ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು 2025ರಲ್ಲಿ ನಡೆಸಿದ ಅಂತಿಮ ಪದವಿ ಪರೀಕ್ಷೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿಗೆ ಮೂರು ರ‍್ಯಾಂಕ್‌ಗಳು ದೊರಕಿವೆ.
ಬಿ.ಬಿ.ಎ ಪದವಿ ವಿಭಾಗದಲ್ಲಿ ಕೋಟೇಶ್ವರದ ಸೂರ್ಯನಾರಾಯಣ ಅಡಿಗ ಅವರ ಪುತ್ರಿ ಶ್ರಾವ್ಯ ಎಸ್.ಅಡಿಗ ಅವರಿಗೆ ಆರನೇ ರ‍್ಯಾಂಕ್, ಬಿ.ಸಿ.ಎ. ವಿಭಾಗದಲ್ಲಿ ಮರವಂತೆಯ ಮೋಹನದಾಸ ಶೆಣೈ ಅವರ ಪುತ್ರಿ ಶ್ರಾವ್ಯ ಶೆಣೈ ಅವರಿಗೆ ಎಂಟನೇ ರ‍್ಯಾಂಕ್ ಮತ್ತು ತೆಕ್ಕಟ್ಟೆಯ ರಾಘು ಅವರು ಪುತ್ರಿ ರಕ್ಷಿತಾ ಅವರಿಗೆ ಒಂಬತ್ತನೇ ರ್ಯಾಂಕ್ ದೊರೆತಿದೆ.
ಅವರಿಗೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಮತ್ತು ವಿಶ್ವಸ್ಥ ಮಂಡಳಿ ಬೋಧಕ ಬೋಧಕೇತರರು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










