ಸಡಗರ, ಸಂಭ್ರಮದ ಕ್ರಿಸ್‌ಮಸ್, ಏಸುಕ್ರಿಸ್ತನ ಜನ್ಮದಿನ

Call us

Call us

Call us

Call us

Call us

ಸಡಗರ, ಸಂಭ್ರಮದ ಕ್ರಿಸ್‌ಮಸ್ ಮತ್ತೆ ಬಂದಿದೆ. ಶುಭಾಶಯ ವಿನಿಮಯ, ಉಡುಗೊರೆ, ಸಂಗೀತ, ಚರ್ಚ್ ಗಳಲ್ಲಿ ಉತ್ಸವ, ವಿಶೇಷ ಭೋಜನ, ತಿಂಡಿ-ತಿನಿಸುಗಳಿಂದ ಮನೆಗಳನ್ನು ಉತ್ಸವವಾಗಿಸುವ; ಗೋದಲಿ-ಕ್ರಿಸ್‌ಮಸ್ ಟ್ರೀ ಮೊದಲಾದವುಗಳನ್ನು ದೀಪದಿಂದ ಅಲಂಕರಿಸಿ, ಕ್ರಿಸ್ಮಸ್ ತಾತ ‘ಸಾಂತಾ ಕ್ಲಾಸ್’ರನ್ನು ಬರಮಾಡುವ, ‘ಕ್ರಿಸ್ಮಸ್ ಟೈಡ್’ನ್ನು ಸಂಭ್ರಮ-ಪ್ರಾರ್ಥನೆಗಳಿಂದ ತುಂಬಿತುಳುಕಿಸುವ ವಾರ್ಷಿಕ ಪರ್ವ ಇದು.

Call us

Click Here

Click here

Click Here

Call us

Visit Now

Click here

ಕ್ರಿಸ್‌ಮಸ್ ಇತಿಹಾಸ

ವಿಶ್ವಾದ್ಯಂತ ಈ ದಿನವನ್ನು ಕ್ರೈಸ್ತ ಧರ್ಮದಲ್ಲಿ ದೇವಪುತ್ರ ಎಂದು ನಂಬಲಾಗಿರುವ ಏಸುವಿನ ಜನ್ಮದಿನವಾಗಿ ಆಚರಿಸ ಲಾಗುತ್ತಿದೆ. ಆದರೆ, ಮೂಲತಃ ಏಸುಕ್ರಿಸ್ತ ಹುಟ್ಟಿದ ನಿಖರ ದಿನಾಂಕದ ಬಗ್ಗೆ ವಿವಿಧ ವಾದಗಳಿವೆ. ಆದಾಗ್ಯೂ, ಹಳೆ ಕಾಲದ ಕ್ರಿಸ್ತನ ಅನುಯಾಯಿಗಳು ಪಾಲಿಸುತ್ತಿದ್ದ ಪ್ರಾಚೀನ ರೋಮನ್ ಕ್ಯಾಲೆಂಡರ್‌ನ ಪ್ರಕಾರ ಉತ್ತರಾಯಣ ಸಂಕ್ರ ಮಣದ 9 ತಿಂಗಳ ಬಳಿಕ(ಅಂದರೆ, ಕ್ರಿಸ್ತನ ಪುನರುಜ್ಜೀವನ ವಾಗಿರುವುದೆಂದು ನಂಬಲಾಗಿರುವ ಮಾರ್ಚ್ 25ರ ಒಂಬತ್ತು ತಿಂಗಳ ಬಳಿಕ) ಅಥವಾ ಪ್ರಾಚೀನ ಚಳಿಗಾಲದಲ್ಲಿನ ಒಂದು ಹಬ್ಬದ ಸಮಯದಲ್ಲಿ ಬೆತ್ಲಹೆಮ್ ನಲ್ಲಿನ ಹಟ್ಟಿಯೊಂದರಲ್ಲಿ ಕನ್ಯಾ ಮೇರಿಯು ಏಸುಕ್ರಿಸ್ತುವಿಗೆ ಜನ್ಮ ನೀಡಿದಳು.

