Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕುಂದಾಪುರದಲ್ಲಿ ಕೋಣಿ ಶಿವಾನಂದ ಕಾರಂತರಿಗೆ ಸಾರ್ವಜನಿಕ ನುಡಿ ನಮನ
    ಊರ್ಮನೆ ಸಮಾಚಾರ

    ಕುಂದಾಪುರದಲ್ಲಿ ಕೋಣಿ ಶಿವಾನಂದ ಕಾರಂತರಿಗೆ ಸಾರ್ವಜನಿಕ ನುಡಿ ನಮನ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಸಾಹಿತಿ, ವಾಗ್ಮಿ, ವಿಮರ್ಶಕ, ಅಂಕಣಗಾರರಾಗಿ ಸಾಹಿತ್ಯ ಲೋಕಕ್ಕೆ ಬಹು ದೊಡ್ಡ ಕೊಡುಗೆ ನೀಡಿದವರು ಕೋಣಿ ಶಿವಾನಂದ ಕಾರಂತರು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು

    Click Here

    Call us

    Click Here

    ಅವರು ಕುಂದಾಪುರದ ಶ್ರೀ ಕುಂದೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕೋಣಿ ಶಿವಾನಂದ ಕಾರಂತರಿಗೆ ಸಾರ್ವಜನಿಕ ನುಡಿ ನಮನ ಕಾರ್ಯಕ್ರಮದಲ್ಲಿ ಕಾರಂತರ ಸಾಧನೆ ಬಣ್ಣಿಸಿದರು. ಅಧ್ಯಯನಶೀಲರಾಗಿ ತಮ್ಮ ಪಾಂಡಿತ್ಯದಿಂದ ಯುವ ಬರಹಗಾರರಿಗೆ ಪ್ರೇರಣೆ ತುಂಬುತ್ತಿದ್ದ ಕಾರಂತರು ಹಲವಾರು ಲೇಖಕರ ಕೃತಿಗಳ ವಿಮರ್ಶೆ ಮಾಡಿ ತಿದ್ದಿ ಪ್ರೋತ್ಸಾಹಿಸುವ ಮೂಲಕ ಸ್ಫೂರ್ತಿ ತುಂಬುತ್ತಿದ್ದರು. ಅವರ ಪ್ರಕಟಿತ ಕೃತಿಗಳು ಅಮೂಲ್ಯವಾಗಿದ್ದವು.

    ಗಂಗೊಳ್ಳಿಯಲ್ಲಿ ನಡೆದ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ “ಗಂಗಾವಳಿ” ಸಮಾರಂಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಕೋ. ಶಿವಾನಂದ ಕಾರಂತರ ಕುರಿತು ಪುಸ್ತಕ ಪ್ರಕಟಣೆ ಮಾಡಿದ್ದೆವು. ಅವರ ಅಗಲಿಕೆ ಕುಟುಂಬಕ್ಕೆ ಮಾತ್ರವಲ್ಲ ಸಮಾಜಕ್ಕೂ ದೊಡ್ಡ ನಷ್ಟ. ಅವರ ಅಮೂಲ್ಯ ಮಾರ್ಗದರ್ಶನ ಸ್ಮರಿಸೋಣ ಎಂದರು.

    ಕಮಲಾಕರ ಚಿಕ್ಕಮಗಳೂರು ಅವರು ಭಾವಗೀತೆ ಮೂಲಕ ಕಾರಂತರಿಗೆ ನುಡಿ ನಮನ ಸಲ್ಲಿಸಿದರು.

    ಗಂಗೊಳ್ಳಿ ಎಸ್. ವಿ. ಶಾಲಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಕಾಶೀನಾಥ ಪೈ ಮಾತನಾಡಿ, “ನಾಲ್ಕು ದಶಕಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಕಾರಂತರು ಸಂಸ್ಥೆಗೆ ಕೀರ್ತಿ ತರುವಂತಹ ಸೇವೆ ಸಲ್ಲಿಸಿದ್ದರು” ಎಂದರು.

    Click here

    Click here

    Click here

    Click Here

    Call us

    Call us

    ಉಡುಪಿಯ ಸಾಹಿತಿ ಸಂಧ್ಯಾ ಶೆಣೈ ಮಾತನಾಡಿ, “ಶಿವಾನಂದ ಕಾರಂತರು ನಮ್ಮಂತಹ ಉದಯೋನ್ಮುಖ ಸಾಹಿತಿಗಳಿಗೆ ತಮ್ಮ ಪ್ರೀತಿ, ವಿಶ್ವಾಸ, ಮಾರ್ಗದರ್ಶನ ನೀಡಿ ಸ್ಫೂರ್ತಿ ತುಂಬಿದವರು” ಎಂದು ನಮನ ಸಲ್ಲಿಸಿದರು.

    ಹಿರಿಯ ಲೇಖಕಿ, ನಿವೃತ್ತ ಪ್ರಾಧ್ಯಾಪಕಿ ರೇಖಾ ಬನ್ನಾಡಿ ಮಾತನಾಡಿ, “ನಮ್ಮನ್ನೆಲ್ಲ ತಮ್ಮ ಕುಟುಂಬ ಸದಸ್ಯರು ಎಂಬ ಭಾವನೆಯಿಂದ ಅವರು ಗೌರವಿಸುತ್ತಿದ್ದರು. ಭಂಡಾರ್‌ಕಾರ‍್ಸ್ ಕಾಲೇಜಿನ ಸಾಹಿತ್ಯ, ರಂಗ ಚಟುವಟಿಕೆಗಳಿಗೆ ಪ್ರೇರಕರಾಗಿದ್ದರು. ಅವರೊಬ್ಬ ಪ್ರತಿಭಾವಂತ ಶಿಕ್ಷಕರು” ಎಂದರು.

