅಂಚೆ ಕರ್ತವ್ಯ ಮಾಡಿದ ಕಾರಣಕ್ಕೆ ಪ್ರಶಸ್ತಿ ದೊರೆತಿತ್ತು. ಬಳಿಕ ಕೊಲ್ಲೂರಿನಲ್ಲಿಯೂ ಈ ಬಗ್ಗೆ ಸನ್ಮಾನ ಮಾಡಲಾಗಿತ್ತು.
ನಂತರ ಜೀವನದಲ್ಲಿ ಜಿಗುಪ್ಸೆಗೊಂಡು ಕೊಲ್ಲೂರಿನ ಮಹಾಲಕ್ಷ್ಮಿ ಹೊಟೇಲ್ ಹಿಂಬದಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