ಕ್ರಿಸ್‌ಮಸ್ ಆಚರಣೆ:
ಕ್ರಿಸ್‌ಮಸ್ ದಿನಾಚರಣೆ ಕೇವಲ ಕ್ರೈಸ್ತ ದೇಶಗಳಿಗೆ ಸೀಮಿತವಾದ ಹಬ್ಬವಲ್ಲ. ಬದಲಾಗಿ, ಪ್ರಪಂಚದ ಹಲ ವಾರು ಕ್ರೈಸ್ತೇತರ ರಾಷ್ಟ್ರಗಳಲ್ಲಿಯೂ ಕ್ರಿಸ್‌ಮಸ್ ಆಚರಣೆ ಚಾಲ್ತಿಯಲ್ಲಿದೆ. ಕ್ರಿಸ್‌ಮಸ್ ಸಂದರ್ಭದಲ್ಲಿ ವಿವಿಧ ಕ್ರೈಸ್ತ ಆಚರಣೆಗಳನ್ನು ಆ ಪ್ರದೇಶ ಹಾಗೂ ಧಾರ್ಮಿಕತೆಯನ್ನಿಟ್ಟು ಕೊಂಡು ನಡೆಸಲಾಗುತ್ತದೆ. ಈಸ್ಟರ್‌ನಂತೆಯೇ ಕ್ರಿಸ್ ಮಸ್ ಕೂಡಾ ಚರ್ಚುಗಳಲ್ಲಿ ವಾರ್ಷಿಕ ವಿಶೇಷ ಪೂಜೆಗಳಿಗೆ ಸಾಕ್ಷಿಯಾಗು ತ್ತದೆ. ಕ್ರಿಸ್‌ಮಸ್‌ನ ಮುನ್ನಾ ದಿನ ತಡರಾತ್ರಿಯವರೆಗೆ ಪ್ರಾರ್ಥನೆಗಳು ನಡೆಯು ತ್ತವೆ ಹಾಗೂ ಏಸು ಹುಟ್ಟಿದ ಕ್ಷಣದ ನಿರೀಕ್ಷೆ ಯಲ್ಲಿ ಕ್ರೈಸ್ತರು ವಿಶೇಷ ಪ್ರಾರ್ಥನೆಯಲ್ಲಿ ತೊಡಗುತ್ತಾರೆ. ಕೆಲವೊಂದು ಕ್ರೈಸ್ತ ಧರ್ಮೀಯ ದೇಶಗಳಲ್ಲಿ ಕ್ರಿಸ್ ಮಸ್‌ನ ಮುನ್ನಾದಿನ ಮೆರವಣಿಗೆ ಅಥವಾ ಪರೇಡ್‌ಗಳನ್ನೂ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಭಾವೈಕ್ಯತೆ ಬಿಂಬಿಸುವ ಸ್ತಬ್ಧ ಚಿತ್ರಗಳು, ಸಾಂತಾಕ್ಲಾಸ್‌ನ ವೇಷಧಾರಿಗಳು ಪ್ರಮುಖ ಸ್ಥಾನವನ್ನು ಪಡೆಯುತ್ತಾರೆ.
ಯಾವುದೇ ಧಾರ್ಮಿಕ ಹಬ್ಬಗಳು ಸಂಪೂರ್ಣವಾಗುವುದು ಕುಟುಂಬಗಳ ಪರಸ್ಪರ ಸಮ್ಮಿಲನವಾದಾಗ ಮಾತ್ರ. ಕ್ರಿಸ್ ಮಸ್ ಕುಟುಂಬ ಸಮ್ಮಿಲನದ, ಕೌಟುಂಬಿಕ ಸಂಭ್ರಮದ ಹಬ್ಬ. ಕುಟುಂಬದ ಸದಸ್ಯರು ಉಡುಗೊರೆ-ಶುಭಾಶಯ ಗಳನ್ನು ಈ ಹಬ್ಬದ ಸಮಯದಲ್ಲಿ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ಕೆಲವೊಂದು ಕಡೆಗಳಲ್ಲಿ ಮಕ್ಕಳು ಏಸುವಿನ ಜನನ ಕಥೆಯ ನಾಟಕ ಗಳನ್ನು ಮಾಡುತ್ತಾ, ಕೆರೋಲ್‌ಗಳನ್ನು ಹಾಡುತ್ತಾರೆ. ಹೆಚ್ಚಿನ ಕಡೆ ಕ್ರಿಸ್‌ಮಸ್ ಸಂದರ್ಭದಲ್ಲಿ ಚರ್ಚುಗಳ ಹೊರಭಾಗ ದಲ್ಲಿ, ಮನೆಗಳ ಅಂಗಳದಲ್ಲಿ ‘ಗೋದಲಿ’ ನಿರ್ಮಾಣ ಮಾಡುತ್ತಾರೆ. ಈ ಗೋದಲಿಗಳಲ್ಲಿ ಕ್ರಿಸ್ತನು ಹುಟ್ಟಿದಾಗ ಇದ್ದಿರಬಹುದಾದಂತಹ ಹಟ್ಟಿ, ಅಲ್ಲಿನ ಕುರಿಗಳು, ಸಂಭ್ರಮ ಗಳ ವಾತಾವರಣವನ್ನು ರೂಪಿಸುತ್ತಾರೆ. ಆಲಂಕಾರಿಕ ನಕ್ಷತ್ರ ದೀಪಗಳನ್ನು ಗೋದಲಿಗಳಲ್ಲಿ, ಮನೆಗಳಲ್ಲಿ, ಚರ್ಚುಗಳಲ್ಲಿ ಹಾಗೂ ರಸ್ತೆಗಳಲ್ಲಿ ನೇತುಹಾಕಲಾಗುತ್ತದೆ.