    ನಿವೃತ್ತ ಪ್ರಾಂಶುಪಾಲ ನಾರಾಯಣ ಹೆಬ್ಬಾರ್ ಮಾತನಾಡಿ, “ಭಂಡಾರ್‌ಕಾರ‍್ಸ್ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಕಾರಂತರು ವಿದ್ಯಾರ್ಥಿ ಜೀವನದಿಂದ ಕೊನೆ ತನಕ ನಿರಂತರ ಬಾಂಧವ್ಯ ಇರಿಸಿಕೊಂಡು ಖುಷಿ ನೀಡಿದವರು. ಅವರೊಂದಿಗೆ ಯಾವುದೇ ವಿಷಯದಲ್ಲಿ ವಿಚಾರ ವಿಮರ್ಶೆ ಮಾಡುವುದೇ ಖುಷಿಯ ವಿಷಯವಾಗಿತ್ತು” ಎಂದರು.

    ಚಲನಚಿತ್ರ ನಿರ್ದೇಶಕ ರಾಜ್ ಬಲ್ಲಾಳ್ ಮಾತನಾಡಿ, “ನಾಟಕ, ಚಲನಚಿತ್ರ ಎಲ್ಲಾ ವಿಷಯದಲ್ಲೂ ಐದು ದಶಕಗಳ ಬಾಂಧವ್ಯ ನಮ್ಮದು. ವಿಮರ್ಶಾತ್ಮಕವಾಗಿ ವಿವರಿಸಿ ಅರಿವು ಮೂಡಿಸುತ್ತಿದ್ದರು” ಎಂದರು.

    ಮೈಲಾರೇಶ್ವರ ಯುವಕ ಮಂಡಲದ ಪರವಾಗಿ ಮಾತನಾಡಿದ ವರದರಾಜ್ ಪೈ “ಕಾರಂತರ ತಿಳುವಳಿಕೆಯ ಮಾತುಗಳು ಸದಾ ಮನಸ್ಸಿನಲ್ಲಿ ಮೂಡುತ್ತಾ ಇರುತ್ತದೆ” ಎಂದರು.

    ಎಸ್. ವಿ. ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಆರ್. ಎನ್. ರೇವಣ್‌ಕರ್ ಮಾತನಾಡಿ, “ಯಾರನ್ನೂ ದ್ವೇಷಿಸದ, ಯಾರ ಬಗ್ಗೆಯೂ ಕೆಟ್ಟ ಮಾತನಾಡದ ಅಪೂರ್ವ ವ್ಯಕ್ತಿತ್ವ ಕಾರಂತರದ್ದು. ಅತ್ಯಂತ ಪ್ರೀತಿಯಿಂದ ಕರೆಯುತ್ತಿದ್ದ ಅವರು ನಮ್ಮೊಂದಿಗೆ ಆತ್ಮೀಯತೆ ಹೊಂದಿದ್ದವರು” ಎಂದರು.

    ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಂದ ಕುಂದ ಸೋಮಶೇಖರ ಶೆಟ್ಟಿ ಮಾತನಾಡಿ, “ಕಾರಂತರು ಓರ್ವ ಆದರ್ಶ ಶಿಕ್ಷಕ, ಅನುಕರಣೀಯ ಪಂಡಿತ” ಎಂದು ಬಣ್ಣಿಸಿದರು.

    ಕೋ. ರಮಾನಂದ ಕಾರಂತ ಸ್ವಾಗತಿಸಿದರು. “ಕುಂದಪ್ರಭ” ಸಂಸ್ಥೆಯ ಅಧ್ಯಕ್ಷ ಯು. ಎಸ್. ಶೆಣೈ ನಿರೂಪಿಸಿದರು. ವಿವಿಧ ಸಂಘ ಸಂಸ್ಥೆಗಳ ನೂರಾರು ಗಣ್ಯರು ಭಾಗವಹಿಸಿ ಕಾರಂತರಿಗೆ ನಮನ ಸಲ್ಲಿಸಿದರು. ವಿದ್ಯಾ ಕಾದಂಬರಿ ವಂದಿಸಿದರು.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ

    21/05/2026

    ಕುಂದಾಪುರ: ಬಲಾಡಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ

    21/05/2026

    ಶಂಕರನಾರಾಯಣ: ಕಟ್ಟೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶಿಲಾದೇಗುಲ ಲೋಕಾರ್ಪಣೆ

    21/05/2026
    Leave A Reply Cancel Reply

    seven + three =

    Call us

    Click Here

    Call us

    Call us

    Call us
    Highest Viewed Recently
    • ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ
    • 21ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಳ್ವಾಸ್ ವಿದ್ಯಾರ್ಥಿನಿಯರು
    • ಕುಂದಾಪುರ: ಬಲಾಡಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ
    • ಶಂಕರನಾರಾಯಣ: ಕಟ್ಟೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶಿಲಾದೇಗುಲ ಲೋಕಾರ್ಪಣೆ
    • ಬಹುಮಾನ ಹಣ ಮಂಜೂರು: ಅರ್ಜಿ ಆಹ್ವಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.