ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಸಿದ್ಯಾಪುರ ಗ್ರಾಮದ ಐರಬೈಲು ನಿವಾಸಿ, ಅಡಿಕೆ ವ್ಯಾಪಾರಿ ಗಣೇಶ ನಾಯಕ್ (62) ಅವರು ಖಿನ್ನತೆಗೆ ಒಳಗಾಗಿ ಮನೆಯ ಹಿಂಭಾಗದ ಶೆಡ್ ನಲ್ಲಿ ನೇಣು ಬಿಗಿದುಕೊಂಡು ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರು ಐರಬೈಲಿನಲ್ಲಿ ಅಡಿಕೆ ವ್ಯಾಪಾರ ಮಾಡಿಕೊಂಡಿದ್ದು, ಫೆ.25ರಂದು ಬ್ರಹ್ಮಾವರದಲ್ಲಿ ನಡೆದ ಮದುವೆ ಸಮಾರಂಭವನ್ನು ಮುಗಿಸಿಕೊಂಡು ಪತ್ನಿ ಜತೆಯಲ್ಲಿ ಮನೆಗೆ ವಾಪಾಸು ಬಂದಿದ್ದರು. ನಂತರ ಅವರು ಕಾಣೆಯಾಗಿದ್ದನ್ನು ಗಮನಿಸಿದ ಪತ್ನಿ ಸವಿತಾ ನಾಯಕ್ ಅವರು ಸಾಕಷ್ಟು ಹುಡುಕಾಡಿದಾಗ ಮನೆಯ ಹಿಂಬದಿ ಜೀಪ್ ನಿಲ್ಲಿಸಲು ಮಾಡಿದ ಸಿಮೆಂಟ್ ತಗಡಿನ ಶೇಡ್ ನ ಬಳಿ ಹೋದಾಗ ಅಲ್ಲಿ ಸಿಮೆಂಟ್ ತಗಡಿನ ಶೇಡ್ ನ ಮಾಡಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಅವರ ಪುತ್ರ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