ಪ್ರಾಚೀನ ಕಾಲದ ಕ್ರೈಸ್ತ ಅನುಯಾಯಿಗಳಂತೆ, ಇಂದಿಗೂ ಪ್ರಚಲಿತದಲ್ಲಿರುವ ರೀತಿಯಲ್ಲಿ ಕ್ರಿಸ್‌ಮಸ್‌ಗೆ ಪೂರಕ ವೆಂಬಂತೆ ಏಸುವಿನ ಜನನದ ಘಟನಾವಳಿಗಳನ್ನು ಕುಂಚದಲ್ಲಿ ಚಿತ್ರೀಕರಿಸುವುದು ಕ್ರೈಸ್ತ ಧರ್ಮಾನುಯಾಯಿಗಳ ಅನನ್ಯತೆಗಳ ಲ್ಲೊಂದು. ಈ ಚಿತ್ರಕಲೆಗಳಲ್ಲಿ ಪ್ರಮುಖವಾಗಿ ಹಟ್ಟಿಯಲ್ಲಿ ಏಸುವಿಗೆ ಜನ್ಮ ನೀಡಿದ ಕನ್ಯಾಮೇರಿ, ಜೋಸೆಫ್, ಬಾಲ ಏಸು, ದೇವತೆಗಳು, ಏಸುವಿನ ಜನನದ ಬಳಿಕ ‘ಬೆತ್ಲಹೆಮ್‌ನ ತಾರೆ’ಯನ್ನು ಹುಡುಕಿ ಬಂದ ಕುರುಬರು ಹಾಗೂ ಮೂವರು ಪಂಡಿತರನ್ನು ಕುಂಚದಲ್ಲಿ ಮೂಡಿಸಲಾಗುತ್ತದೆ.

