ಕುಂದಾಪುರ: ಕುಂದಾಪುರ ಸುತ್ತಲಿನ ಪರಿಸರದ ಜನತೆಗಾಗಿ ಚಿನ್ಮಯ ಆಸ್ಪತ್ರೆಯಲ್ಲಿ ಚರ್ಮದ ವಿವಿಧ ಕಾಯಿಲೆಗಳ ನಿವಾರಣೆ ಹಾಗೂ ಸೌಂದರ್ಯವರ್ಧಕ ಚಿಕಿತ್ಸೆಗಳಿಗಾಗಿ ಲೇಸರ್, ಡರ್ಮಾಟೋಸರ್ಜರಿ ಹಾಗೂ ಕಾಸ್ಮಟಾಲಜಿ ವಿಭಾಗ ಆರಂಭಗೊಳ್ಳುತ್ತಿದೆ ಎಂದು ಚಿನ್ಮಯಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಉಮೇಶ್ ಪುತ್ರನ್ ತಿಳಿಸಿದ್ದಾರೆ.
ಡಿ. 27ರಂದು ನಡೆಯುವ ಕಾರ್ಯಕ್ರಮದಲ್ಲಿ ಬೆಂಗಳೂರು ಕ್ಯೂಟಿಸ್ ಅಕಾಡೆಮಿ ಆಫ್ ಕ್ಯೂಟನಿಯಸ್ ಸೈನ್ಸ್‌ನ ಚೀಪ್ ಡರ್ಮಾಟೋಲೊಜಿಸ್ಟ್ ಡಾ. ಚಂದ್ರಶೇಖರ್ ಬಿ.ಎಸ್. ಚಿನ್ಮಯ ಆಸ್ಪತ್ರೆಯಲ್ಲಿ ಈ ವಿಭಾಗವನ್ನು ಉದ್ಘಾಟಿಸಲಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ದಿನಮಾನಗಳಲ್ಲಿ ಈ ಚಿಕಿತ್ಸೆ ಸೌಂದರ್ಯಪ್ರಿಯರಿಗೆ ವರದಾನವಾಗಲಿದೆ. ಮಹಿಳೆಯರ ಮುಖ ಹಾಗೂ ದೇಹದ ಮೇಲಿರುವ ಹೆಚ್ಚುವರಿ ಕೂದಲು, ಮುಖದ ಮೊಡವೆಯಿಂದಾದ ಹೊಂಡದ ಕಲೆಗಳು, ಗಾಯದಿಂದ ಉಂಟಾದ ಕಲೆಗಳು, ಸ್ತ್ರೀಯರ ಮುಖದ ಮೇಲೆ ಕಂಡುಬರುವ ಕಪ್ಪು ಬಣ್ಣದ ಕರಂಗಲ, ಕಪ್ಪು ಚುಕ್ಕೆಗಳು, ಮಚ್ಚೆಗಳು, ಕೃತಕವಾಗಿ ಹಾಕಿಸಿಕೊಂಡ ಟ್ಯಾಟೋ, ಜಿಡ್ಡು, ನೆರಿಗೆಗಟ್ಟಿದ ಮುಖ. ಹೀಗೆ ನಾನಾ ತರಹದ ಸಮಸ್ಯೆಗಳಿಗೆ ಈ ಚಿಕಿತ್ಸೆಯಿಂದ ಪರಿಹಾರ ಕಂಡಕೊಳ್ಳಬಹುದಾಗಿದೆ.
ಚಿಕಿತ್ಸೆಗೆ ಮೊದಲು ವೈದ್ಯರ ಸಲಹೆಯಂತೆ ಅನುಸರಿಸಬೇಕಾದ ಕ್ರಮಗಳನ್ನು ಪಾಲಿಸಿದರೇ ಚಿಕಿತ್ಸೆ ಪಲಪ್ರದವಾಗಲಿದೆ. ತೊನ್ನು ಚಿಕಿತ್ಸೆಗಾಗಿ ಫೋಟೋಥೆರಪಿ ಯಂತ್ರವನ್ನೂ ಅಳವಡಿಸಲಾಗಿದೆ. ಇದರೊಂದಿಗೆ ಚರ್ಮದ ವಿವಿಧ ರೀತಿಯ ಶಸ್ತ್ರ ಚಿಕಿತ್ಸೆಗಳು, ಫಿಲ್ಲರ‍್ಸ್, ಬೊಟಾಕ್ಸ್ ಸೇರಿದಂತೆ ಅನೇಕ ಚಿಕಿತ್ಸೆ ಚರ್ಮಸಂಬಂಧಿ ರೋಗಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.