Call us

ಕ್ರಿಸ್‌ಮಸ್ ವಿಶೇಷ ವರ್ಣಚಿತ್ರಗಳು:
ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರಗಳನ್ನು ಮಾಡುವುದಕ್ಕೆ ಹಲವು ವರ್ಷಗಳ ಇತಿಹಾಸವಿದೆ. ಇದರಲ್ಲಿ ಪ್ರಮುಖವಾಗಿ ಏಸುವಿನ ಜನನ ದೃಶ್ಯಗಳನ್ನು ಮೂಡಿಸು ವುದು. 1223ರಲ್ಲಿ ಅಸ್ಸೀಸಿಯಲ್ಲಿನ ಸಂತ ಫ್ರಾನ್ಸಿಸ್ ಎಂಬಾತ ನಿಂದ ಈ ಅಲಂಕಾರ ಸಂಪ್ರದಾಯ ಜನಪ್ರಿಯಗೊಂಡಿತು. ಸ್ಥಳೀಯ ಸಂಪ್ರದಾಯಗಳಿಗೆ ಒತ್ತು ಕೊಟ್ಟು ಈ ಅಲಂಕಾರ ಗಳನ್ನು ನಡೆಸಲಾಗುತ್ತದೆ. ಕ್ರಿಸ್‌ಮಸ್‌ಗೆ ಹೊಂದಿಕೊಂಡಿರುವಂತೆ ಹಸಿರು ಬಣ್ಣ ಗಳಿಗೂ ವಿಶೇಷ ಮಹತ್ವವಿದೆ. ಕೆಂಪು ಬಣ್ಣವು ಶಿಲುಬೆಗೇರಿಸಿ ದಾಗ ಕ್ರಿಸ್ತನಿಂದ ಹರಿದ ರಕ್ತವನ್ನು ಸೂಚಿಸಿದರೆ, ಹಸಿರು ಏಸುವಿನ ಪರಿಪೂರ್ಣ ಬದುಕನ್ನು ತಿಳಿಸುತ್ತದೆ.

ಕ್ರಿಸ್‌ಮಸ್ ಟ್ರೀ:
ಆಧುನಿಕ ಕ್ರಿಸ್‌ಮಸ್ ಟ್ರೀ ಎಂಬ ಪರಿಕಲ್ಪನೆಯು ಮೊದಲು ಹುಟ್ಟಿದ್ದು 18ನೆಯ ಶತಮಾನದಲ್ಲಿ ಜರ್ಮನಿ ಯಲ್ಲಿ. ಬಳಿಕ ಈ ಕ್ರಿಸ್‌ಮಸ್ ಟ್ರೀಯನ್ನು ಅಲಂಕಾರಗೊಳಿ ಸುವುದನ್ನು ಇಂಗ್ಲೆಂಡ್‌ನಲ್ಲಿಯೂ ಮುಂದುವರಿಸಲಾಯಿತು. 19ನೆಯ ಶತಮಾನದ ಬಳಿಕ ಮೆಕ್ಸಿಕೊದಲ್ಲಿನ ‘ಪಾಇನ್‌ಸೆಟಿಯ’ ಎಂಬ ಮರವೊಂದನ್ನು ಕ್ರಿಸ್‌ಮಸ್ ಟ್ರೀ ಎಂದು ಕರೆಯಲಾಯಿತು. ನೈಜಮರಗಳನ್ನೇ ಅಂದು ಅಲಂಕಾರಗೊಳಿಸುತ್ತಿದ್ದರೆ, ಇಂದು ಕೃತಕ ಮರಗಳ ಮೊರೆ ಹೋಗಲಾಗುತ್ತಿದೆ. ಕೃತಕ ಮರಗಳನ್ನು ಚರ್ಚುಗಳ ಒಳ- ಹೊರಭಾಗದಲ್ಲಿ, ಮನೆಗಳಲ್ಲಿ, ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಕೆಲವೊಂದು ಕಂಪೆನಿಗಳಲ್ಲಿ ಸ್ಥಾಪಿಸಿ, ಅವುಗಳಲ್ಲಿ ಆಲಂಕಾರಿಕ ದೀಪಗಳನ್ನಿರಿಸಿ, ಹೂವುಗಳನ್ನು ಪೋಣಿಸಿ ಒಂದು ಬಗೆಯ ‘ನಾಸ್ಟಾಲ್ಜಿಕ್’ ವಾತಾವರಣ ನಿರ್ಮಾ ಣವಾಗುವಂತೆ ಮಾಡಲಾಗುತ್ತದೆ.

ಸಂಗೀತ ಮತ್ತು ಕೆರೋಲ್‌ಗಳು:
ನಾಲ್ಕನೆಯ ಶತಮಾನದಲ್ಲಿ ಮೊತ್ತಮೊದಲನೆಯ ಬಾರಿಗೆ ಕ್ರಿಸ್‌ಮಸ್‌ನ ವಿಶೇಷ ಸ್ತೋತ್ರಗಳು ರೋಮ್‌ನಲ್ಲಿ ರಚನೆ ಯಾಯಿತು. ಬಳಿಕ ಒಂಬತ್ತನೆ ಹಾಗೂ ಹತ್ತನೆ ಶತಮಾನ ದಲ್ಲಿನ ಉತ್ತರ ಯುರೋಪ್‌ನಲ್ಲಿ ಕ್ರಿಸ್‌ಮಸ್‌ನ ವಿಶೇಷ ‘ಗದ್ಯ’ಗಳನ್ನು ರಚಿಸಿ, ಅವುಗಳನ್ನು ಸ್ತೋತ್ರದಂತೆ ಮಾರ್ಪಡಿಸಿ ದವರು ಕ್ಲೇರ್‌ವಾಕ್ಸ್‌ನ ಬರ್ನಾರ್ಡ್ ಎಂಬವರು. ಆದರೆ, 13ನೆ ಶತಮಾನದಲ್ಲಿ ಅಸ್ಸೀಸಿಯಲ್ಲಿನ ಸಂತ ಫ್ರಾನ್ಸಿಸರ ಪ್ರಭಾವದಿಂದಾಗಿ ಪ್ರಮುಖವಾಗಿ ಇಟಲಿ, ಜರ್ಮನಿ ಹಾಗೂ ಫ್ರಾನ್ಸ್‌ನ ಸ್ಥಳೀಯ ಭಾಷೆಗಳಲ್ಲೇ ಕ್ರಿಸ್‌ಮಸ್ ಗೀತೆಗಳನ್ನು ಹಾಡುವಂತಹ ಸಂಪ್ರದಾಯ ಆರಂಭವಾ ಯಿತು. ಇದೇ ಹಿನ್ನೆಲೆಯಲ್ಲಿ ‘ಕ್ರಿಸ್‌ಮಸ್ ಕೆರೋಲ್’ಗಳನ್ನು 1426ರಲ್ಲಿ ಜಾನ್ ಔಡ್ಲೇ ಎಂಬವರು ರಚಿಸಿದರು.

ಕೆರೋಲ್‌ಗಳೆಂಬುದು ಸೌಹಾರ್ದತೆ ಸಂದೇಶ ಸಾರುವ ಕ್ರಿಸ್‌ಮಸ್ ಹಾಡುಗಳು. ಕ್ರಿಸ್‌ಮಸ್‌ಗಿಂತ ಹಲವು ದಿನಗಳ ಮುಂಚೆಯೇ ಆರಂಭವಾಗುವ ಈ ಒಂದು ಸಂಪ್ರದಾಯ ದಲ್ಲಿ ಯುವಕರ ಗುಂಪುಗಳು ತಮ್ಮ ಪ್ರದೇಶದ ಮನೆಮನೆಗೂ ಕೆರೋಲ್‌ಗಳನ್ನು ಹಾಡುತ್ತಾ ತೆರಳಿ ಕ್ರಿಸ್‌ಮಸ್‌ನ ಸಂಭ್ರಮದ, ಹಬ್ಬದ ಸೌಹಾರ್ದತೆಯ ಸಂದೇಶವನ್ನು ಸಾರುತ್ತಾರೆ. ತಮ್ಮದೇ ವಿಶಿಷ್ಟ ಸಂಗೀತವಿರುವ ಈ ಕೆರೋಲ್ ಗಳನ್ನು ಕ್ರೈಸ್ತ ಪ್ರಭಾವವಿರುವ ಎಲ್ಲೆಡೆಯೂ ಕ್ರಿಸ್‌ಮಸ್‌ಗೆ ಮುಂಚಿತವಾಗಿ ರಾತ್ರಿಗಳಲ್ಲಿ ಹಾಡಲಾಗುತ್ತದೆ. ಇಂದಿಗೂ ಕೂಡ ಈ ಕೆರೋಲ್‌ಗಳನ್ನು ಹಾಡುವು ದೆಂದರೆ ಯುವಕರಿಗೊಂದು ಸಂಭ್ರಮವೇ ಸರಿ.

ಕ್ರಿಸ್‌ಮಸ್ ವಿಶೇಷ ಭೋಜನ:

ಕ್ರೈಸ್ತ ಕುಟುಂಬಗಳಲ್ಲಿ ವಿಶೇಷ ಭೋಜನ ಕ್ರಿಸ್‌ಮಸ್‌ಗೆ ಸಂಬಂಧಿಸಿದ ಪ್ರಮುಖ ಸಂಪ್ರದಾಯಗಳಲ್ಲೊಂದು. ಈ ಭೋಜನದಲ್ಲಿ ಒಳಗೊಳ್ಳುವ ವಿವಿಧ ಖಾದ್ಯಗಳು ದೇಶದಿಂದ ದೇಶಕ್ಕೆ ವಿಭಿನ್ನವಾದರೂ, ಸಂಪ್ರದಾಯ ಒಂದೇ. ಹಲವು ಬಗೆಯ ತಿಂಡಿಗಳು, ಕ್ರಿಸ್‌ಮಸ್‌ಗೆಂದೇ ತಯಾರಾಗುವ ಕರಿದ ತಿನಿಸುಗಳು, ಕೇಕ್‌ಗಳು ಹಾಗೂ ಚಳಿಗಾಲದ ಸಮಯದಲ್ಲಿ ಲಭ್ಯವಾಗುವ ವಿಶೇಷ ಹಣ್ಣುಹಂಪಲುಗಳು ಕ್ರಿಸ್‌ಮಸ್ ಭೋಜನದ ಭಾಗವಾಗುತ್ತದೆ.

ಉಡುಗೊರೆ ಹಾಗೂ ಶುಭಾಶಯ ವಿನಿಮಯ:
ಕುಟುಂಬ ಸಮ್ಮಿಲನ, ಶುಭಾಶಯ ವಿನಿಮಯ ಹಾಗೂ ಉಡುಗೊರೆ ನೀಡುವಿಕೆ ಕ್ರಿಸ್‌ಮಸ್‌ನ ಸಂಭ್ರಮಾಚರಣೆ ಯಲ್ಲಿ ಮುಖ್ಯಪಾತ್ರವನ್ನು ಹೊಂದಿದೆ. ಉಡುಗೊರೆಗಳಲ್ಲಿ ಮುಖ್ಯವಾಗಿ ಕ್ರೈಸ್ತ ಹಾಗೂ ಪುರಾಣ ಗಳಿಗೆ ಸಂಬಂಧಿಸಿದ ವಸ್ತುಗಳೂ ಮೇಲುಗೈ ಪಡೆಯುತ್ತವೆ. ಅದರಲ್ಲೂ ಪ್ರಮುಖವಾಗಿ ಸಾಂತಾಕ್ಲಾಸ್, ಸಂತ ನಿಕೋಲಸ್, ಸಂತ ಬಾಸಿಲ್ ಮೊದಲಾದವರ ಪ್ರತಿಮೆಗಳು ಹೆಚ್ಚಾಗಿ ಉಡುಗೊರೆಯಾಗಿ ನೀಡುವಂತವುಗಳು. ಈ ಉಡುಗೊರೆ ಸಂಪ್ರದಾಯದಿಂದಾಗಿಯೇ ಕ್ರಿಸ್‌ಮಸ್‌ನ ಸಂದರ್ಭಗಳು ವಿಶ್ವಾದ್ಯಂತದ ವ್ಯಾಪಾರಿಗಳಿಗೆ ಸುಗ್ಗಿಯ ಕಾಲ.

ಪುಟಾಣಿಗಳ ಹೀರೋ ಸಾಂತಾಕ್ಲಾಸ್
ಸಾಂತಾಕ್ಲಾಸ್ ಎಂಬುದು ಕ್ರಿಸ್‌ಮಸ್ ತಾತನೆಂದು ಕರೆಯಲಾಗುವ ಸಂತ ನಿಕೋಲಸ್ ಅಥವಾ ಕ್ರಿಸ್ ಕ್ರಿನ್‌ಗ್ಲೆಗಿರುವ ಪ್ರೀತಿಯ ಹೆಸರು. ‘ಸಂತಾ’ ಎಂಬುದು ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಐತಿಹ್ಯವಾಗಿರುವ ಡಚ್ ದಂತಕತೆ ಸಿಂಟರ್‌ಕ್ಲಾಸ್ ಎಂಬವನನ್ನು ನೆನಪಿಸುವಂತಹ ಒಂದು ಪಾತ್ರ. ಈ ಸಾಂತಾಕ್ಲಾಸ್ ಕ್ರಿಸ್‌ಮಸ್‌ನ ಮುನ್ನಾದಿನವಾದ ಡಿ.24ರಂದು ಸಂಜೆ ಮನೆಮನೆಗೆ ತೆರಳಿ ಅಲ್ಲಿರುವ ಪುಟಾಣಿಗಳಿಗೆ ಉಡುಗೊರೆ, ಸಿಹಿತಿಂಡಿ ನೀಡುತ್ತಿ ದ್ದನಂತೆ. ಅದನ್ನು ನೆನಪಿಸುವ ಸಲುವಾಗಿ ಇಂದಿಗೂ ಸಾಂತಾಕ್ಲಾಸ್ ವೇಷ ಮಕ್ಕಳಿಗೆ ಬಲುಪ್ರೀತಿ.

ವಿಶೇಷವೆಂದರೆ, ‘ಸಿಂಟರ್‌ಕ್ಲಾಸ್’ ಸಂತ ನಿಕೋಲಸ್ ಬಿಷಪ್‌ಗಳ ಶಿರವಸ್ತ್ರವನ್ನು ಅಥವಾ ‘ರೋಬ್’ನ್ನು ಬಳಸುತ್ತಿದ್ದನಂತೆ. ಆದರೆ, ಇಂದು ಸಾಂತಾಕ್ಲಾಸ್ ಎಂಬುದು ಸಾಮಾನ್ಯವಾಗಿ ಸ್ವಲ್ಪ ಡೊಳ್ಳುಹೊಟ್ಟೆಯ, ದಪ್ಪ ದೇಹದ, ಉಡುಗೊರೆ- ಸಿಹಿತಿಂಡಿಗಳ ಜೊತೆಗೆ ಖುಷಿಯನ್ನು ಹಂಚುವ, ಬಿಳಿ ಗಡ್ಡ ಬಿಳಿಪಟ್ಟಿ ಹಾಗೂ ಕಾಲರ್ ಇರುವ ಕೆಂಪು ಕೋಟೊಂದನ್ನು ಧರಿಸಿರುವ ವ್ಯಕ್ತಿ.

ಹನ್ನೆರಡು ದಿನಗಳ ‘ಕ್ರಿಸ್‌ಮಸ್‌ಟೈಡ್’
ಕ್ರಿಸ್‌ಮಸ್ ದಿನದಿಂದ(ಅಥವಾ ಡಿ.24ರ ರಾತ್ರಿಯಿಂದ ಹಿಡಿದು) ಬಳಿಕದ 12 ದಿನಗಳ ಕಾಲವನ್ನು ‘ಕ್ರಿಸ್‌ಮಸ್‌ಟೈಡ್’ ಎನ್ನುತ್ತಾರೆ. 12ನೆ ದಿನವಾದ ಜನವರಿ 5ರಂದು ರಾತ್ರಿ ‘ಎಪಿಫನಿ’ ಅಥವಾ ದೇವ ಸಾಕ್ಷಾತ್ಕಾರದ ದಿನವನ್ನು ಆಚರಿಸುವುದರೊಂದಿಗೆ ಆ ವರ್ಷದ ಕ್ರಿಸ್‌ಮಸ್ ಆಚರಣೆಗೆ ಅಧಿಕೃತ ತೆರೆಬೀಳುತ್ತದೆ. ಕ್ರಿಸ್‌ಮಸ್ ದಿನವನ್ನು ಸಾಕ್ಷಾತ್ಕಾರದ ದಿನದೊಂದಿಗೆ ಬೆಸೆಯುವ ಈ ‘ಕ್ರಿಸ್‌ಮಸ್‌ಟೈಡ್’ ಸಂಪೂರ್ಣ ಭಕ್ತಿಪ್ರಧಾನ ಹಾಗೂ ಆಚರಣೆ, ಸಂಭ್ರಮದ ಕಾಲ.

ಸಮಸ್ತ ಕ್ರೈಸ್ತ ಭಾಂಧವರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು

Leave a Reply

Your email address will not be published. Required fields are marked *

8 + 9 =